Connect with us

    ‘ವಂದೇ ಭಾರತ್ ಮಿಶನ್’ ನಲ್ಲಿ ಕನ್ನಡಿಗರ ಸಂಪೂರ್ಣ ಕಡೆಗಣನೆ.!!

    Published

    on

    ‘ವಂದೇ ಭಾರತ್ ಮಿಶನ್’ ನಲ್ಲಿ ಕನ್ನಡಿಗರ ಸಂಪೂರ್ಣ ಕಡೆಗಣನೆ.!!

    ಮಸ್ಕತ್: ಕೋವಿಡ್-19 ನಿಂದಾಗಿ ವಿದೇಶದಲ್ಲಿ ಸಂಕಷ್ಟಕ್ಕೀಡಾಗಿರುವ ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ,

    ಭಾರತ ಸರಕಾರದ “ವಂದೇ ಭಾರತ್” ಮಿಶನ್ ನಲ್ಲಿ ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಒಟ್ಟು 36 ವಿಮಾನಗಳ ವ್ಯವಸ್ಥೆಯನ್ನು ಕೇಂದ್ರ ಸರಕಾರವು ಬಿಡುಗಡೆಗೊಳಿಸಿದ್ದು, ಇವುಗಳಲ್ಲಿ ಕರ್ನಾಟಕಕ್ಕೆ ಇರುವುದು ಬರೇ ಮೂರು ವಿಮಾನಗಳು ಮಾತ್ರ.

    ಅದರಲ್ಲೂ ಮಂಗಳೂರಿಗೆ ಕೇವಲ ಒಂದು.  ಕೇರಳದ ವಿವಿಧ ನಿಲ್ದಾಣಕ್ಕೆ ಒಟ್ಟು 27, ಹೈದರಾಬಾದ್ ಗೆ 4 ಮತ್ತು ದೆಹಲಿಗೆ 2 ವಿಮಾನಗಳನ್ನು ಸರಕಾರವು ಅನುಮತಿಸಿದೆ.

    ಕರಾವಳಿ ಜಿಲ್ಲೆ ಮಂಗಳೂರು ನಿವಾಸಿಗಳು ಅತಂತ್ರ..

    ಅತೀ ಹೆಚ್ಚು ಅನಿವಾಸಿ ಕನ್ನಡಿಗರನ್ನು ಹೊಂದಿರುವ ಸೌದಿ ಅರೇಬಿಯ, ಒಮಾನ್, ಕುವೈಟ್, ಕತಾರ್, ಬಹರೈನ್ ದೇಶಗಳಿಂದ ಮಂಗಳೂರಿಗೆ ಇದುವರೆಗೆ ಯಾವುದೇ ವಿಮಾನ ವ್ಯವಸ್ಥೆ ಕಲ್ಪಿಸಲಾಗಿಲ್ಲ.

    ಈಗಾಗಲೇ ದುಬೈಯಿಂದ ಮಾತ್ರ ಒಂದು ವಿಮಾನವು ಮಂಗಳೂರಿಗೆ ಬಂದಿಳಿದಿದೆ.

    ಕೋವಿಡ್ -19 ನಿಂದಾಗಿ ಗರ್ಭಿಣಿಯರು, ಸಂದರ್ಶನ (ವಿಸಿಟ್) ವೀಸಾದಲ್ಲಿ ಬಂದಿರುವವರು, ಮಕ್ಕಳು ಮತ್ತು ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ಒಂದು ಪಟ್ಟಿಯೇ ಸರದಿಯಲ್ಲಿದೆ.

    ಒಂದು ವಿಮಾನದಲ್ಲಿ ಗರಿಷ್ಠ 180 ಸೀಟುಗಳು ಮಾತ್ರವೇ ಲಭ್ಯವಿದ್ದು, ಪ್ರಯಾಣದ ಅನುಮತಿಗೆ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಿದವರ ಸಂಖ್ಯೆಯು ಸಾವಿರವನ್ನು ದಾಟಿದೆ.

    ಸರಕಾರದ ಅಧಿಕೃತ ಸುತ್ತೋಲೆಯ ಪ್ರಕಾರ ನೋಂದಾಯಿತ ಪ್ರಯಾಣಿಕರಲ್ಲಿ ಗರ್ಭಿಣಿಯರು, ಮಕ್ಕಳು, ವೃದ್ಧರು, ರೋಗಿಗಳು ಇತ್ಯಾದಿ ಆದ್ಯತೆಯ ಮೇಲೆ ಪರಿಗಣಿಸಲಾಗುತ್ತದೆ.

    ಆದಾಗ್ಯೂ ಸೌದಿ ಅರೇಬಿಯದಿಂದ ಈಗಾಗಲೇ 2,500 ಮಂದಿ, ಒಮಾನ್ ನಲ್ಲಿ ಸರಿಸುಮಾರು 1,000ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದಾರೆ ಎನ್ನಲಾಗಿದ್ದು,

    180 ಮಂದಿಯನ್ನು ಒಂದು ಬಾರಿಗೆ ಕಳುಹಿಸಿ ಕೊಟ್ಟ ನಂತರ ಬಾಕಿ ಉಳಿದವರ ಪಾಡೇನು ಎಂಬ ಆತಂಕ ಕಾಡುತ್ತಿದೆ.

    ಒಮಾನ್ ಕನ್ನಡಿಗರು ಕಂಗಾಲು:  

    ಒಮಾನ್ ಮತ್ತು ಕರ್ನಾಟಕದ ನಡುವೆ ಆತ್ಮೀಯ ಸಂಬಂಧವೊಂದಿದೆ.

    2020ರ ವರ್ಷಾರಂಭದಲ್ಲಿ ಒಮಾನ್ ದೊರೆ ಸುಲ್ತಾನ್ ಖಾಬೂಸ್ ನಿಧನ ಹೊಂದಿದಾಗ ಕರ್ನಾಟಕ ಸರಕಾರವು ಅಧಿಕೃತವಾಗಿ ಶೋಕವನ್ನು ಆಚರಿಸಿತ್ತು.

    ಮಾರ್ಚ್ ನಲ್ಲಿ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನವನ್ನು ಒಮಾನ್ ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.

    ಆದಾಗ್ಯೂ ಕೋವಿಡ್ -19 ನಿಂದಾಗಿ ಸಂಕಷ್ಟಕ್ಕೀಡಾಗಿರುವ ಒಮಾನ್ ಕನ್ನಡಿಗರಿಗೆ ವ್ಯವಸ್ಥೆಗೊಳಿಸಿರುವುದು ಬರೇ ಒಂದು ವಿಮಾನವನ್ನು. ಅದು ಕೂಡ ಬೆಂಗಳೂರಿಗೆ ಮಾತ್ರ.

    ಈಗಾಗಲೇ ಸುಮಾರು 1000ಕ್ಕೂ ಅಧಿಕ ಮಂದಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರಯಾಣಕ್ಕಾಗಿ ಹೆಸರು ನೋಂದಾಯಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಪೈಕಿ ಕನ್ನಡಿಗರ ಸಂಖ್ಯೆ ಅಧಿಕವಿದೆ.

    ಇಲ್ಲಿ ಕನ್ನಡಿಗರ ಪರಿಸ್ಥಿತಿ, ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಕನ್ನಡ ಸುದ್ದಿ ಮಾದ್ಯಮಗಳಲ್ಲಿಯೂ ಒಮಾನ್ ಕನ್ನಡಿಗರ ಬಗ್ಗೆ ಗಂಭೀರ ಚರ್ಚೆಯೂ ನಡೆದಿಲ್ಲ.

    ಇನ್ನು ಒಂದೇ ಕುಟುಂಬದ 9 ಮಂದಿ ಲಾಕ್ ಡೌನ್ ನಿಂದಾಗಿ ಮಸ್ಕತ್ ನಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ.

