ಮಂಗಳೂರು/ಬೆಂಗಳೂರು : ಹೊಸ ವರ್ಷದ ಸ್ವಾಗತಕ್ಕಾಗಿ ಎಲ್ಲೆಡೆ ಪಾರ್ಟಿ ಜೋರಾಗಿ ನಡೆಯಲಿದೆ. ಈ ಬೆನ್ನಲ್ಲೇ ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಪಬ್, ವೈನ್ ಸ್ಟೋರ್ ಗಳಲ್ಲಿ ಮದ್ಯಪ್ರಿಯರಿಗೆ ಆಫರ್ ನೀಡುತ್ತಿದ್ದಾರೆ.
ನ್ಯೂ ಇಯರ್ ಪ್ರಯುಕ್ತ ರಾಜ್ಯದ ಮಧ್ಯಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಮೂರು ಬಾಟಲ್ ಮದ್ಯ ಖರೀದಿಸಿದರೆ ಒಂದು ಉಚಿತವಾಗಿ ನೀಡುವ ಘೋಷಣೆ ಮಾಡಲಾಗಿದೆ.
ಇಂದು (ಡಿ.31) ಬೆಳಗ್ಗಿನಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತಿದೆ. ಹೀಗಾಗಿ ವ್ಯಾಪಾರ, ಗ್ರಾಹಕರ ಹೆಚ್ಚಳದ ಜೊತೆಗೆ ಗ್ರಾಹಕರನ್ನು ಸಂಪಾದಿಸಲು ದುಬಾರಿ ಬೆಲೆಯ ಮದ್ಯಗಳಲ್ಲಿ ರಿಯಾಯಿತಿ ಹೆಚ್ಚಿನ ಖರೀದಿಗೆ ಒಂದು ಬಾಟಲ್ ಉಚಿತ ನೀಡುವುದಾಗಿ ಕೆಲವು ಮದ್ಯ ಮಾರಾಟಗಾರರು ಪ್ರಕಟಿಸಿದ್ದಾರೆ.
ಕೆಲವು ಬ್ರಾಂಡ್ ನವರು ಮಾರಾಟ ಹೆಚ್ಚಳಕ್ಕೆ ಮದ್ಯದ ಅಂಗಡಿಯವರಿಗೆ ದುಬಾರಿ ಬೆಲೆಯ 750 ಎಂಎಲ್ ನ ಫುಲ್ ಬಾಟಲ್ ಮೇಲೆ 100-ರಿಂದ 200 ರೂಪಾಯಿವರೆಗೂ ಕಂಪನಿಗಳು ತಮಗೆ ನೀಡಿದ ದರ ರಿಯಾಯಿತಿ ಕೊಡುಗೆಯನ್ನು ಗ್ರಾಹಕರಿಗೆ ನೀಡಿ ವ್ಯಾಪಾರ ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟಗಾರರು ಮುಂದಾಗಿದ್ದು, ಮೂರು ಬಾಟಲ್ ಖರೀದಿಸಿದರೆ ಒಂದು ಬಾಟಲ್ ಉಚಿತವಾಗಿ ನೀಡುವುದಾಗಿ ಕೆಲವು ಬಾರ್ & ರೆಸ್ಟೋರೆಂಟ್ ಗಳು ಘೋಷಿಸಿದೆ.
ಉಳ್ಳಾಲ : ಮಂಗಳೂರು ನಗರ ಹೊರವಲಯದ ಉಳ್ಳಾಲ ನಾಟೆಕ್ಲ ಸಮೀಪದ ತಿಬ್ಲ ಪದವು ಎಂಬಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಮೆಡಿಕಲ್ ಮಾಲಕ ದಾರುಣವಾಗಿ ಸಾ*ವನ್ನಪ್ಪಿದ ಘಟನೆ ನಡೆದಿದೆ.
ದೇರಳಕಟ್ಟೆ ನಿವಾಸಿ ಮೆಡಿಕಲ್ ಸೆಂಟರ್ ಮಾಲೀಕ ಜಲೀಲ್ ಎಂಬವರ ಪುತ್ರ ಹಾಜಿರಾ ಮೆಡಿಕಲ್ ಮಾಲೀಕ ಅವ್ಸಾಫ್ (25) ಸಾ*ವನ್ನಪ್ಪಿದವರು.
ನಿನ್ನೆ ಮಧ್ಯಾಹ್ನ ದೇರಳಕಟ್ಟೆ ಕಡೆಯಿಂದ ತಿಬ್ಲಪದವು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ತಿಬ್ಲಪದವು ಸಮೀಪ ಡಿವೈಡರ್ ಸಮೀಪ ಲಾರಿಯೊಂದು ಹಠಾತ್ತನೆ ತಿರುಗಿದ ಪರಿಣಾಮ ಲಾರಿ ಹಿಂಬದಿಗೆ ಬೈಕ್ ಢಿ*ಕ್ಕಿ ಹೊಡೆದು ಅವ್ಸಾಫ್ ಸಾ*ವನ್ನಪ್ಪಿದ್ದಾರೆ.
ಕೆಲ ವರ್ಷಗಳ ಹಿಂದಷ್ಟೇ ಕಲಿಕೆ ಮುಗಿಸಿ ಅವ್ಸಾಫ್ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಮೆಡಿಕಲ್ ಅಂಗಡಿಯನ್ನು ನಡೆಸುತ್ತಾ ಬಂದಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತ ಸಿಸಿಟಿವಿ ವೀಡಿಯೋ ಸೆರೆಯಾಗಿದೆ.
ಮಂಗಳೂರು/ಮುಂಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಖಾತೆಯೊಂದಿಗೆ ಆರ್ ಅಶ್ವಿನ್ ವಿಚಿತ್ರವಾದ ಸಂವಹನ ನಡೆಸಿದ್ದರು.
ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಈ ಬಗ್ಗೆ ಹಿರಿಯ ಕ್ರಿಕೆಟಿಗರು ಅಪಸ್ವರಗಳನ್ನು ತೆಗೆದಿದ್ದರು. ಆದರೆ ಅಶ್ವಿನ್ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಖಾತೆಯೊಂದಿಗೆ ವಿಚಿತ್ರವಾದ ಸಂವಹನ ನಡೆಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಿನ್ನೆ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈ ಸರಣಿಯನ್ನು 1-3 ರಿಂದ ಸೋತಿದರಿಂದ್ದ, @Nishitha018 ಎಂಬ ಎಕ್ಸ್ ನಲ್ಲಿನ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಬಳಸಿ ಪ್ರೋಫೈಲ್ ನಲ್ಲಿ ರಿತಿಕಾ ಅವರ ಹೆಸರು ಮತ್ತು ಫೋಟೋ ಎಡಿಟ್ ಮಾಡಿ ಹಾಕಿದ್ದರು. ಇದರಲ್ಲಿ, “ಆಸ್ಟ್ರೇಲಿಯಾದವರು ನಮ್ಮನ್ನು ಸ್ವಚ್ಛಗೊಳಿಸಬಹುದು ಎಂದು ಭಾವಿಸಿದ್ದಾರೆ” ಎಂದು ಕಾಮೆಂಟ್ ಹಾಕಿದ್ದಾರೆ.
ಇದು ರಿತಿಕಾ ಅವರ ಅಧಿಕೃತ ಖಾತೆ ಎಂದು ತಿಳಿದು, “ಹಾಯ್ ರಿತಿಕಾ, ಹೇಗಿದ್ದೀರಿ? ನಿಮ್ಮ ಚಿಕ್ಕ ಮಗುವಿಗೆ ಮತ್ತು ಕುಟುಂಬಕ್ಕೆ ನಮಸ್ಕಾರಗಳು”, ಎಂದು ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ರಿತಿಕಾ ಅವರ ಹೆಸರಿನ ಬಳಕೆದಾರ, “ನಾನು ಚೆನ್ನಾಗಿದ್ದೇನೆ ಆಶ್ವಿನ್ ಅಣ್ಣ” ಎಂದು ಬಳಕೆದಾರರು ಉತ್ತರಿಸಿದರು.
ಇದರಿಂದ ಅನುಮಾನಗೊಂಡ ಅಶ್ವಿನ್ ತನ್ನ ಸಂದೇಶವನ್ನು ತಕ್ಷಣ ಅಳಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಅಶ್ವಿನ್ ಅವರು ಮಾಡಿದ ಕಾಮೆಂಟ್ ಈಗ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಖತ್ ಟಾಂಗ್ ಕೊಡುತ್ತಿದ್ದಾರೆ.
ಇತ್ತೀಚೆಗೆ ರೋಹಿತ್ ಶರ್ಮಾ ದಂಪತಿಗಳು ನವೆಂಬರ್ ನಲ್ಲಿ ‘ಅಹಾನ್’ ಎಂಬ ಗಂಡು ಮಗುವನ್ನು ಬರಮಾಡಿಕೊಂಡರು. ಇದರಿಂದ ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯ ಆರಂಭಿಕ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಅವರ ಅಲಭ್ಯತೆಯಿಂದಲೂ ಭಾರತ ತಂಡ ಪರ್ತ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು.
ಕೊನೆಯ ನಿರ್ಣಾಯಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅವರು ತಮ್ಮ ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಗುಳಿಯಲು ನಿರ್ಧರಿಸಿದರು. ಆದಾಗ್ಯೂ ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಸೋತಿದ್ದು, ಸರಣಿಯನ್ನು 1-3 ಅಂತರದಿಂದ ಕಳೆದುಕೊಂಡಿತು.
ಮಂಗಳೂರು/ಚಾಮರಾಜನಗರ : ಇತ್ತೀಚೆಗೆ ಹೃದಯಾ*ಘಾತ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರೂ ಹೃದಯಾ*ಘಾತಕ್ಕೆ ಬ*ಲಿಯಾಗುತ್ತಿದ್ದಾರೆ. ಇದೀಗ ಮತ್ತೊಂದು ಪ್ರಕರಣ ನಡೆದಿದೆ.
ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿ*ದ್ದು ಮೂರನೇ ತರಗತಿ ವಿದ್ಯಾರ್ಥಿನಿ ಇಹಲೋಕ ತ್ಯಜಿಸಿರುವ ಘಟನೆ ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಮೃ*ತ ಬಾಲಕಿ.
ತೇಜಸ್ವಿನಿ ಎಂದಿನಂತೆ ಶಾಲೆಗೆ ಹೋಗಿದ್ದು, ತರಗತಿಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸಲು ನಿಂತಿದ್ದಳು. ಈ ವೇಳೆ ಕುಸಿದುಬಿದ್ದಿದ್ದಾಳೆ. ಅಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ತೇಜಸ್ವಿನಿ ಕೊ*ನೆಯುಸಿರೆಳೆದಿದ್ದಳು ಎಂದು ತಿಳಿದುಬಂದಿದೆ. ಇದ್ದೊಬ್ಬ ಮಗಳನ್ನು ಕಳೆದುಕೊಂಡ ತಂದೆ – ತಾಯಿ ಶೋಕಸಾಗರದಲ್ಲಿ ಮುಳುಗಿದ್ದಾರೆ.