Connect with us

    DAKSHINA KANNADA

    ಬೈಕ್‌ಗೆ ಡಿ*ಕ್ಕಿ ಹೊಡೆದು ನಿಲ್ಲಿಸದೆ ತೆರಳಿದ ಸಿಟಿ ಬಸ್; ತಡೆದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

    Published

    on

    ಉಳ್ಳಾಲ : ದಂಪತಿ ಹಾಗೂ ಮಗುವಿದ್ದ ಬೈಕ್‌ಗೆ ಅಪಘಾ*ತ ನಡೆಸಿ ನಿಲ್ಲಿಸದೆ ತೆರಳುತ್ತಿದ್ದ  ಸಿಟಿ ಬಸ್ಸನ್ನು ಸಾರ್ವಜನಿಕರು ತಡೆದು ಸಂಚಾರಿ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ದೇರಳಕಟ್ಟೆಯಲ್ಲಿ ನಿನ್ನೆ(ಡಿ.28) ನಡೆದಿದೆ.

    ನೌಷದ್(38), ಸಹಾಲಾ(26) ಹಾಗೂ ಅಲೀಮಾ (3) ಗಾಯಗೊಂಡವರು. ದೇರಳಕಟ್ಟೆಯಿಂದ ಕೊಣಾಜೆ ಕಡೆಗೆ ತೆರಳುತ್ತಿದ್ದ ಸಿಟಿ ಬಸ್ ಅದೇ ಮಾರ್ಗವಾಗಿ ತೆರಳುತ್ತಿದ್ದ ಬೈಕ್ ನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾ*ತವಾಗಿದೆ.  ಪರಿಣಾಮ ಬೈಕ್ ನೆಲಕ್ಕುರುಳಿ ದಂಪತಿ ಮತ್ತು ಮಗು ಗಾ*ಯಗೊಂಡಿದ್ದಾರೆ.

    ಇದನ್ನೂ ಓದಿ : 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಬುಮ್ರಾ !

    ಘಟನೆ ಬಗ್ಗೆ ಚಾಲಕನ ಗಮನಕ್ಕೆ ಬಾರದೇ ಆತ ಬಸ್ಸ್ ನಿಲ್ಲಿಸದೆ ಸಾಗಿದ್ದಾನೆ.  ಸ್ಥಳೀಯರು ಗಮನಿಸಿ ಬಸ್ಸನ್ನು ದೇರಳಕಟ್ಟೆ ಮಸೀದಿ ಸಮೀಪ ಅಡ್ಡಗಟ್ಟಿ ಚಾಲಕ ಹಾಗೂ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ವಶಕ್ಕೆ ಬಸ್ಸನ್ನು ಕೊಟ್ಟಿದ್ದಾರೆ.

     

    DAKSHINA KANNADA

    ಭೀ*ಕರ ರಸ್ತೆ ಅ*ಪಘಾತ ; ಯಕ್ಷಗಾನ ಯುವ ಕಲಾವಿದ ಸಾ*ವು

    Published

    on

    ಮಂಗಳೂರು : ಭೀ*ಕರ ರಸ್ತೆ ಅ*ಪಘಾತದಲ್ಲಿ ವಿಟ್ಲ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಯೋರ್ವ ಮೃ*ತಪಟ್ಟ ಘಟನೆ ಅರ್ಕುಳ ಬಳಿ ನಿನ್ನೆ (ಡಿ.31) ನಡೆದಿದೆ.

    ಪ್ರವೀತ್ ಆಚಾರ್ಯ (22) ಮೃ*ತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ದೇಲಂತಬೆಟ್ಟು ನಿವಾಸಿ ಯಕ್ಷಗಾನ ಕಲಾವಿದ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್‌ ನಿನ್ನೆ (ಡಿ.31) ಬಜಪೆ ಬಳಿಯ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

    ಇದನ್ನೂ ಓದಿ : ನ್ಯೂ ಇಯರ್‌ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ

     

    ಪ್ರವೀತ್ ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದನಾಗಿದ್ದ. ಸಸಿಹಿತ್ಲು ಮೇಳದ ಭರವಸೆಯ ಯುವ ಕಲಾವಿದ ಪ್ರವೀತ್ ಆಚಾರ್ಯ ಎಲ್ಲರೊಂದಿಗೆ ಬೆರೆಯುತ್ತಾ, ಸದಾ ಕ್ರಿಯಾಶೀಲತೆಯಿಂದ ಹಿರಿಯರನ್ನು ಗೌರವಿಸುತ್ತಾ, ಕಿರಿಯರೊಂದಿಗೆ ಸ್ನೇಹಿತನಂತೆ ಇರುತ್ತಿದ್ದ ಕಲಾವಿದನ ಅ*ಗಲುವಿಕೆ ಸಸಿಹಿತ್ಲು ಮೇಳಕ್ಕೆ ಬರಸಿಡಿಲು ಬಡಿದಂತಾಗಿದೆ.

    Continue Reading

    DAKSHINA KANNADA

    ಅಂತಾರಾಜ್ಯ ಬಂಟ ಕ್ರೀಡೋತ್ಸವ; ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡ ಪ್ರಥಮ

    Published

    on

    ಸುರತ್ಕಲ್: ಪಡುಬಿದ್ರೆ ಬಂಟರ ಸಂಘ ಮತ್ತು ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಪಡುಬಿದ್ರೆಯಲ್ಲಿ ದಿ. ರಮೇಶ್ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಅಂತಾರಾಜ್ಯ ಬಂಟ ಕ್ರೀಡೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

    ಸೆಮಿಫೈನಲ್ ನಲ್ಲಿ ಬಂಟ್ವಾಳ ತಂಡದ ಎದುರು ಜಯ ಸಾಧಿಸಿದ ಸುರತ್ಕಲ್ ತಂಡ ಫೈನಲ್ ನಲ್ಲಿ ಮಂಜೇಶ್ವರ ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮುಣಿಯಾಲು ಉದಯಕುಮಾರ್ ಶೆಟ್ಟಿ ಪ್ರಶಸ್ತಿ ಹಸ್ತಾಂತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕ್ರೀಡಾ ಕಾರ್ಯದರ್ಶಿಗಳಾದ ಶಿಶಿರ್ ಶೆಟ್ಟಿ, ಬಬಿತಾ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 75 ಸಾವಿರ ನಗದು ಮತ್ತು ಪ್ರಶಸ್ತಿಯನ್ನು ಒಳಗೊಂಡಿತ್ತು. ತರಬೇತುದಾರರಾದ ನಿನಾದ್ ಜಯರಾಮ್ ಶೆಟ್ಟಿ, ವಿಕ್ರಂ ಮಾಡ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಮಂಗಳೂರು : ನ್ಯೂ ಇಯರ್‌ ಶುಭಾಶಯಗಳ ಲಿಂಕ್‌ ಓಪನ್‌ ಮಾಡುವಾಗ ಇರಲಿ ಎಚ್ಚರ

    Published

    on

    ಮಂಗಳೂರು : ಸೈಬರ್ ವಂಚಕರು ಹೊಸ ವರ್ಷದ ಸಂದರ್ಭ ಬಳಸಿಕೊಂಡು ವಂಚಿಸುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.

    2025ನೇ ಹೊಸ ವರ್ಷಕ್ಕೆ ಶುಭಾಶಯವನ್ನು ಕೋರುವ ಲಿಂಕ್‌ಗಳನ್ನು ಎಪಿಕೆ ಫೈಲ್‌ಗಳಲ್ಲಿ (APK) ಮೊಬೈಲ್‌ಗೆ ಕಳುಹಿಸಿ ಮೊಬೈಲ್‌ನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಮೊಬೈಲ್ ಹ್ಯಾಕ್ ಮಾಡಿದ ಅನಂತರ ಆ ಮೊಬೈಲ್‌ನಿಂದ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಎಪಿಕೆ ಫೈಲ್‌ಗಳನ್ನು ವಾಟ್ಸ್‌ಆ್ಯಪ್ ಸಹಿತ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡರೆ ಅದನ್ನು ಕೂಡಲೇ ಡಿಲೀಟ್ ಮಾಡಬೇಕು. ಒಂದು ವೇಳೆ ಅಂತಹ ಎಪಿಕೆ ಫೈಲ್‌ಗಳನ್ನು ಯಾವುದೇ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಪರಿಚಿತ ವಾಟ್ಸ್‌ಆ್ಯಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದ್ದರೆ ಅಂತಹ ಗ್ರೂಪ್‌ನ ಅಡ್ಮಿನ್‌ಗಳು ಫೈಲ್‌ಗಳನ್ನು ಡಿಲೀಟ್ ಮಾಡಬೇಕು.

    ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದರೆ ಕೂಡಲೇ 1930ಗೆ ಕರೆ ಮಾಡಬೇಕು ಅಥವಾ www.cybercrime.gov.in ನಲ್ಲಿ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ.

    Continue Reading

    LATEST NEWS

    Trending