Connect with us

    LATEST NEWS

    15 ರೂಪಾಯಿಗೆ ಮಹಿಳೆಯ ಮೂಗು ಕತ್ತರಿಸಿದ ಬೇಕರಿ ಮಾಲೀಕ

    Published

    on

    ಹದಿನೈದು ರೂಪಾಯಿಗಾಗಿ ಮಹಿಳೆಯೊಬ್ಬಳ ಮೂಗು ಕತ್ತರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಮಕ್ಕಳಿಗೆ ಕುರ್‌ಕುರೆ ಹಾಗೂ ಚಿಪ್ಸ್‌ ಖರೀಸಲು ಮಹಿಳೆ ಅಂಗಡಿಗೆ ಬಂದಿದ್ದಾಗ ಅಂಗಡಿ ಮಾಲೀಕ ಈ ಕೃತ್ಯ ನಡೆಸಿದ್ದಾನೆ.

    ಬಿಹಾರದ ಅರಾರಿಯಾದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಕೇವಲ 15 ರೂಪಾಯಿ ಬಾಕಿಗಾಗಿ ಬೇಕರಿ ಅಂಗಡಿಯವ ಈ ಕೃತ್ಯ ಮಾಡಿದ್ದಾನೆ. ಅರಾರಿಯಾದ ಸಮೋಲ್ ಎಂಬ ಗ್ರಾಮದ ಇಮ್ತಿಯಾಜ್ ಎಂಬವರ ಪತ್ನಿ ಬುಲ್‌ಬುಲ್‌ ಮೂಗು ಕತ್ತರಿಸಿಕೊಂಡ ಮಹಿಳೆ. ಬುಲ್‌ಬುಲ್‌ ಪ್ರತಿ ನಿತ್ಯ ಬರುತ್ತಿದ್ದ ಜಮ್ಷೇದ್ ಎಂಬಾತನ ಬೇಕರಿಯಲ್ಲಿ ಈ ಹಿಂದೆ 15 ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಳು. ಹಾಗಂತ ಅದೇ ಅಂಗಡಿಯಿಂದ ಮಕ್ಕಳಿಗೆ ತಿಂಡಿ ತೆಗೆದುಕೊಂಡು ಹೋಗುವುದನ್ನು ತಪ್ಪಿಸಿರಲಿಲ್ಲ. ಆದರೆ ಈ ಬಾರಿ ಮಕ್ಕಳಿಗೆ ಕುರುಕುರೆ ಹಾಗೂ ಚಿಪ್ಸ್ ತರಲು ಹೋದಾಗ ಹಿಂದಿನ ಬಾಕಿಗಾಗಿ ಜಗಳ ನಡೆದಿದೆ.

    ಹಣ ಪಡೆದುಕೊಂಡು ಹಿಂದಿನ ಬಾಕಿಗೆ ವಜಾ ಮಾಡಿಕೊಂಡ ಜಮ್ಷೇದ್ ಬಳಿಕ ಬುಲ್‌ಬುಲ್‌ಗೆ ಕುರುಕುರೆ ಹಾಗೂ ಚಿಪ್ಸ್ ನೀಡಲು ನಿರಾಕರಿಸಿದ್ದಾನೆ. ಆದ್ರೆ ಮಕ್ಕಳಿಗಾಗಿ ಚಿಪ್ಸ್ ಕೊಡು ಎಂದು ಗೋಗರೆದರೂ ಮನಕರಗದ ಆತ ಜಗಳಕ್ಕೆ ನಿಂತಿದ್ದಾನೆ. ಈ ವೇಳೆ ಬುಲ್‌ಬುಲ್‌ ಹಾಗೂ ಜಮ್ಷೇದ್ ನಡುವೆ ಜಗಳ ನಡೆದಿದ್ದು, ಸ್ಥಳದಲ್ಲಿ ಸೇರಿದ್ದ ಜನರು ಜಗಳ ನಿಲ್ಲಿಸಿದ್ದಾರೆ. ಈ ನಡುವೆ ಜಮ್ಷೇದ್ ಮನೆಯ ಹೆಂಗಸರು ಸೇರಿ ಬುಲ್‌ಬುಲ್‌ ಮೇಲೆ ಹಲ್ಲೆ ನಡೆಸಿದ್ದು, ಜಮ್ಷೇದ್ ತಂದೆ ಬೇಕರಿಯಲ್ಲಿದ್ದ ಹರಿತವಾದ ಚಾಕು ತಂದು ಬುಲ್‌ಬುಲ್ ಮೂಗು ಕತ್ತರಿಸಿದ್ದಾನೆ.

