Monday, July 4, 2022

ದೆಹಲಿ ಗಡಿಯಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರೈತ; ಸರ್ಕಾರದ ವಿರುದ್ಧ ಡೆತ್ ನೋಟ್..!

ದೆಹಲಿ ಗಡಿಯಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರೈತ; ಸರ್ಕಾರದ ವಿರುದ್ಧ ಡೆತ್ ನೋಟ್..!

ದೆಹಲಿ: ದೆಹಲಿಯ ಗಡಿ ಭಾಗದಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಒಗ್ಗಟ್ಟು ತೋರುವ ನಿಟ್ಟಿನಲ್ಲಿ ರೈತನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಗು ಗಡಿಯಲ್ಲಿ ನಡೆದಿದೆ.

ರೈತರ ದುಸ್ಥಿತಿಯನ್ನು ನೋಡಲಾಗದೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ ನೋಟ್​ ಬರೆದಿಟ್ಟ ರೈತ ಸಾವಿಗೆ ಶರಣಾಗಿದ್ದಾನೆ.

ಹರಿಯಾಣದ ಕರ್ನಾಲ್​ನ ಸಂತ ಬಾಬಾ ರಾಮ್​ಸಿಂಗ್​ ಮೃ3ತ ದುರ್ದೈವಿಯಾಗಿದ್ದಾನೆ. ಈತ ಕರ್ನಾಲ್​ನ ಎಸ್​ಜಿಪಿಸಿ ಮುಖಂಡನಾಗಿದ್ದ. ಈತನಿಗೆ ಕರ್ನಾಲ್​ ಮತ್ತು ಸುತ್ತಮುತ್ತ ದೊಡ್ಡ ಪ್ರಮಾಣದ ಅನುಯಾಯಿಗಳಿದ್ದರು ಎನ್ನಲಾಗಿದೆ.ರಾಮ್​ಸಿಂಗ್​ನ ದೇಹದ ಬಳಿಯೇ ಆತ ಬರೆದಿಟ್ಟಿದ್ದ ಡೆತ್​ ನೋಟ್​ ಪತ್ತೆಯಾಗಿದೆ. ‘ರೈತರ ದುಸ್ಥಿತಿ ಮತ್ತು ಸರ್ಕಾರದ ದಬ್ಬಾಳಿಕೆಯಿಂದಾಗಿ ನಾನು ನೊಂದಿದ್ದೀನಿ.ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೆಣಗಾಡುತ್ತಿರುವ ರೈತರ ದುಃಸ್ಥಿತಿಗೆ ನಾನು ಸಾಕ್ಷಿಯಾಗಿದ್ದೇನೆ. ಸರ್ಕಾರವು ಅವರಿಗೆ ನ್ಯಾಯ ನೀಡುತ್ತಿಲ್ಲ ಎಂದು ನನಗೆ ನೋವಾಗಿದೆ. ಇದು ದೊಡ್ಡ ಅಪರಾಧ.

ನನ್ನ ಆತ್ಮಹತ್ಯೆ ಸರ್ಕಾರದ ದಬ್ಬಾಳಿಕೆಯ ವಿರುದ್ಧದ ಧ್ವನಿಯಾಗಿದೆ’ ಎಂದು ಸಾಯುವ ಮುನ್ನ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾನೆ.

LEAVE A REPLY

Please enter your comment!
Please enter your name here

Hot Topics

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ 'ತುಳು ಕೂಟ ಸಿಡ್ನಿ'ಯು ಜು.17ರಂದು ಸಿಡ್ನಿಯಲ್ಲಿ 'ಆಟಿಡ್‌ ಒಂಜಿ ದಿನ' ಆಯೋಜಿಸಿದೆ.ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ...

“ನ್ಯಾಯಮೂರ್ತಿಗಳ ವೈಯುಕ್ತಿಕ ದಾಳಿ ನಡೆಸುವ ಸೋಷಿಯಲ್‌ ಮೀಡಿಯಾ ಅಪಾಯಕಾರಿ”

ನವದೆಹಲಿ: ನ್ಯಾಯಧೀಶರ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ.ಸಂವಿಧಾನದಡಿ ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ಇವುಗಳ ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್...

‘ಕುಡ್ಲ ನಾದುಂಡುಯೇ’: ಮಂಗಳೂರಿನಲ್ಲಿ ಮುಗಿಯುತ್ತಿಲ್ಲ ಪೌರಕಾರ್ಮಿಕರ ಧರಣಿ

ಮಂಗಳೂರು: ರಾಜ್ಯದಾದ್ಯಂತ ಪೌರ ಕಾರ್ಮಿಕರ ಮುಷ್ಕರ ನಾಲ್ಕನೇ ದಿನದತ್ತ ಸಾಗಿದ ಹಿನ್ನೆಲೆ  ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಗಬ್ಬುನಾತ ಹೊಡೆಯುತ್ತಿದೆ.ಧಾರಾಕಾರವಾಗಿ ಮಳೆಯೂ ಸುರಿಯುತ್ತಿರುವುದರಿಂದ ತ್ಯಾಜ್ಯಗಳು ಚರಂಡಿಯಲ್ಲಿ, ನೀರಿನಲ್ಲಿ ತೇಲುತ್ತಿದೆ. ದ್ರವ ತ್ಯಾಜ್ಯಗಳು ಜನರ...