ಪ್ರಿಯತಮೆಯನ್ನು ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ
ಸುರತ್ಕಲ್ : ಹೂವಿನ ವ್ಯಾಪಾರಿಯೋರ್ವ ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸುರತ್ಕಲ್ ನಲ್ಲಿ ನಡೆದಿದೆ.
ಕಳೆದ ಏಳೆಂಟು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ 44ವರ್ಷ ವಯಸ್ಸಿನ ವಸಂತ ಎನ್ನುವವರ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ.
ಬುಧವಾರ ಇಬ್ಬರಲ್ಲೂ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಹೂವಿನ ವ್ಯಾಪಾರಿ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಪ್ ಡೇಟ್ಸ್ :
ಯುವಕನೋರ್ವ ತನ್ನ ಪರಿಚಯದ ವಿವಾಹಿತ ಮಹಿಳೆಯೊಬ್ಬರನ್ನು ಮುಕ್ಕದ ತನ್ನ ಬಾಡಿಗೆ ಮನೆಯಲ್ಲಿ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ..
ಮಂಗಳವಾರ ಸಂಜೆ ೩ಗಂಟೆ ಸುಮಾರಿನ ಬಳಿಕ ಈ ಘಟನೆ ನಡೆದಿರಬೇಕು ಎಂದು ಶಂಕಿಸಲಾಗಿದೆ
ಸುರತ್ಕಲ್ ಮುಖ್ಯ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರಿಯಾಗಿದ್ದ ಕುಳಾಯಿ ರೈಲ್ವೆ ಬ್ರಿಡ್ಜ್ ನಿವಾಸಿ (36)ವಸಂತ್ ಕುಮಾರ್ ಕೊಲೆಗೈದ ಯುವಕನಾಗಿದ್ದು ಈತ ತನಗೆ ಪರಿಚಯಸ್ಥೆ ರೇಖಾ (42) ಎಂಬ ವಿವಾಹಿತ ಮಹಿಳೆಯನ್ನು ತನ್ನ ಬಾಡಿಗೆ ಮನೆಗೆ ಮಂಗಳವಾರ ಸಂಜೆ 3 ಗಂಟೆ ಬಳಿಕ ಕರೆದೊಯ್ದಿದ್ದ ಎನ್ನಲಾಗಿದೆ.
ಕೊಲೆಯಾದ ರೇಖಾ ಸುರತ್ಕಲ್ ಬಳಿಯ ಟೌನ್ ಶಿಪ್ ನಿವಾಸಿ, ಬೃಹತ್ ಉದ್ಯಮವೊಂದರ ಉದ್ಯೋಗಿಯ ಪತ್ನಿ ಎಂದು ತಿಳಿದು ಬಂದಿದೆ.
ಕೊಲೆಯಾದ ಮನೆಯಲ್ಲಿ ಬಲಿ ನೀಡಿದ ಕೋಳಿ, ಲಿಂಬೆ ಹುಳಿ, ಕುಂಬಳಕಾಯಿ ಇತ್ಯಾದಿ ಪತ್ತೆಯಾಗಿದ್ದು, ಯುವಕ ಮಹಿಳೆಯನ್ನು ವಶೀಕರಣಕ್ಕೆ ಯತ್ನಿಸಿದ್ದು, ಇದಕ್ಕೆ ಆಕೆ ಸಹಕರಿಸದಿದ್ದಾಗ. ಆಕೆಯನ್ನು ಕೊಲೆಗೈದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ,ಮಂಗಳೂರು ಡಿಸಿಪಿ, ಪಣಂಬೂರು ಎಸಿಪಿ.ಕೆ ಯು ಬೆಳ್ಳಿಯಪ್ಪ, ಸುರತ್ಕಲ್ ಪಿಐ ಚಂದ್ರಪ್ಪ ,ಎಸ್.ಐ ಸುಂದರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಮುಂದುವರಿದಿದೆ.