Connect with us

LATEST NEWS

ಅಬ್ಬಬ್ಬಾ!! ಹರಾಜಿಯಲ್ಲಿ ಬರೋಬ್ಬರಿ 11 ಕೋಟಿಗೆ ಮೀನೊಂದು ಮಾರಾಟ

Published

on

ಮಂಗಳೂರು/ಜಪಾನ್‌ : ಮೀನು ಹರಾಜಿನಲ್ಲಿ ಬ್ಲೂಫಿನ್ ಟ್ಯೂನಾ ಎಂಬ ಮೀನು ಬರೋಬ್ಬರಿ 11 ಕೋಟಿ ರೂಪಾಯಿಗೆ ಸೇಲ್ ಆದ ಆಶ್ಚರ್ಯಕರ ಘಟನೆ ಜಪಾನ್‌ನ ಟೋಕಿಯಲ್ಲಿ ನಡೆದಿದೆ.

ಜಪಾನ್​ ಟೋಕಿಯೋ ಮೀನು ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ ಸೆಲಾದ ಮೀನಿನ ಒಟ್ಟು ತೂಕ 276 ಕೆಜಿ. ಟೋಕಿಯ ಪ್ರಸಿದ್ಧ Sushi Zanmai ಎಂಬ ರೆಸ್ಟೋರೆಂಟ್ ಇದನ್ನು ಖರೀದಿ ಮಾಡಿದೆ. ಇದೇ ಮಾರುಕಟ್ಟೆಯಲ್ಲಿ 2019 ರಲ್ಲಿ ಬ್ಲೂಫಿನ್ ಟ್ಯೂನಾ ಮೀನು ಹರಾಜಿಗೆ ಇಡಲಾಗಿತ್ತು. ಆ ವೇಳೆ 18 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು.

 

ಇದನ್ನೂ ಓದಿ : ಶ್ರೀಮಂತನನ್ನು ಬಿಕಾರಿಯನ್ನಾಗಿಸಿತು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು !

 

ವೇಗವಾಗಿ ಚಲಿಸುವುದರಲ್ಲಿ ಈ ಮೀನು ಹೆಸರುವಾಸಿ. ಇದರ ಗಾತ್ರವು ಮೋಟಾರ್ಸೈಕಲ್​ನಂತೆಯೇ ಇರುತ್ತದೆ. ಇದರ ಸರಾಸರಿ ವಯಸ್ಸು 40 ವರ್ಷ. ಬ್ಲೂಫಿನ್ ಟ್ಯೂನಾದಲ್ಲಿ ಮೂರು ಜಾತಿಗಳಿವೆ. ಸಮುದ್ರದ ಆಳದಲ್ಲಿ ಇವು ಇರುತ್ತವೆ. 1999 ರ ಮಾಹಿತಿಯ ಪ್ರಕಾರ, ಮೀನು ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಮೀನು ಇದಾಗಿದೆ.

Click to comment

Leave a Reply

Your email address will not be published. Required fields are marked *

Ancient Mangaluru

ಕಾಸರಗೋಡು: ಗಲ್ಫ್‌ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು

Published

on

ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕುಂಬಳೆಯಲ್ಲಿ ಶನಿವಾರ ಸಂಜೆ ನಡೆದಿದೆ.

 

ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಮೃತಪಟ್ಟ ಮಗು. ಅನಾಸ್ ಪಿಸ್ತಾವನ್ನು ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದಾರೆ. ಬಳಿಕ ಕಂದಮ್ಮನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಯಿತು.

ಆದಿತ್ಯವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ. ಊರಿಗೆ ಬಂದಿದ್ದ ತಂದೆ ಅನ್ವರ್ ಒಂದು ವಾರದ ಹಿಂದೆಯಷ್ಟೇ ಗಲ್ಫ್ ಗೆ ತೆರಳಿದ್ದರು. ಸುದ್ದಿ ತಿಳಿದು ತಂದೆ ಊರಿಗೆ ಮರಳಿದ್ದಾರೆ ಎನ್ನಲಾಗಿದೆ.