    ಅವರಲ್ಲಿ ಒಬ್ಬರು ಕುವೈಟ್ ಮತ್ತು ಇನ್ನೊಬ್ಬರು ಕತಾರ್ ನಿಂದ ಬಂದಿದ್ದು, ಇವರೆಲ್ಲರೂ ವಿಸಿಟ್ ವೀಸಾದಲ್ಲಿ ಬಂದವರಾಗಿರುತ್ತಾರೆ.

    ಮಂಗಳೂರು ಮೂಲದ ಈ ಕುಟುಂಬದಲ್ಲಿ 8 ವರ್ಷದ ಬಾಲಕ ಸೇರಿದಂತೆ ಮೂವರು ಹಿರಿಯ ನಾಗರಿಕರಾಗಿದ್ದು, ನಿತ್ಯ ಔಷಧಿ ಸೇವಿಸುವವರಾಗಿದ್ದಾರೆ.

    ವಾಸ್ತವ್ಯ, ಆಹಾರ ಮತ್ತು ಔಷಧಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

    ಅದೇ ರೀತಿ ಮೆದುಳಿನ ನರ ಘಾಸಿಗೊಂಡು ಪಾರ್ಶವಾಯು ಪೀಡಿತರಾಗಿರುವ ಅಶ್ರಫ್ ಮತ್ತು ನಝೀರ್ ಎಂಬ ಇಬ್ಬರು ಕನ್ನಡಿಗರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಭಾರತಕ್ಕೆ ಕಳುಹಿಸಿ ಕೊಡಲೇಬೇಕಾಗಿದೆ.

    ಸೋಶಿಯಲ್ ಫೋರಮ್ ಒಮಾನ್ ಸಂಘಟನೆಯು ಆಸ್ಪತ್ರೆ ಮತ್ತು ರೋಗಿಯ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನೆರವಾಗುತ್ತಿದೆ.

    ಈಗ ಲಭ್ಯವಿರುವ ವಿಮಾನದಲ್ಲಿ ಸ್ಟ್ರೆಚರ್ ಸಹಿತ ರೋಗಿಯನ್ನು ಕಳುಹಿಸಿಕೊಡುವ ವ್ಯವಸ್ಥೆಯೂ ಇಲ್ಲ.

    ಹಾಗಾಗಿ ಎಲ್ಲವೂ ಸಹಜಸ್ಥಿತಿಗೆ ಮರಳುವವರೆಗೆ ಆಸ್ಪತ್ರೆಯಲ್ಲಿ ಇರಿಸುವುದು ಕಷ್ಟ ಸಾಧ್ಯದ ಮಾತು.

    ಈಗಾಗಲೇ ಆಸ್ಪತ್ರೆಯ ಬಿಲ್ 6 ಲಕ್ಷ ರೂಪಾಯಿ ವರೆಗೆ ತಲುಪಿದೆ. ಇದಲ್ಲದೆ ರೋಗ ಬಾಧಿತರಾಗಿ, ಕೆಲಸ ಕಳೆದುಕೊಂಡಿರುವ, ಸಂದರ್ಶನ ವೀಸಾದಲ್ಲಿ ಬಂದಿರುವ, ಗರ್ಭಿಣಿಯರು ಹೀಗೆ ಹಲವು ಮಂದಿ ಕನ್ನಡಿಗರು ಸರದಿಯಲ್ಲಿದ್ದಾರೆ.

    ಮಂಗಳೂರಿನ ಗರ್ಭಿಣಿ ಮಹಿಳೆಯೊಬ್ಬರಿಗೆ ಇನ್ನೂ ಪ್ರಯಾಣದ ಅನುಮತಿ ದೊರೆಯದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.

    ಕೇವಲ ಬೆಂಗಳೂರಿಗೆ ಮಾತ್ರ ಇರುವ ಒಂದು ವಿಮಾನದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಕರಾವಳಿಯ ಕನ್ನಡಿಗರು ಬೆಂಗಳೂರಿನಲ್ಲೇ ಕ್ವಾರಂಟೈನ್ ನಲ್ಲಿ ಉಳಿಯಬೇಕಾಗಿದೆ.

    ಬೆಂಗಳೂರಿನಿಂದ ನೇರವಾಗಿ ತಮ್ಮ ಊರಿಗೆ ತೆರಳುವಂತಿಲ್ಲ.

    ಹೀಗಾಗಿ ಸುಮಾರು 350 ಕಿ. ಮೀ. ದೂರದ ಬೆಂಗಳೂರಿನಿಂದ ಗರ್ಭಿಣಿ ಮಹಿಳೆಯರು ಘಾಟಿ ರಸ್ತೆಯಲ್ಲಿ ಪ್ರಯಾಣಿಸಿದರೆ ಪರಿಸ್ಥಿತಿ ಏನಾಗಬಹುದು.?. ಇವೆಲ್ಲವನ್ನೂ ಮಾನವೀಯ ನೆಲೆಯಲ್ಲಿ ಚಿಂತಿಸಬೇಕಾಗಿದೆ.

    ವಾರದಲ್ಲಿ 2 ವಿಮಾನಗಳು ಕಿಕ್ಕಿರಿದ ಪ್ರಯಾಣಿಕರಿಂದ ಮಂಗಳೂರಿಗೆ ಹಾರಾಡುತ್ತಿದ್ದವು.

    ಒಮ್ಮೆಲೆ ಅದರ ರೆಕ್ಕೆ ಕತ್ತರಿಸಿದರೆ ಪರಿಸ್ಥಿತಿ ಏನಾಗಬಹುದೋ ಅದೇ ಪರಿಸ್ಥಿತಿಯನ್ನು ಇಂದು ಒಮಾನ್ (ಮಸ್ಕತ್) ನಲ್ಲಿರುವ ಅನಿವಾಸಿ ಕನ್ನಡಿಗರು ಅನುಭವಿಸುತ್ತಿದ್ದಾರೆ.

    ನಮ್ಮನ್ನು ಸ್ವತಂತ್ರವಾಗಿ ಮನೆಯ ಕಡೆಗೆ ಹಾರಲು ಬಿಡಿ ಎಂದು ಅಳಲು ತೋಡಿಕೊಳ್ಳುತ್ತಿರುವ ಕನ್ನಡಿಗರ ನೋವಿಗೆ ಸ್ಪಂದಿಸುವಂತೆ “ಸೋಶಿಯಲ್ ಫೋರಮ್ ಒಮಾನ್” ಸರಕಾರಕ್ಕೆ ಮನವಿ ಮಾಡಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ, ಮಗ

    Published

    on

    ಮಂಗಳೂರು/ಮಹಾರಾಷ್ಟ್ರ : ತಂದೆ ಮತ್ತು ಮಗ ಇಬ್ಬರೂ ಒಂದೇ ಮರಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ‘ತಂದೆ ತನಗೆ ಸ್ಮಾರ್ಟ್ ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಂದೇಡ್ ಜಿಲ್ಲೆಯ ಬಿಳೋಳಿ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

    ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆ ಇರುವುದರಿಂದ ಮನೆಗೆ ಬಂದಿದ್ದ.

    ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    ‘ಇದೇ ವೇಳೆ ಬಾಲಕ ಓಂಕಾರ್ ತನ್ನ ತಂದೆಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು, ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ. ಅದೇ ರಾತ್ರಿ ಮಗನನ್ನು ಹುಡುಕಿಕೊಂಡು ಹೋಗಿದ್ದ ತಂದೆಯೂ ಮಗ ನೇಣೂ ಹಾಕಿಕೊಂಡಿದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಾಂದೇಡ್ ಎಸ್ ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

    ಮೃತ ಬಾಲಕನ ತಾಯಿ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದು, ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

     

    Continue Reading

    LATEST NEWS

    ಛೇ! ಇದೆಂಥ ಅಮಾನವೀಯ ಕೃ*ತ್ಯ; ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿ*ಡಿಗೇಡಿಗಳು

    Published

    on

    ಮಂಗಳೂರು/ಬೆಂಗಳೂರು : ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಕೃ*ತ್ಯ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದಿದೆ. ತಡರಾತ್ರಿ ದು*ಷ್ಕರ್ಮಿಗಳು ವಿ*ಕೃತಿ ಮೆರೆದಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ಕೆಚ್ಚಲುಗಳನ್ನು ಕೊಯ್ದು ಕಿ*ಡಿಗೇಡಿಗಳು ಪರಾರಿಯಾಗಿದ್ದಾರೆ.

    ರಾತ್ರಿಯಿಡೀ ಹಸುಗಳು ರ*ಕ್ತದ ಮಡುವಿನಲ್ಲಿ ನರಳಾಡಿವೆ. ಇಂದು(ಡಿ.12) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದಿದ್ದಾರೆ.

    ಸಂಸದ ಪಿಸಿ ಮೋಹನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.

    Continue Reading

    LATEST NEWS

    ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    Published

    on

    ಮಂಗಳೂರು/ಹೈದರಾಬಾದ್ : ರೀಲ್ಸ್ ಮಾಡಲು ಹೋದ ಐವರು ಯುವಕರು ನೀರುಪಾಲಾದ ಘಟನೆ ತೆಲಂಗಾಣದ ಸಿದ್ದಿ ಪೇಟ್ ಜಿಲ್ಲೆಯ ಕೊಂಡ ಪೋಚಮ್ಮ ಸಾಗರ ಜಲಾಶಯದಲ್ಲಿ ನಡೆದಿದೆ.

    ಇಂದು ಏಳು ಮಂದಿ ಯುವಕರ ತಂಡ ಬೆಳಗ್ಗೆ ಒಂಬತ್ತರ ಸುಮಾರಿಗೆ ಜಲಾಶಯದ ಬಳಿ ಬಂದು, ಅಲ್ಲೇ ತಿರುಗಾಡಿ ಕೊನೆಗೆ ನೀರಿಗೆ ಇಳಿದಿದ್ದರು. ನೀರಿಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ದೃಶ್ಯವನ್ನು ಈಜು ಬಾರದ ಇಬ್ಬರು ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು.

    ಇದನ್ನೂ ಓದಿ: ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು

    ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಐವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಇಬ್ಬರು ಅವರ ರಕ್ಷಣೆಗೆ ಮುಂದಾದ್ರೂ ಸಾಧ್ಯವಾಗಿಲ್ಲ. ಮುಶೀರಾಬಾದ್‌ನ ಸಹೋದರರಾದ ಧನುಷ್ (20), ಲೋಹಿತ್ (17), ಬನ್ಸಿಲಾಲ್ ಪೇಟೆಯ ದಿನೇಶ್ವರ್ (17), ಖೈರತಾಬಾದ್‌ನ ಚಾಂತಲ್ ಬಸ್ತಿಯ ಜತಿನ್ (17), ಮತ್ತು ಸಾಹಿಲ್ (19) ನೀರು*ಪಾಲಾದ ಯುವಕರು. ಮೃಗಾಂಕ್‌ (17) ಮತ್ತು ಇಬ್ರಾಹಿಂ (19) ಇಬ್ಬರು ನೀರಿನ ಆಳಕ್ಕೆ ಇಳಿಯದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

    ಜಲಾಶಯದ ಬಳಿ ಜನರ ಓಡಾಟ ಕಡಿಮೆ ಇದ್ದ ಕಾರಣ ಮುಳುಗುತ್ತಿದ್ದ ಐವರ ರಕ್ಷಣೆಗೆ ಯಾರೂ ಸಿಗಲಿಲ್ಲ ಎಂದು, ಬದುಕಿ ಉಳಿದ ಇಬ್ಬರು ಸ್ನೇಹಿತರು ಪೊಲೀಸರ ಬಳಿ ಹೇಳಿದ್ದಾರೆ.

     

    Continue Reading

    LATEST NEWS

    Trending