Connect with us

LATEST NEWS

ಲಕ್ಕಿ ಕಾರ್‌ಗೆ ಅಂತಿಮ ನಮನ; 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ..!

Published

on

ಅಮ್ರೇಲಿ: ನಾವು ನೋಡಿದಂತೆ ಹೆಚ್ಚಿನವರು ತಾವು ಇಷ್ಪಟ್ಟು ಖರೀದಿಸಿದ ವಸ್ತುಗಳನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಾರೆ. ಯಾರೇ ಆದರೂ ತಾವು ಇಷ್ಟಪಟ್ಟು ಖರೀದಿಸಿದ ಮೊದಲ ವಸ್ತುವನ್ನು ತುಂಬಾ ಜೋಪಾನ ಮಾಡಿಕೊಂಡು ಬರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ​ ತನ್ನ ಬದುಕನ್ನೇ ಬದಲಾಯಿಸಿದ ವಸ್ತು ಒಂದಕ್ಕೆ ವಿನೂತನವಾಗಿ ವಿದಾಯ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಈತನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಮ್ರೇಲಿ ಜಿಲ್ಲೆಯ ಲಠೀ ತಾಲ್ಲೂಕಿನ ಪದಾರ್‌ಶಿಂಗ ಗ್ರಾಮದ ವ್ಯಕ್ತಿಯೊಬ್ಬರು ತಾವು 18 ವರ್ಷಗಳ ಹಿಂದೆ ಇಷ್ಟಪಟ್ಟು ಖರೀದಿಸಿದ ಕಾರನ್ನು ಸಮಾಧಿ ಮಾಡುವ ಮೂಲಕ ಅದಕ್ಕೆ ವಿಭಿನ್ನವಾಗಿ ವಿದಾಯ ಹೇಳಿದ್ದಾರೆ. ಗ್ರಾಮಸ್ಥರು, ಅರ್ಚಕರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ 1,500 ಅಧಿಕ ಮಂದಿ ಭಾಗಿಯಾಗಿದ್ದು, ಈ ಸುದ್ದಿ ಸದ್ಯಕ್ಕೆ ವೈರಲ್​ ಆಗುತ್ತಿದೆ.

ವೃತ್ತಿಯಲ್ಲಿ ಬಿಲ್ಡರ್​ ಆಗಿರುವ ಸಂಜಯ್​ ಪೊಲ್ರಾ ಎಂಬುವವರು 2006ರಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಗನಾರ್​ ಕಾರನ್ನು ಖರೀದಿಸಿದ್ದರು. ಸೌರಾಷ್ಟ್ರ ಮೂಲದವರಾದ ಸಂಜಯ್​ ಕೆಲಸ ಅರಸಿಕೊಂಡು ಸೂರತ್‌ಗೆ ವಲಸೆ ಹೋಗಿದ್ದರು. ರಿಯಲ್​ ಎಸ್ಟೇಟ್​ ದಲ್ಲಾಳಿಯಾಗಿ ವೃತ್ತಿ ಆರಂಭಿಸಿದ ಸಂಜಯ್​ ನಂತರದ ದಿನಗಳಲ್ಲಿ ದೊಡ್ಡ ಬಿಲ್ಡರ್​ ಆದರು. ಹೀಗಾಗಿ ಅವರ ಬದುಕನ್ನು ಬದಲಾಯಿಸಿದ ಅದೃಷ್ಟದ ಕಾರನ್ನು ಸಮಾಧಿ ಮಾಡುವ ಮೂಲಕ ವಿಭಿನ್ನವಾಗಿ ವಿದಾಯ ಹೇಳಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನೂ ಈ ಕುರಿತು ಮಾತನಾಡಿರುವ ಸಂಜಯ್​, ಈ ಕಾರು ಕುಟುಂಬಕ್ಕೆ ಏಳಿಗೆಯನ್ನು ತಂದಿದ್ದು ಮಾತ್ರವಲ್ಲದೇ, ಸಮಾಜದಲ್ಲಿ ಕುಟುಂಬದ ಗೌರವವನ್ನು ಹೆಚ್ಚಿಸಿದೆ. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ನೆಚ್ಚಿನ ಕಾರನ್ನು ನಮ್ಮ ನೆನಪಿನಲ್ಲಿ ಸದಾ ಇರಿಸುವುದಕ್ಕಾಗಿ ಅದನ್ನು ಸಮಾಧಿ ಮಾಡಲು ಯೋಜಿಸಿದ್ದೇವೆ.

2006ರಲ್ಲಿ ಕಾರನ್ನು ಖರೀದಿಸಿದ್ದೆ. ಅದು ನನ್ನ ಅದೃಷ್ಟವನ್ನೇ ಬದಲಾಯಿಸಿತ್ತು. ಅದನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಹಾಗಾಗಿ, ಬೇರೆ ಯಾವುದೇ ಯೋಚನೆ ಮಾಡದೆ ಅದನ್ನು ಸಮಾಧಿ ಮಾಡಿದ್ದೇನೆ. ಇವತ್ತು ನಾನು ಬಿಲ್ಡರ್‌ ಆಗಿದ್ದು, ಆಡಿ ಕಾರನ್ನೂ ಹೊಂದಿದ್ದೇನೆ. ಕಾರಿನ ಸಮಾಧಿ ಎಂಬುದನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ನನ್ನ ಕಾರಿಗೆ ಇದುವೇ ಸೂಕ್ತವಾದ ವಿದಾಯ ಎಂದುಕೊಂಡು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ಆಹ್ವಾನ ಪತ್ರಿಕೆ ಮಾಡಿಸಿ ಹಂಚಲಾಗಿದೆ ಎಂದು ಕಾರಿನ ಮಾಲೀಕ ಸಂಜಯ್​ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಬಹುಕಾಲದ ಗೆಳತಿಯೊಂದಿಗೆ ‘ದಿ ಗ್ರೇಟ್’ ಅಮೆಜಾನ್‌ ಸಿಇಒ ಮದುವೆ ಫಿಕ್ಸ್..!

Published

on

ಭಾರತದ ಪ್ರತಿಷ್ಠೀತ ಕಂಪನಿ ಅಮೆಜಾನ್‌ ಸಿಇಒ ಜೆಫ್ ಬೆಜೋಸ್‌ (60) ತಮ್ಮ ಬಹುಕಾಲದ ಗೆಳತಿ ಲಾರೆನ್‌ ಸ್ಯಾಚೆಂಜ್‌ (54)ರನ್ನು ಈ ಡಿಸೆಂಬರ್‌ನ ಕ್ರಿಸ್ಮಸ್‌ ಸಂಭ್ರಮದ ವೇಳೆಗೆ ಮದುವೆಯಾಗಲಿದ್ದಾರೆ.

ಅಮೆರಿಕದ ಕೊಲೋರಡೋದಲ್ಲಿರುವ ಆ್ಯಸ್ಪೆನ್‌ ನಗರದಲ್ಲಿ ಬೆಜೋಸ್‌ ಅವರ ಅದ್ದೂರಿ ವಿವಾಹ ನಡೆಯಲಿದ್ದು, ಆಪ್ತ ವಲಯದವರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

2023ರಲ್ಲಿ ಸಿಇಒ ತಮ್ಮ ಗೆಳತಿ ಲಾರೆನ್‌ಗೆ 21 ಕೋಟಿ ರೂ.ಮೌಲ್ಯದ ಪಿಂಕ್‌ ಡೈಮಂಡ್‌ ರಿಂಗ್‌ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಈ ಬಾರಿಯ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Continue Reading

LATEST NEWS

ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಮುಡಿಪು: ಮಕ್ಕಳ ದಿನಾಚರಣೆ

Published

on

ಉಳ್ಳಾಲ : ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಮುಡಿಪುವಿನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕಿ ರೋಶನಿ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.

ಈ ವೇಳೆ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರಕ್ಷಿತ್ ಕುಲಾಲ್, ಶಿಕ್ಷಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ  ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಡು ಹಾಗೂ ನೃತ್ಯಗಳ ಮೂಲಕ ಶಿಕ್ಷಕರು ಮಕ್ಕಳ ಮನರಂಜಿಸಿದರು. ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಈ ಕಾರ್ಯಕ್ರಮವನ್ನು ಪ್ರತಿಷ್ಠಾನಿರೂಪಿಸಿ, ಕುಮಾರಿ ತೇಜಸ್ವಿನಿ ವಂದಿಸಿದರು.

ಇದನ್ನೂ ಓದಿ : ಕರ್ನಾಟಕದ ಭಕ್ತೆಯೊಡನೆ ತಮೀಳು ಮಠಾಧೀಶನ ವಿವಾಹ; ಭಕ್ತರ ಆಕ್ಷೇಪ

Continue Reading

LATEST NEWS

ಇಂದು ಸಂಜೆ 5 ಗಂಟೆಯಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಆರಂಭ

Published

on

ಶಬರಿಮಲೆ : ಇಂದಿನಿಂದ ಶಬರಿಮಲೆ ದೇವಸ್ಥಾನದಲ್ಲಿ ಈ ವರ್ಷದ ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆ ಆರಂಭವಾಗಲಿದೆ. ದೇವಾಲಯದ ಗರ್ಭಗುಡಿಯ ಬಾಗಿಲು ಇಂದು ಸಂಜೆ 5 ಗಂಟೆಗೆ ತೆರೆಯುತ್ತದೆ. ದೇವಸ್ಥಾನವನ್ನು ನಿರ್ಗಮಿತ ಮೇಳಶಾಂತಿ (ಪ್ರಧಾನ ಅರ್ಚಕ) ಪಿ.ಎನ್. ಮಹೇಶ ನಂಬೂತಿರಿ ನೆರವೇರಿಸುವರು.

ಶಬರಿಮಲೆ ಯಾತ್ರೆಯ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಭಕ್ತರು ಕೆಲವು ನಿಯಮಗಳನ್ನು ಪಾಲಿಸಬೇಕು. ಇಂದು ಮಧ್ಯಾಹ್ನ 1 ಗಂಟೆಯಿಂದ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಮತ್ತು ಶನಿವಾರ ಬೆಳಗಿನ ಜಾವ 3 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆಗಳು ನಡೆಯಲಿವೆ.

ಶುಕ್ರವಾರ, ಉಪದೇವತಾ ದೇವಾಲಯವನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು ಮತ್ತು ಪವಿತ್ರ ಅಗ್ನಿಯನ್ನು ಆಜಿಗೆ ವರ್ಗಾಯಿಸಲಾಗುತ್ತದೆ. ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಮೇಲ್ಸಂತಿ ಎಸ್. ಅರುಣ್ ಕುಮಾರ್ ನಂಬೂತಿರಿ ಮತ್ತು ವಾಸುದೇವನ್ ನಂಬೂತಿರಿ ಅವರು ಅಯ್ಯಪ್ಪ ದೇವಸ್ಥಾನ ಮತ್ತು ಮಲಿಕಪ್ಪುರಂ ದೇವಿ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಲಿದ್ದಾರೆ.

ಭದ್ರತಾ ವ್ಯವಸ್ಥೆಗಳು ಮತ್ತು 299 ಸಿಬ್ಬಂದಿಯ ನಿಯೋಜನೆ:

ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಸಾಹೇಬ್ ಅವರು ಗುರುವಾರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದಾದ ಬಳಿಕ ದೇವಾಲಯದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಗಾಗಿ 299 ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇವರಲ್ಲಿ ಸನ್ನಿಧಾನಂನಲ್ಲಿ ಒಬ್ಬ ಡ್ಯೂಟಿ ಮ್ಯಾಜಿಸ್ಟ್ರೇಟ್, ಪಂಪಾದಲ್ಲಿ 144 ಉದ್ಯೋಗಿಗಳು ಮತ್ತು ನಿಲಕ್ಕಲ್‌ನಲ್ಲಿ 160 ಉದ್ಯೋಗಿಗಳು ಸೇರಿದ್ದಾರೆ. ಇದಲ್ಲದೆ, ಕಂದಾಯ ಇಲಾಖೆಯು ಸನ್ನಿಧಾನಂ, ನಿಲಕ್ಕಲ್ ಮತ್ತು ಪಂಪಾದಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸಹ ಸ್ಥಾಪಿಸಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ತಕ್ಷಣವೇ ನಿಭಾಯಿಸಬಹುದು.

ಈ ಬಾರಿ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಮುಖ ಮೂಲ ನಿಲ್ದಾಣಗಳಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಋತುವಿನಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು ಮತ್ತು ಈ ವರ್ಷವೂ ಅಧಿಕಾರಿಗಳು ಬಿಡುವಿನ ವೇಳೆಗೆ ವಿಸ್ತಾರವಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಎರುಮೇಲಿ, ಚೆಂಗನ್ನೂರು, ಕುಮಿಲಿ, ಎಟ್ಟುಮನೂರು ಮತ್ತು ಪುನಲೂರು ಮುಂತಾದ ಪ್ರಮುಖ ಬೇಸ್ ಸ್ಟೇಷನ್‌ಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಬಸ್ ಸೇವೆಗಳನ್ನು ಹೆಚ್ಚಿಸಲಾಗುವುದು

ಪಂಪಾ ಬಸ್ ನಿಲ್ದಾಣವು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಮಕರವಿಳಕ್ಕು ಹಬ್ಬ ಸಮೀಪಿಸುತ್ತಿದ್ದಂತೆ ಪಂಪಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ಸಂಚಾರವನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.

ದೇವಾಲಯವನ್ನು 18 ಗಂಟೆಗಳ ಕಾಲ ತೆರೆಯಲಾಗುತ್ತದೆ

ಈ ಬಾರಿ ದೇವಾಲಯವನ್ನು ದಿನಕ್ಕೆ 18 ಗಂಟೆಗಳ ಕಾಲ ತೆರೆಯಲಾಗುವುದು, ಇದರಿಂದ ಹೆಚ್ಚಿನ ಭಕ್ತರು ಅಯ್ಯಪ್ಪನ ದರ್ಶನವನ್ನು ಪಡೆಯಬಹುದಾಗಿದೆ. ಪ್ರತಿದಿನ 70,000 ಯಾತ್ರಾರ್ಥಿಗಳು ವರ್ಚುವಲ್ ಲೈನ್ ಮೂಲಕ ತಮ್ಮ ದರ್ಶನ ಸ್ಲಾಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ, ಪಂಪಾ, ಎರುಮೇಲಿ ಮತ್ತು ವಾಡಿಪೆರಿಯಾರ್‌ನಲ್ಲಿ ಸ್ಥಳದಲ್ಲೇ ಬುಕಿಂಗ್ ಮಾಡಲು ಹೆಚ್ಚುವರಿ 10,000 ಸ್ಥಳಗಳು ಲಭ್ಯವಿರುತ್ತವೆ.

Continue Reading

LATEST NEWS

Trending

Exit mobile version