Wednesday, April 21, 2021

ಖಾಸಗಿ ಬಸ್ಸುಗಳ ಟೈಂ ಕೀಪಿಂಗ್ ವಿಚಾರಕ್ಕೆ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ವೈರಲ್..!

 

ಖಾಸಗಿ ಬಸ್ಸುಗಳ ಟೈಂ ಕೀಪಿಂಗ್ ವಿಚಾರಕ್ಕೆ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ವೈರಲ್..!

ಉಡುಪಿ: ಟೈಂ ಕೀಪಿಂಗ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಎರಡು ಖಾಸಗಿ ಬಸ್ ಗಳ  ಚಾಲಕರು ಹೊಡೆದಾಡಿಕೊಂಡ ಘಟನೆ ಸೋಮವಾರ   ಪಡುಬಿದ್ರಿಯಲ್ಲಿ ಸಂಭವಿಸಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ವಿಶಾಲ್ ಖಾಸಗಿ ಬಸ್ಸು, ನವದುರ್ಗಾ ಬಸ್ಸಿನ ಚಾಲಕರು ಹೊಡೆದಾಡಿ ಕೊಂಡ ಬಸ್ ಚಾಲಕರಾಗಿದ್ದಾರೆ. ಮಂಗಳೂರಿನಿಂದ ಉಡುಪಿಗೆ ಹೊರಟ ಎರಡು ಬಸ್ಸುಗಳು ಪಡುಬಿದ್ರಿಯಿಂದ ಬರುವಾಗ ಸಮಯದಲ್ಲಿ ಏರುಪೇರಾಗಿ ನವದುರ್ಗಾ ಬಸ್ಸು ಮುಂದೆ ಬಂದಿತ್ತು.

ಹಿಂದಿನಿಂದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ದಿಕ್ ಎಂಬಾತ ಕೆಳಗಿಳಿದು ನವದುರ್ಗಾ ಬಸ್ಸಿನ ಚಾಲಕ ಇಕ್ಬಾಲ್ ಎಂಬವರಿಗೆ ಥಳಿಸಿದ್ದಾನೆ.

ಘಟನ ನಡೆದ ಸಂದರ್ಭದಲ್ಲಿ ಬಸ್‍ಗಳ ಹಿಂದೆ ಕಾಪು ಠಾಣಾಧಿಕಾರಿ ರಾಘವೇಂದ್ರ ತಮ್ಮ ಜೀಪಿನಲ್ಲಿದ್ದು, ಈ ಘಟನೆಯ ಬಗ್ಗೆ ಅವರು ಪಡುಬಿದ್ರಿ ಠಾಣಾಧಿಕಾರಿ ದಿಲೀಪ್‍ರವರಿಗೆ ಮಾಹಿತಿ ನೀಡಿದ್ದಾರೆ.

ಪಡುಬಿದ್ರಿ ಠಾಣಾಧಿಕಾರಿ ದೀಲಿಪ್‍ರವರು ಸ್ಥಳಕ್ಕೆ ಆಗಮಿಸಿ ಎರಡೂ ಬಸ್ಸನ್ನು ಸೀಜ್ ಮಾಡಿ ಇಬ್ಬರು ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಉಡುಪಿ ಕಾಪು ಬಳಿ ಮಾರಿಗುಡಿಯ ಹತ್ತಿರ ಕಬ್ಬಿಣದ ರಾಡು ಹಿಡಿದು ಹೊಡೆದಾಡುವ ಮಟ್ಟಕ್ಕೆ ಇಳಿದಿದ್ದು, ಇಂಥ ಪ್ರಕರಣ ಮರುಕಳಿಸಬಾರದೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...