Wednesday, October 5, 2022

ಪುತ್ತೂರಿನಲ್ಲಿ ವಸತಿ ಸಮುಚ್ಛಯದ ಮಹಡಿಯ ಮೇಲಿಂದ ಬಿದ್ದು ಪ್ರೌಢಶಾಲಾ ವಿದ್ಯಾರ್ಥಿ ಗಂಭೀರ..!

ಪುತ್ತೂರು : ವಸತಿ ಸಮುಚ್ಛಯದ ಮಹಡಿಯ ಮೇಲಿಂದ ಬಿದ್ದು ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸಂಭವಿಸಿದೆ.

ತಾಲೂಕಿನ ಬೊಳುವಾರು ಮಲರಾಯ ದೈವಸ್ಥಾನದ ಬಳಿಯ ಇರುವ ವಸತಿ ಸಮುಚ್ಛಯದ ಬಳಿ ಈ ದುರ್ಘಟನೆ ನಡೆದಿದೆ.

ಇಲ್ಲಿನ ಪ್ರೌಢಶಾಲೆಯೊಂದರ 9 ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈತ ತನ್ನ ವಸತಿ ಸಮುಚ್ಛಯದ ಬಳಿ ಇರುವ ಸ್ನೇಹಿತನ ಮನೆಗೆ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ.

ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ವೈಷ್ಣೋದೇವಿ ಮಂದಿರಕ್ಕೆ ಕರೆದೊಯ್ಯುವುದಾಗಿ 38 ಸಾವಿರ ರೂ. ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುತ್ತೇನೆಂದು ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರೂ.38 ಸಾವಿರ ವಂಚನೆಗೈದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ IT consultant...

ರಾವಣ ದಹನ ವೇಳೆ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅವಘಡ

ಚಂಡೀಘಡ: ವಿಜಯದಶಮಿ ನಿಮಿತ್ತ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಹಲವರಿಗೆ ಸುಟ್ಟ ಗಾಯಗಳಾದ ಬಗ್ಗೆ ವರದಿಯಾಗಿದೆ.ಹರ್ಯಾಣದ ಯಮುನಾನಗರದಲ್ಲಿ ಆಯೋಜಿಸಲಾಗಿದ್ದ ರಾವಣ ದಹನ ಕಾರ್ಯಕ್ರಮದ...

ದೇವಳದ ಅಂಗಳದಲ್ಲಿ ಐಟಂ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ ಆವರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿ ಕೆಂಗಣ್ದಣಿಗೆ ಗುರಿಯಾದ ಘಟನೆ  ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೋಮದಿರುವ ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ...