Thursday, February 9, 2023

ನಾಯಿಗಳನ್ನು ಜೀವಂತ ಹೂತು ಹಾಕಿದ ಪ್ರಕರಣ: 12 ಜನರ ಬಂಧನ

ಶಿವಮೊಗ್ಗ: ನಾಯಿಗಳನ್ನು ಜೀವಂತ ಹೂತು ಹಾಕಿದ ಪ್ರಕರಣ ಸಂಬಂಧ ಒಟ್ಟು 12 ಜನರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಸೆಪ್ಟಂಬರ್ 7ರಂದು ಭದ್ರಾವತಿ ತಾಲೂಕಿನ ಕಂಬದಾಳು- ಹೂಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಜೀವಂತವಾಗಿ ಹೂತು ಹಾಕಲಾಗಿತ್ತು.


ಈ ಪ್ರಕರಣದಲ್ಲಿ ನಾಯಿ ಹಿಡಿದು ಮಾರಕ ಚುಚ್ಚುಮದ್ದು ನೀಡಿದ ವ್ಯಕ್ತಿಗಳು, ಇಬ್ಬರು ಪಂಚಾಯತ್ ಸದಸ್ಯರು, ಜೆಸಿಬಿ ಆಪರೇಟರ್, ಪಂಚಾಯತ್ ಕಾರ್ಯದರ್ಶಿ, ಪಂಚಾಯತ್ ಬಿಲ್ ಕಲೆಕ್ಟರ್ ಸೇರಿ ಒಟ್ಟು 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದ ಕಾರಣ ನಾಯಿಗಳನ್ನು ಹಿಡಿಯಲು ಮೈಸೂರು ಮೂಲದ ವ್ಯಕ್ತಿಗಳಿಗೆ ಸೂಚನೆ ನೀಡಲಾಗಿತ್ತು.
ಇದು ಗ್ರಾಮ ಪಂಚಾಯತ್ ಸಭೆಯಲ್ಲಿ ಮಂಡನೆ ಮಾಡಿ, ಒಪ್ಪಿಗೆ ಪಡೆದು ನಾಯಿ ಹಿಡಿಯಲು ದರ ನಿಗದಿ ಮಾಡಿ, ನಾಯಿ ಹಿಡಿದ ನಂತರ ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿ ಪುನಃ ಅವುಗಳನ್ನು ಜೀವಂತವಾಗಿ ಬಿಡಬೇಕು ಎನ್ನುವ ತೀರ್ಮಾನವಾಗಿತ್ತು.

ಇದನ್ನೆಲ್ಲಾ ಮಾಡದೆ ಪಂಚಾಯತ್ ಸದಸ್ಯರುಗಳು, ಬಿಲ್ ಕಲೆಕ್ಟರ್, ಹಾಗೂ ಪಂಚಾಯತ್ ಕಾರ್ಯದರ್ಶಿ ಸೇರಿ ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿದ್ದಾರೆ.

ಈ ಕುರಿತು ಗ್ರಾಮಸ್ಥರು ಹಾಗೂ ಪ್ರಾಣಿ ದಯಾಸಂಘದವರು ದೂರು‌ ನೀಡಿದ್ದರು.

ಸದ್ಯ ಪೊಲೀಸರು ಹೂತು ಹಾಕಲಾಗಿದ್ದ 60 ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಉಳಿದಂತೆ ನಾಯಿಗಳ ಚರ್ಮ,

ಕೂದಲು ಮತ್ತು ಪಿತ್ತಜನಕಾಂಗಗಳನ್ನು ಎಫ್ ಎಸ್ ಎಲ್ ಗೆ ಪರೀಕ್ಷೆಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಚಾರ್ಮಾಡಿಯಲ್ಲಿ ಶಿಕಾರಿಗಳ ಗುಂಡೇಟಿಗೆ ಕಡವೆ ಬಲಿ..!

ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ನಿನ್ನೆ ನಡೆದಿದೆ.ಬೆಳ್ತಂಗಡಿ : ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ...

ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ: 15,000 ದಾಟಿದ ಮೃತರ ಸಂಖ್ಯೆ-ಏರುತ್ತಲೇ ಇದೆ ಸಾವಿನ ಲೆಕ್ಕ..!

ಟರ್ಕಿ: ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 15,000ಕ್ಕೆ ಏರಿಕೆಯಾಗಿ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 2,992 ಮಂದಿ ಸಾವನ್ನಪ್ಪಿದ್ದಾರೆ.ಈ ಅಂಕಿ...

ಸುರತ್ಕಲ್ ವ್ಯಾಪ್ತಿಯಲ್ಲಿ ಲಘು ಅಪಘಾತ: ಇತ್ತಂಡಗಳ ಮಧ್ಯೆ ಹೊಯ್‌ಕೈ- ಮಾತಿನ ಚಕಮಕಿ..!

ಮಂಗಳೂರು : ಮಂಗಳೂರು ಹೊವಲಯದ  ಸುರತ್ಕಲ್ ಠಾಣಾ ವ್ಯಾಪ್ತಿಯ ಗಣೇಶ್ ಪುರ ಎಂಬಲ್ಲಿ ಬುಧವಾರ ರಾತ್ರಿ ಬೈಕ್- ಕಾರ್ ನಡುವೆ ಲಘು ಅಪಘಾತ ಸಂಭವಿಸಿದ್ದು, ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲ ಕಾಲ...