Connect with us

LATEST NEWS

ರೀಲ್ಸ್ ರಾಣಿಯ ಐಷಾರಾಮಿ ಜೀವನದ ಗುಟ್ಟು ರಟ್ಟು; ಇವಳ ಅಸಲಿ ಕಥೆ ಗೊತ್ತಾ ?

Published

on

ಕೇರಳ: ರೀಲ್ಸ್ ನೋಡಿ ಸ್ಟಾರ್ ಆಗಲು ಹೊರಡುತ್ತಿರುವವರು ಹಲವರಿದ್ದಾರೆ. ರೀಲ್ಸ್ ಮಾಡುತ್ತಾ ಐಷಾರಾಮಿ ಜೀವನ ಸಾಗಿಸುತ್ತಿದ್ದ 26ರ ಹರೆಯದ ಯುವತಿ ಮುಬೀನಾ ಎಲ್ಲರ ರೋಲ್ ಮಾಡೆಲ್ ಆಗಿದ್ದಳು. ರೀಲ್ಸ್ ಮೂಲಕವೇ ಈಕೆ ಕಾರು, 5 ಸ್ಟಾರ್ ರೆಸ್ಟೋರೆಂಟ್, ಪ್ರವಾಸ, ಹೊಸ ಹೊಸ ಬಟ್ಟೆ ಖರೀದಿಸುತ್ತಿದ್ದಾಳೆ ಅನ್ನೋ ಮಾತು ಎಲ್ಲೆಡೆ ಕೇಳಿಬಂದಿತ್ತು. ಈ ರೀಲ್ಸ್ ರಾಣಿಯ ನೋಡಿ ಹಲವು ಯುವತಿಯರು, ಮಹಿಳೆಯರು ಕೂಡ ರೀಲ್ಸ್ ಮಾಡಲು ಆರಂಭಿಸಿದ್ದರು. ಆದರೆ ಈಕೆ ಶೋಕಿ, ಐಷಾರಾಮಿಯ ಅಸಲಿ ಕತೆಯನ್ನು ಕೇರಳದ ಕೊಲ್ಲಂ ಪೊಲೀಸರು ತೆರೆದಿಟ್ಟಿದ್ದಾರೆ.

ಮುಬೀನಾ ಬಣ್ಣ ಬಣ್ಣದ ಲಿಪ್‌ಸ್ಟಿಕ್, ಹೊಸ ಹೊಸ ಬಟ್ಟೆ ಹಾಕಿ ಲಕಲಕ ಅಂತಾ ರೀಲ್ಸ್ ಮಾಡಿ ಹರಿಬಿಡುತ್ತಿದ್ದಳು. ಒಂದಷ್ಟು ಫ್ಯಾನ್ ಫಾಲೋವಿಂಗ್ ಸೃಷ್ಟಿ ಮಾಡಿಕೊಂಡಿದ್ದಳು. ರೀಲ್ಸ್‌ಗೆ ಬರುತ್ತಿದ್ದ ಪ್ರತಿ ಕಮೆಂಟ್‌ಗೂ ಪ್ರತಿಕ್ರಿಯೆ ನೀಡುತ್ತಿದ್ದ ಮಬೀನಾ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಆದರೆ ಮುಬೀನಾ ಮಾಡುತ್ತಿದ್ದ ರೀಲ್ಸ್‌ನಿಂದ ಯಾವುದೇ ಆದಾಯ ಬರುತ್ತಿರಲಿಲ್ಲ. ಒಂದು ಬಿಡಿಗಾಸು ಬಂದಿಲ್ಲ.

ಹಾಗಂತ ಜನರ ಮುಂದೆ ತಾನೊಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನ್ನೋದು ತೋರಿಸಿಕೊಳ್ಳಲು ಯಾವುತ್ತು ಹಿಂದೇಟು ಹಾಕಿಲ್ಲ. ರೀಲ್ಸ್ ಮೂಲಕ ತಾನು ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿರುವುದಾಗಿ ಕೊಚ್ಚಿ ಕೊಂಡಿದ್ದಾಳೆ. ಇದಕ್ಕೆ ತಕ್ಕಂತೆ ತನ್ನ ಜೀವನಶೈಲಿಯನ್ನೂ ಬದಲಿಸಿದ್ದಾಳೆ. ಹೀಗಿರುವಾಗ ಈಕೆಯ ಸಂಬಂಧಿಕರಾದ ಮುನೀರಾ ದೂರೊಂದನ್ನು ದಾಖಲಿಸಿದ್ದಾರೆ.

ಮಬೀನಾ ಮನೆಗೆ ಆಗಮಿಸಿದ ಬಳಿಕ ಚನ್ನಾಭರಣ ನಾಪತ್ತೆಯಾಗಿದೆ.ಹೀಗಾಗಿ ಅನುಮಾನಗೊಂಡ ಮುನೀರಾ ದೂರು ನೀಡಿದ್ದಾಳೆ. ಇತ್ತ ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಮುಬೀನಾ ಅಸಲಿ ವೃತ್ತಿ ಕಳ್ಳತನ ಅನ್ನೋದು ಪೊಲೀಸರಿಗೆ ಖಚಿತವಾಗಿದೆ. ಬಳಿಕ ಪೊಲೀಸರು ಮುಬೀನಾಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.  ಮುಬೀನಾ ರೀಲ್ಸ್ ಸ್ಟಾರ್ ಎಂದು ಬಿಂಬಿಸಿಕೊಳ್ಳಲು ಹೋಗಿ ಒಂದು ನಯಾಪೈಸೆ ಸಂದಿಸಿಲ್ಲ. ಐಷಾರಾಮಿತನಕ್ಕೆ, ಜೀವನಕ್ಕೆ ಚಿನ್ನಾಭರಣ ಕದಿಯುತ್ತಿದ್ದೆ ಅನ್ನೋದನ್ನು ಮುಬೀನಾ ಬಾಯಿಬಿಟ್ಟಿದ್ದಾಳೆ.

LATEST NEWS

ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದು ಮನೆಗೆ ಬಂದ ವ್ಯಕ್ತಿ ಕಾಣೆ; ದೂರು ದಾಖಲು

Published

on

ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದುಕೊಂಡು ಮನೆಗೆ ಬಂದ ವ್ಯಕ್ತಿಯೋರ್ವರು ವಿಚಿತ್ರವಾಗಿ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಜೀಪಮುನ್ನೂರು ಗ್ರಾಮದ ನಾಗವಳಚ್ಚಿಲ್ ನಿವಾಸಿಯಾಗಿರುವ ಉಗ್ಗಪ್ಪ (70) ಎಂಬವರು ಕಾಣೆಯಾದ ವ್ಯಕ್ತಿ.

ಪಾಣೆಮಂಗಳೂರು ಯೂನಿಯನ್ ಬ್ಯಾಂಕ್‌ಗೆ ಹೋಗಿ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದವರು ತನ್ನ ಸೊಸೆಗೆ ಮೊಬೈಲ್ ನಲ್ಲಿ ಕರೆ ಮಾಡಿ ಏನು ವಿಷಯವನ್ನು ತಿಳಿಸಿದಂತೆ ಕರೆಯನ್ನು ಕಟ್ ಮಾಡಿದ್ದಾರೆ. ನಂತರ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ರಿಸೀವ್ ಮಾಡಿರಲಿಲ್ಲ.

ಉಗ್ಗಪ್ಪ ಪೂಜಾರಿ ಅವರು ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋಗಿರುವ ವಿಚಾರ ಬಳಿಕ ಗಮನಕ್ಕೆ ಬಂದಿದೆ. ನಂತರ ಇವರ ಮಗ ಅನಿಲ್ ಕುಮಾರ್ ಅವರು ಎಲ್ಲೆಡೆ ಹುಡುಕಾಟ ಮಾಡಿದರೂ ಪತ್ತೆಯಾಗದ ಹಿನ್ನೆಲೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

LATEST NEWS

ಹೆರಿಗೆ ಬಳಿಕ ಯೋ*ನಿಯೊಳಗೆ ಬಾಕಿಯಾದ ಸೂಜಿ; 20 ವರ್ಷಗಳ ಬಳಿಕ ಗೊತ್ತಾಯ್ತು ನರ್ಸ್ ಎಡವಟ್ಟು!

Published

on

ಮಂಗಳೂರು/ಥೈಲ್ಯಾಂಡ್‌ : ಹೆರಿಗೆಯ ಸಮಯದಲ್ಲಿ ನರ್ಸ್‌ವೊಬ್ಬಳು ಮಹಿಳೆಯೋರ್ವಳ ಯೋ*ನಿಯಲ್ಲಿ ಶಸ್ತ್ರಚಿಕಿತ್ಸಾ ಸೂಜಿಯನ್ನು ಬಿಟ್ಟಿದ್ದು, ಸುಮಾರು ಎರಡು ದಶಕಗಳ ನಿರಂತರ ನೋವಿನಿಂದ ಬಳಲುತ್ತಿದ್ದ ಇದೀಗ ನೋವು ಹೆಚ್ಚಾದ ಕಾರಣ ಎಕ್ಸರೇ ತೆಗೆದಾಗ ಸೂಜಿ ಇರುವುದು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.

ಕಳೆದ ವರ್ಷದವರೆಗೂ ಸೂಜಿ ಯೋ*ನಿಯೊಳಗೆ ಇರುವುದರ ಕುರಿತು ಮಹಿಳೆಗೆ ಯಾವುದೇ ಕಲ್ಪನೆಯೂ ಇರಲಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದಾಗ ಆಕೆಯ ಖಾ*ಸಗಿ ಭಾಗದಲ್ಲಿ ಸೂಜಿ ಇರುವುದು ಕಂಡು ಬಂದಿದೆ. ಹೆರಿಗೆ ಸಮಯದಲ್ಲಿ 36 ವರ್ಷದ ಮಹಿಳೆ ಥಾಯ್ಲೆಡ್‌ನ ನಾರಾಥಿವಾಟ್‌ ಪ್ರಾಂತ್ಯದ ನಿವಾಸಿ ಪಾವೆನ್‌ ಫೌಂಡೇಶನ್‌ ಫಾರ್‌ ಚಿಲ್ಡ್ರನ್‌ ಆಂಡ್‌ ವುಮೆನ್‌ ಬಳಿ ಈ ಮಹಿಳೆ ಸಹಾಯವನ್ನು ಕೇಳಿದಾಗ ಈ ಮಾಹಿತಿ ಹೊರಬಿದ್ದಿದೆ.

’18 ವರ್ಷಗಳ ಹಿಂದೆ ಹೆರಿಗೆ ನೋವಿನ ಕಾರಣ ಅಪರೇಷನ್‌ಗೆ ಒಳಗಾಗಿದ್ದ ಮಹಿಳೆ, ಮಗು ಜನಿಸಿದ ಮೇಲೆ ಹೊಲಿಗೆ ಹಾಕುವ ವೇಳೆ ನರ್ಸ್‌ ಸೂಜಿಯನ್ನು ಯೋ*ನಿಯೆಲ್ಲಿಯೇ ಬಿಟ್ಟಿದ್ದಳು. ನಂತರ ವೈದ್ಯರು ತಮ್ಮ ಬೆರಳುಗಳ ಮೂಲಕ ಸೂಜಿಯನ್ನು ಹೊರತೆಗೆಯುವ ಪ್ರಯತ್ನ ಪಟ್ಟರೂ ಅದು ಹೊರಬಂದಿರಲಿಲ್ಲ. ಆಮೇಲೆ ಅತಿಯಾದ ರಕ್ತಸ್ರಾವ ಉಂಟಾಗಿ, ಸೂಜಿಯು ಯೋ*ನಿಯೊಳಗೆ ಉಳಿದಿದ್ದು, ವೈದ್ಯರು ತಮ್ಮ ಕೆಲಸ ಅಲ್ಲಿಗೇ ಮುಗಿಸಿದರು’ ಎಂದು ಮಹಿಳೆ ನೆನಪು ಮಾಡಿ ಹೇಳಿದ್ದಾರೆ.

ಅಂದಿನಿಂದ ಇಲ್ಲಿಯವರೆಗೆ ಮಹಿಳೆಗೆ ಆಗಾಗ ತೀವ್ರವಾದ ಕೆಳಹೊಟ್ಟೆ ನೋವು ಉಂಟಾಗುತ್ತಿತ್ತು. ಇದೀಗ ಸೂಜಿಯನ್ನು ಹೊರತೆಗೆಯಲು ಮಹಿಳೆಗೆ ಇನ್ನೊಂದು ಸರ್ಜರಿ ಮಾಡಬೇಕು. ಆದರೆ ದೇಹದಲ್ಲಿ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣ ಸರ್ಜರಿ ವಿಳಂಬವಾಗಿದೆ ಎನ್ನಲಾಗಿದೆ.

ಮಹಿಳೆ ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ವೈದ್ಯಕೀಯ ವಿಮೆಯು ಆಕೆಯ ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿರುತ್ತದೆಯಾದರೂ, ಸಾರಿಗೆ ವೆಚ್ಚಗಳು ಆರ್ಥಕವಾಗಿ ಆಕೆಯ ಮೇಲೆ ಹೊರೆಯಾಗಿದೆ. ಇನ್ನು ಸೂಜಿಯನ್ನು ಯಾವಾಗ ಹೊರತೆಗೆಯಲಾಗುತ್ತದೆ ಎನ್ನುವುದು ಇನ್ನು ಕೂಡಾ ನಿಶ್ಚಯವಾಗಿಲ್ಲ. ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆಯೂ ನೀಡದ ಕಾರಣ, ಕಾನೂನು ಕ್ರಮ, ಪರಿಹಾರವೇನಾದರೂ ದೊರಕುತ್ತದೆಯೇ ಎಂಬುವುದೂ ತಿಳಿಯದೆ ಕುಟುಂಬ ಕಂಗಲಾಗಿದೆ.

Continue Reading

LATEST NEWS

ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ, ಸಂಹಿತೆ ಜಾರಿ

Published

on

ಮಂಗಳೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ, ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ಪಾಲಿಸುವಂತೆ ಪ್ರವೇಶ ದ್ವಾರದ ಬಳಿ ಸೂಚನಾ ಫಲಕ ಅಳವಡಿಸಲಾಗಿದೆ.

ದೇವರ ದರ್ಶನಕ್ಕೆ ಬರುವಾಗ ಸ್ವಚ್ಛ, ಶುಭ್ರ ಮತ್ತು ಸಭ್ಯ ಉಡುಪುಗಳನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ. ಪುರುಷರು ಪ್ಯಾಂಟ್- ಅಂಗಿ ಅಥವಾ ಲುಂಗಿ – ಅಂಗಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ದೇವರ ದರ್ಶನ ಪಡೆಯುವಂತೆ ತಿಳಿಸಲಾಗಿದೆ.

ದೇವಸ್ಥಾನಕ್ಕೆ ಬರುವಾಗ ಭಕ್ತರು ಧರಿಸಬಹುದಾದ ವಸ್ತ್ರಗಳ ಮಾದರಿಯನ್ನು ಚಿತ್ರದ ಮೂಲಕ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಅನೇಕ ವರ್ಷಗಳಿಂದ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ವಸ್ತ್ರ ಸಂಹಿತೆ ಜಾರಿಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯವರು ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಿದ್ದಾರೆ.

Continue Reading

LATEST NEWS

Trending

Exit mobile version