Home ಪ್ರಮುಖ ಸುದ್ದಿ ಸದ್ಯ ವೈರಾಣು ರೋಗದ ಮದ್ದು ಕೊರೊನಾಗೆ ಬಳಕೆ

ಸದ್ಯ ವೈರಾಣು ರೋಗದ ಮದ್ದು ಕೊರೊನಾಗೆ ಬಳಕೆ

ಸದ್ಯ ವೈರಾಣು ರೋಗದ ಮದ್ದು ಕೊರೊನಾಗೆ ಬಳಕೆ

ನವದೆಹಲಿ: ಕೊರೋನಾ ವೈರಸ್ ಸೋಂಕಿಗೆ ಮದ್ದು ಯಾವಾಗ ಕಂಡು ಹಿಡಿಯುತ್ತಾರೆಂದು ಇಡೀ ಜಗತ್ತು ಕಾಯುತ್ತಿದೆ.

ಈ ಮಧ್ಯೆ ಬೇರೆ ಬೇರೆ ವೈರಾಣು ರೋಗ ಮತ್ತು ಕಾಯಿಲೆಗಳಿಗೆ ನೀಡಲಾಗುವ ಔಷಧವನ್ನೇ ಸದ್ಯಕ್ಕೆ ಕೊರೋನಾ ಸೋಂಕಿತರ ಚಿಕಿತ್ಸೆಗೂ ಬಳಕೆ ಮಾಡಲಾಗುತ್ತಿದೆ.

ಇದರಲ್ಲಿ ಕೆಲವು ಯಶಸ್ವಿಯಾದರೆ ಮತ್ತೆ ಕೆಲವು ನಿರುಪಯುಕ್ತವೆನಿಸಿವೆ.

ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಕೊರೋನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ಯೂನ್ ಔಷಧವನ್ನು ಬಳಕೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿದೆ.

ಈ ಹೈಡ್ರಾಕ್ಸಿಕ್ಲೋರೋಕ್ಯೂನ್ ಅನ್ನು ಮಲೇರಿಯಾ ರೋಗದ ಚಿಕಿತ್ಸೆಗೆ ಬಳಸಲಾಗುತ್ತಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಈ ಔಷಧ ನೀಡಬಹುದು.

400ಎಂಜಿ ಡೋಸೇಜ್ ಔಷಧವನ್ನು ದಿನಕ್ಕೆ ಎರಡು ಬಾರಿ ನೀಡಬೇಕು ಎಂದು ಐಸಿಎಂಆರ್ ರೆಕಮೆಂಡ್ ಮಾಡಿದೆ.

ಕೊರೋನಾ ವೈರಸ್ ವಿರುದ್ಧ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಹುದೆಂಬುದು ಫ್ರಾನ್ಸ ನಲ್ಲಿ ನಡೆದ ಪ್ರಯೋಗದಲ್ಲಿ ಗೊತ್ತಾಗಿದೆ.

ಭಾರತದ ಲ್ಯಾಬ್ ಗಳಲ್ಲೂ ಇದರ ಪರೀಕ್ಷೆಯಾಗಿದೆ. ಇದನ್ನು ಆ್ಯಂಟಿ-ಬಯೋಟಿಕ್ ರೀತಿಯಲ್ಲಿ ಬಳಕೆ ಮಾಡಿದರೆ ಪ್ರಯೋಜನವಾಗಬಹುದೆಂಬುದು ಅರಿವಿಗೆ ಬಂದಿದೆ.

ಆದರೆ, ಇದೆಲ್ಲವೂ ಕ್ಲಿನಿಕಲ್ ಟ್ರಯಲ್ ನಲ್ಲಿ ಮಾತ್ರ ಸಾಬೀತಾಗಿರುವಂಥದ್ದು. ವ್ಯಾಪಕವಾಗಿ ಇದರ ಪ್ರಯೋಗ ಆಗಬೇಕಿದೆ.

ಆಗ ಇದು ಕೊರೋನಾ ಚಿಕಿತ್ಸೆಗೆ ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಇನ್ನೂ ಸರಿಯಾದ ಪ್ರಯೋಗಗಳ ಮೂಲಕ ಸಾಬೀತಾಗದೇ ಔಷಧವನ್ನು ವ್ಯಾಪಕವಾಗಿ ಬಳಕೆ ಮಾಡಿದರೆ ಜನರಲ್ಲೂ ತಪ್ಪಾದ ಭದ್ರತಾ ಭಾವನೆ ಮೂಡಬಹುದು.

ಔಷಧ ಇದೆ ಎಂಬ ನೆಮ್ಮದಿಯಲ್ಲಿ ಜನರು ಸ್ವಚ್ಛತೆಗೆ ಮತ್ತೆ ಅಲಕ್ಷತೆ ತೋರಬಹುದು.

ಆದ್ದರಿಂದ ಸರ್ಕಾರವು ಈಗಲೇ ಕೊರೋನಾಗೆ ಮದ್ದು ಇದೆ ಎಂಬುದನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಕೂಡದು ಎಂದು ಹಲವು ತಜ್ಞರು ಎಚ್ಚರಿಸಿದ್ಧಾರೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...