ಮಂಗಳೂರು/ನವದೆಹಲಿ: ಭಾವನೆ, ನೋವು, ದುಃಖಗಳನ್ನೇ ಟಾರ್ಗೆಟ್ ಮಾಡಿ ವಂಚಕರು ನಡೆಸುವ ಹೊಸ ಸೈಬರ್ ಕ್ರೈಂ ಈ ಅಂತ್ಯಸಂಸ್ಕಾರ ಸೈಬರ್ ಕ್ರೈಂ ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲೇ ಈ ಸೈಬರ್ ಕ್ರೈಂ ನಡೆಯುತ್ತದೆ. ನಗರ ಪ್ರದೇಶಗಳಲ್ಲಿನ ಬದುಕಿಗೆ ಸಮಯವಿಲ್ಲ. ಎಲ್ಲವನ್ನೂ ನಿಭಾಯಿಸಲು, ನಿರ್ವಹಿಸಲು ಆಪ್ತರು, ನೆರಮನೆಯವರ ಸಹಾಯವಿರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲ ಹೊಣೆಗಾರಿಕೆಯನ್ನು ಎಜೆನ್ಸಿಗಳ ಕೈಗೆ ವಹಿಸಲಾಗತ್ತವೆ. ಈ ಪೈಕಿ ಅಂತ್ಯಸಂಸ್ಕಾರ ನಡೆಸಲು ನಗರ ಪ್ರದೇಶದಲ್ಲಿ ಖಾಸಗಿ ಎಜೆನ್ಸಿಗಳಿವೆ. ಈ ಎಜೆನ್ಸಿಗಳು ಸಂಪ್ರದಾಯದ ಪ್ರಕಾರ ಅಂ*ತ್ಯಸಂಸ್ಕಾರ ನಡೆಸುತ್ತದೆ. ಅಂ*ತಿಮ ವಿಧಿ ವಿಧಾನಗಳು, ಪೂಜಾ ಕೈಂಕರ್ಯ, ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ.
ಈ ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ?
ಸೈಬರ್ ಕ್ರೈಂ ಭೂತ ಯಾವ ರೂಪದಲ್ಲಿ ವಕ್ಕರಿಸಲಿದೆ ಅನ್ನೋದೇ ತಿಳಿಯಲ್ಲ. ಮೋಸ ಹೋದ ಬಳಿಕವಷ್ಟೇ ಇದೊಂದು ಸೈಬರ್ ಕ್ರೈಂ ಆಗಿತ್ತು ಅನ್ನೋದು ಅಂದಾಜಾಗುವುದು. ಪ್ರತಿ ಗಂಟೆಯಲ್ಲಿ ಲಕ್ಷಾಂತರ ಸೈಬರ್ ಕ್ರೈಂ ಪ್ರಕರಣಗಳು ಪತ್ತೆಯಾಗಿ, ದೂರು ದಾಖಲಾಗುತ್ತಿದೆ. ಹೊಸ ಹೊಸ ವಿಧಾನದಲ್ಲಿ ವಂಚಕರು ಮೋಸ ಮಾಡುತ್ತಿದ್ದಾರೆ. ಅಮಾಯಕರು, ಎಚ್ಚರವಹಿಸಿ ಹೆಜ್ಜೆ ಇಟ್ಟರೂ ಹೇಗೋ ಬಲಿಯಾಗುತ್ತಿದ್ದಾರೆ.
ಅಂ*ತ್ಯಸಂಸ್ಕಾರ ಸೈಬರ್ ಕ್ರೈಂ ಎಂದರೇನು?
ಅಂ*ತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ನಾವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂ*ತ್ಯಸಂಸ್ಕಾರ ನಡೆಸಬೇಕು ಎಂದು ಕೇಳಿಕೊಂಡ ತಕ್ಷಣವೇ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಅದರಲ್ಲಿ ನಾವು ಹೆಸರು, ವಿಳಾಸ, ಮೃ*ತಪಟ್ಟವರ ಹೆಸರು, ಧರ್ಮ, ಗೋತ್ರ, ಅಂ*ತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಿರುತ್ತೇವೆ. ನಂತರ 5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಿದಾಗ ಒಂದು ಮೆಸೇಜ್ ಬರಲಿದೆ. ಅಂ*ತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಮೆಸೇಜ್ ಬರುತ್ತವೆ. ಇದೇ ವೇಳೆ ಬಂದ ಒಟಿಪಿ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.
ಅಂ*ತ್ಯಸಂಸ್ಕಾರ ಕ್ರಿಯೆ ಎಲ್ಲವೂ ಅಚ್ಚುಕಟ್ಟಾಗಿ ನೆರವೇರದೆ ಎಂದು ಒಟಿಪಿ ಹಂಚಿಕೊಂಡರೆ ಕತೆ ಮುಗೀತು. ಖಾತೆಯಲ್ಲಿರುವ ಎಲ್ಲಾ ಹಣ ಕ್ಷಣಾರ್ಧದಲ್ಲೇ ಮಾಯವಾಗಲಿದೆ. ಕೆಲವೊಮ್ಮೆ ಒಟಿಪಿ ಕೇಳದೆಯೂ ವಂಚನೆ ನಡೆಯುತ್ತದೆ. ವಂಚಕರು ಹಂಚಿಕೊಂಡ ಲಿಂಕ್ ಕ್ಲಿಕ್ ಮಾಡಿದರೆ ಸಾಕು ಮಾಲ್ವೇರ್ ವೈರಸ್ ಫೋನ್ ಸೇರಿಕೊಂಡು ಫೋನ್ನ ವೈಯುಕ್ತಿಕ ಮಾಹಿತಿ ಸೋರಿಕೆ ಮಾಡಿ ಬಳಿಕ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ.
ಅಂ*ತ್ಯಸಂಸ್ಕಾರವನ್ನೇ ಟಾರ್ಗೆಟ್ ಮಾಡಿ ಹಲವು ಸೈಬರ್ ಕ್ರೈಂ ದಾಖಲಾಗಿದೆ. ಈ ಕುರಿತು ಎಚ್ಚರಿಕೆ ಸಂದೇಶ ನೀಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿ ವ್ಯವಹಾರಕ್ಕೂ ಮುನ್ನ ಯೋಚಿಸಿ, ತಾಳ್ಮೆ ವಹಿಸಿ ಮುನ್ನಡೆಯಬೇಕು ಯಾವುದೇ ಕಾರಣಕ್ಕೂ ಅನಾಮಿಕರು ಕಳುಹಿಸುವ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಒಟಿಪಿ ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು.