ಮಂಗಳೂರು/ಮೈಸೂರು : ಗೆಳತಿ ದೂರವಾದಳೆಂದು ಗೆಳೆಯನು ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಬಳಿಕ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ.
ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ ವಿನಯ್ ಆ*ತ್ಮಹ*ತ್ಯೆಗೆ ಶರಣಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ವಿನಯ್ ಹಾಗೂ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಯುವತಿಯ ಮನೆಯವರು ಇವರ ಪ್ರೀತಿಯನ್ನು ಒಪ್ಪಿರಲಿಲ್ಲ. ಅಷ್ಟೇ ಅಲ್ಲದೇ, ಅವಳ ಇಚ್ಛೆಗೆ ವಿರುದ್ದವಾಗಿ ಬೇರೆ ಮದುವೆ ಮಾಡಿಸಿದ್ದರು. ಆದರೂ ಅವರಿಬ್ಬರ ಪ್ರೀತಿ ಮುಂದುವರೆದಿತ್ತು. ಯುವತಿ ಪೋಷಕರು ಈ ಪ್ರೀತಿಗೆ ಅಡ್ಡಿಯಾದರೂ. ಮಗಳು ಬೇರೆ ಹುಡುಗನ ಜೊತೆ ಮದುವೆಯಾದರೆ ಎಲ್ಲಾ ಸರಿಯಾಗುತ್ತೆ ಎಂಬುವುದು ಯುವತಿಯ ಮನೆಯವರ ಅಭಿಪ್ರಾಯವಾಗಿತ್ತು. ಆದರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ವಿನಯ್‌ನೊಂದಿಗೆ ಯುವತಿಯ ಸುತ್ತಾಟ ಮುಂದುವರೆದಿದ್ದು, ಕೆಲವು ಬಾರಿ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದ ವೇಳೆ ಮನೆಯವರು ಹುಡುಕಿಕೊಂಡು ಬಂದಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಜನವರಿ 16 ರಂದು ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಅದರಿಂದ ವಿನಯ್ ಅವಮಾನಕ್ಕೊಳಗಾಗಿದ್ದ. ಕೊನೆಗೆ ಮಹಿಳೆಯೂ’ನಾನು ನನ್ನ ಪತಿ ಜೊತೆ ಹೋಗುವೆ’ ಎಂದು ಹೇಳಿದ್ದಳು. ಇದರಿಂದ ಅಸಮಧಾನಗೊಂಡ ವಿನಯ್ ಆಕೆಯನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದು ತನ್ನ ಸಹೋದರಿಯ ಮನೆಗೆ ಹೋಗಿ ನೇ*ಣಿಗೆ ಶರಣಾಗಿದ್ದಾನೆ. ಈ ಸಾ*ವಿಗೆ ಯುವತಿಯ ಮನೆಯವರೇ ಕಾರಣ ಎಂದು ವಿನಯ್ ಮನೆಯವರ ಆರೋಪ ಮಾಡಿದ್ದಾರೆ. ‘ಅವರಿಬ್ಬರು ಚೆನ್ನಾಗಿಯೇ ಇದ್ದರು, ಅವರ ಮನೆಯವರು ಅವಮಾನ ಮಾಡಿದ್ದಕ್ಕೆ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು’ ಅನ್ನೋದು ವಿನಯ್ ಮನೆಯವರ ಒತ್ತಾಯ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬಂಧಿಕರು ದೂರು ನೀಡಿದ್ದಾರೆ.
ಪ್ರೀತಿ ಪರಿಶುದ್ಧವಾಗಿತ್ತು , ಆದರೆ ಕುಟುಂಬಕ್ಕೆ ಅದೇ ಪ್ರೀತಿ ಕಳಂಕವಾಗಿ ಕಂಡಿತ್ತು. ಮನೆಯವರ ಸ್ವಾರ್ಥಕ್ಕೆ ಇಲ್ಲಿ ಒಂದು ಜೀವ ಬ*ಲಿಯಾಗಿದೆ. ಮಗಳು ಮನೆ ಮರ್ಯಾದೆ ಹೌದು ಆದರೆ ಅವಳ ಭಾವನೆಗೂ ಸ್ಪಂದಿಸುವ ಗುಣ ಮನೆಯವರಲ್ಲಿರಬೇಕು. ಅವಳ ಜೀವನ, ಅವಳ ಇಷ್ಟ, ಅವಳ ಆಯ್ಕೆಯಾಗಿರುತ್ತದೆ. ಒಂದು ವೇಳೆ ವಿನಯ್‌ನನ್ನು ಯುವತಿಯ ಮನೆಯವರು ಒಪ್ಪಿದ್ದಲ್ಲಿ ಒಂದು ಜೀವ ಬದುಕುಳಿಯುತ್ತಿತ್ತು. ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಾ ಜೊತೆಯಾಗಿ ಬಾಳಬಹುದಿತ್ತು. ಆದರೆ, ಎಲ್ಲವೂ ಕೈ ಮೀರಿಯಾಗಿತ್ತು. ಏನೇ ಇರಲಿ, ಮದುವೆಯ ನಂತರವೂ ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ವಿನಯ್ ಪ್ರಾ*ಣ ಕಳೆದುಕೊಂಡದ್ದು ಮಾತ್ರ ದುರಂತವೇ ಸರಿ.