Continue Reading

DAKSHINA KANNADA

ಪಿಲಿಕುಳ ಕಂಬಳ ವಿಚಾರಣೆ ಜನವರಿ 21 ಕ್ಕೆ ಮುಂದೂಡಿಕೆ

Published

on

ಮಂಗಳೂರು : ಪಿಲಿಕುಳ ಜೈವಿಕ ಪಾರ್ಕ್‌ ಸಮೀಪ ಕಂಬಳಕ್ಕೆ ಅವಕಾಶ ನೀಡಬಾರದು ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೊರಗೂ ಕಂಬಳ ನಿಷೇಧ ಮಾಡಬೇಕು ಎಂದು ಪ್ರಾಣಿ ದಯಾ ಸಂಘಟನೆ ಪೇಟಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಜನವರಿ 21 ಕ್ಕೆ ಮುಂದೂಡಿತು.

ಶುಕ್ರವಾರ ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಮೂರ್ತಿ  ಎನ್.ವಿ.ಅಂಜಾರಿಯಾ ಮತ್ತು ನ್ಯಾ| ಎಂ.ಐ. ಅರುಣ್ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಬಂದ ಸಂದರ್ಭದಲ್ಲಿ ರಾಜ್ಯ ಸರಕಾರದ ಪರ ಹಾಜರಾದ ವಕೀಲರು, ಅಡ್ವೋಕೇಟ್ ಜನರಲ್ ಅವರು ಇಂದು ಲಭ್ಯರಿಲ್ಲ. ಹಾಗಾಗಿ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಿದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಜ.21 ಕ್ಕೆ ಮುಂದೂಡಿದೆ.

Continue Reading

BIG BOSS

ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ..!

Published

on

ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಬಾಕಿಯಿದೆ. ಹೀಗಾಗಿ. ದಿನದಿಂದ ದಿನಕ್ಕೆ ಆಟ ಹೊಸ-ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದ್ಯ ೧೦೬ನೇ ದಿನಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಮನೆಯಲ್ಲಿ ಸದ್ಯ ಒಂಭತ್ತು ಮಂದಿ ಸದಸ್ಯರಿದ್ದಾರೆ. ಈಗಾಗಲೇ ಭಾನುವಾರದ ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಅಚ್ಚರಿ ವ್ಯಕ್ತಿ ದೊಡ್ಮನೆಯಿಂದ ಹೊರಬಂದಿದ್ದಾರೆ.

ಚೈತ್ರಾ ಎಲಿಮಿನೇಟ್

ಇದೀಗ ಬಿಗ್‌ಬಾಸ್‌ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇಷ್ಟು ದಿನ ಕೆಲವರು ಚೈತ್ರಾ ಅವರಿಗೆ ಹೆಚ್ಚು ವೋಟ್ ಬೀಳುತ್ತಿಲ್ಲ ಆದರೂ ಹೇಗೆ ಸೇಫ್ ಆಗುತ್ತಿದ್ದಾರೆ ಅಂತ ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಚೈತ್ರಾ 105 ದಿನಗಳ ದೊಡ್ಮನೆ ಜರ್ನಿ ಮುಗಿಸಿದ್ದಾರೆ.

ಚೈತ್ರಾ ಹಿನ್ನೆಲೆ

ಉಡುಪಿ ಜಿಲ್ಲೆಯ ಕುಂದಾಪುರದವರಾದ ಚೈತ್ರಾ ಕುಂದಾಪುರ, ತೆಕ್ಕಟ್ಟೆಯಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದರು. ಆನಂತರ ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದ ಇವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಓದು ಮುಗಿದ ಬಳಿಕ ಸಮಯ ಸುದ್ದಿ ವಾಹಿನಿಯಲ್ಲಿ ಕೆಲಸಕ್ಕೆ ಸೇರಿದರು. ಆನಂತರ ಉಡುಪಿಯ ಸ್ಪಂದನಾ ಟಿವಿ ಹಾಗೂ ಮುಕ್ತ ನ್ಯೂಸ್ ಎಂಬ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದರು. ಬಳಿಕ ಉದಯವಾಣಿ ಪತ್ರಿಕೆಯಲ್ಲೂ ಕೆಲಕಾಲ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಕೂಡ ಆಗಿದ್ದರು.

Continue Reading

LATEST NEWS

Trending

Exit mobile version