    ಮೂಗು ಕತ್ತರಿಸಿಕೊಂಡ ಬುಲ್‌ ಬುಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸಾಗಿದ್ದು, ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ ಎಂದು ಬುಲ್‌ಬುಲ್ ತಾಯಿ ಅವಲತ್ತುಕೊಂಡಿದ್ದಾಳೆ

    LATEST NEWS

    ಮಕ್ಕಳು ಅಪ್ಪ – ಅಮ್ಮನ ಮುಂದೆ ಸುಳ್ಳು ಹೇಳಲು ಮುಖ್ಯ ಕಾರಣಗಳೇನು ಗೊತ್ತಾ ??

    Published

    on

    ಮಕ್ಕಳು ಏನೇ ವಿಷಯಗಳಿದ್ದರೂ ಅದನ್ನು ತಂದೆ – ತಾಯಿಯ ಬಳಿ ಹೇಳಲು ಬಯಸುತ್ತಾರೆ. ಆದರೆ, ಹೀಗೆ ಹೇಳಲು ಬಂದ ಮಕ್ಕಳ ಮೇಲೆ ಕೆಲವೊಮ್ಮೆ ಪೋಷಕರು ರೇಗುವುದುಂಟು. ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲದೆ ಮಾಡುವ ಈ ತಪ್ಪು ಮುಂದೆ ಪೋಷಕರಿಗೇ ಸಮಸ್ಯೆಯಾಗಬಹುದು.

    ಅಮ್ಮನ ಅಡುಗೆ ರುಚಿಯ ವಿಚಾರ ಇರಬಹುದು, ಸಹೋದರ ಸಹೋದರಿಯರ ನಡುವಿನ ಜಗಳ ಇರಬಹುದು, ಶಾಲೆಯಲ್ಲಿ ನಡೆದಿರುವ ಅದ್ಯಾವುದೋ ಸಂತಸದ ಅಥವಾ ಬೇಸರದ ಸಂಗತಿ ಇರಬಹುದು, ಪೋಷಕರು ವ್ಯವಧಾನದಿಂದ ಕೇಳಿಸಿಕೊಳ್ಳಬೇಕು. ಅದರ ಬದಲಾಗಿ ಮಕ್ಕಳು ಅದೇನೋ ಹೇಳಲು ಬಂದಾಗ ಅಸಹನೆ, ಸಿಟ್ಟು ಪ್ರದರ್ಶಿಸಿದರೆ ಮಕ್ಕಳ ಮೃದು ಮನಸಿಗೆ ಘಾಸಿ ಉಂಟಾಗುವ ಅಪಾಯ ಇದೆ. ಇದು ಪೋಷಕರನ್ನು ಮೆಚ್ಚಿಸಲು ಅಥವಾ ಗಮನವನ್ನು ತಮ್ಮತ್ತ ಸೆಳೆಯಲು ಮಕ್ಕಳು ಸುಳ್ಳಿನ ದಾರಿ ಹಿಡಿಯಲು ಅವಕಾಶ ಮಾಡಿಕೊಡುವ ಅಪಾಯ ಇದೆ.
    ಇನ್ನು ಮಕ್ಕಳೇನೋ ಮಾಡಬೇಕು ಎಂಬ ತುಡಿತವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದಾಗ ಗದರಿಸಿ ಸುಮ್ಮನಿರುವಂತೆ ಮಾಡುವುದು ಕೂಡ ಅವರ ಭವಿಷ್ಯವನ್ನು ಚಿವುಟಿದಂತೆ. ಇದರಿಂದ ತಮ್ಮ ಕನಸನ್ನು ಪೋಷಕರು ಕಮರಿ ಹಾಕಿದ್ರು ಎಂಬ ಅಸಮಾಧಾನ ಮಕ್ಕಳ ಮನಸಿನ ಮೂಲೆಯಲ್ಲಿ ಕೂತು ಬಿಡುತ್ತದೆ. ಇದು ಮುಂದೆ ಬೆಳೆದು ದೊಡ್ಡವರಾದ ಮಕ್ಕಳಲ್ಲಿ ಪೋಷಕರು ತಮಗೇನು ಮಾಡಿಲ್ಲ ಎಂಬ ಭಾವ ಮೂಡಿಸುವ ಸಾಧ್ಯತೆ ಕೂಡ ಇದೆ. ತಾನು ಮಾಡಬೇಕು ಅಂದುಕೊಂಡಿದ್ದನ್ನು ಮನೆಯಲ್ಲಿ ಸುಳ್ಳು ಹೇಳಿ ಮಾಡಲು ಆರಂಭಿಸಿ ಮುಂದೆ ಸುಳ್ಳು ಹೇಳುವುದನ್ನೇ ಮೈಗೂಡಿಸುವ ಮನಸ್ಥಿತಿಗೆ ಮಕ್ಕಳು ಬರಬಹುದು.
    ಹುಟ್ಟಿದ ಮಗುವಿನ ಲಾಲನೆ ಪಾಲನೆ ಮಾಡುವ ಪೋಷಕರು ಮಗುವಿಗೆ ನಡೆಯುವುದರಿಂದ ಹಿಡಿದು ಮಾತನಾಡುವುದು, ತಿನ್ನುವುದು ಎಲ್ಲವನ್ನೂ ಕಲಿಸುತ್ತಾರೆ. ಆದರೆ, ಮಕ್ಕಳು ಬೆಳೆಯುತ್ತಾ ಹೋದಂತೆ ಕೆಲವೊಂದು ಬಾರಿ ಮಕ್ಕಳು ಕೇಳುವ ಪ್ರಶ್ನೆಗಳು, ಮಾಡುವ ಹಠಗಳು, ಹಾಗೂ ಅವರ ಬೇಡಿಕೆಗಳು ಕಿರಿಕಿರಿ ಅನಿಸಿ ಬಿಡುತ್ತದೆ. ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬುವುದು ಪೋಷಕರಿಗೆ ಗೊತ್ತಿರುತ್ತದೆಯಾದ್ರೂ ಕೆಲವೊಂದು ವಿಚಾರವನ್ನು ಮಕ್ಕಳಿಗೆ ನವಿರಾಗಿ ವಿವರಿಸಿ ಅರ್ಥೈಸಬೇಕು. ಆದ್ರೆ, ಎಲ್ಲವನ್ನೂ ನವಿರಾಗಿ ನಿರಾಕರಿಸುತ್ತಾ ಹೋದರೆ ನನ್ನ ಹೆತ್ತವರು ನನಗಾಗಿ ಏನೂ ಮಾಡುತ್ತಿಲ್ಲ ಎಂಬ ಭಾವ ಮಕ್ಕಳಲ್ಲಿ ಮೂಡಬಹುದು. ತಮ್ಮ ಕನಸಿಗೆ ಪೋಷಕರೇ ಅಡ್ಡಿ ಎಂಬ ಸಣ್ಣದೊಂದು ಅಸಹನೆ ಇಲ್ಲಿಂದಲೇ ಆರಂಭವಾಗಬಹುದು.

    ಸಣ್ಣ ಪ್ರಾಯದಲ್ಲಿ ಮಕ್ಕಳು ದೂರು ಹೇಳುವ ಪ್ರಮುಖ ಕಾರಣಗಳು :

    ಗಮನವನ್ನು ತನ್ನತ್ತ ಸೆಳೆಯಲು:

    ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದು, ಒಬ್ಬರ ಕಡೆ ಹೆಚ್ಚಿನ ಗಮನ ನೀಡುತ್ತಾರೆ ಅಂತ ಮಗುವಿನ ಮನಸಿನಲ್ಲಿ ಮೂಡಿದಾಗ ಗಮನ ತನ್ನತ್ತ ಸೆಳೆಯಲು ಸುಳ್ಳು ದೂರುಗಳನ್ನು ಹೇಳಲು ಆರಂಭಿಸುತ್ತಾರೆ. ಇದು ಶಾಲೆಯಲ್ಲೂ , ಕುಟುಂಬ ಸದಸ್ಯರ ಮುಂದೆಯೂ ನಡೆಯುವ ಮೂಲಕ ಪೋಷಕರನ್ನು ಮುಜುಗರಕ್ಕೆ ಸಿಲುಕಿಸಬಹುದು. ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಮನೋಭಾವನೆಯಿಂದ ಮಕ್ಕಳು ಸಣ್ಣ ಸಣ್ಣ ವಿಚಾರಗಳಲ್ಲೂ ಜಗಳ ಆಡುವುದು, ಸುಳ್ಳು ಹೇಳುವುದು ಮಾಡಬಹುದು. ಇಂತಹ ವಿಚಾರ ಬಂದಾಗ ಮಕ್ಕಳ ಜಗಳವನ್ನು ನಾಜೂಕಾಗಿ ಪರಿಹರಿಸಬೇಕು.
    ಅಸಹನೆ , ಸಿಟ್ಟು, ಜಗಳ , ದೂರುಗಳು ಇವುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
    ಮಕ್ಕಳು ಪದೇಪದೇ ಸಿಟ್ಟಾಗುವುದು, ಅಸಹನೆಯಿಂದ ಒಂಟಿಯಾಗಿ ಕೂರುವುದು, ಸ್ನೇಹಿತರ ಜೊತೆ ಜಗಳ ಮಾಡುವುದು, ದೂರುಗಳನ್ನು ಹೇಳಿಕೊಂಡು ಬರುತ್ತಾರೆ ಅಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು ಯಾಕಾಗಿ ಹೀಗೆ ಎಂಬುವುದನ್ನು ಮೊದಲು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳಿ. ಪೋಷಕರಾಗಿ ತಮ್ಮಿಂದೇನು ತಪ್ಪಾಗಿಲ್ಲ ಎಂದರೆ ಒಂದು ಬಾರಿ ತಜ್ಞ ವೈದ್ಯರನ್ನು ಸಂಪರ್ಕಿಸಿ.

    Continue Reading

    LATEST NEWS

    ಉಡುಪಿ : ಶೀರೂರು ಪರ್ಯಾಯಕ್ಕೆ ಬಾಳೆ ಮುಹೂರ್ತ ಸಂಪನ್ನ

    Published

    on

    ಉಡುಪಿ : ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠ ಏರಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಇಂದು ಬಾಳೆ ಮುಹೂರ್ತ ನೆರವೇರಿಸಿದರು.  ಪೂರ್ಣ ಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ಭಾವಿ ಪರ್ಯಾಯ ಶ್ರೀಗಳು ಬಾಳೆ ಸಸಿ ನೆಟ್ಟರು.

    ಮುಹೂರ್ತಕ್ಕೂ ಮುನ್ನ ಕೃಷ್ಣ, ಮುಖ್ಯ ಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.  ಬಳಿಕ ಶ್ರೀಗಳು ಶೀರೂರು ಮಠ, ಅನಂತೇಶ್ವರ, ಚಂದ್ರಮೌಳೀಶ್ವರನ ದರ್ಶನ ಪಡೆದರು.  ಮೆರವಣಿಗೆಯಲ್ಲಿ ಬಾಳೆ ಗಿಡಗಳನ್ನು ಹೊತ್ತು ಸಾಗಿ ಮುಹೂರ್ತ ಕಾರ್ಯ ನೆರವೇರಿಸಲಾಯಿತು.

    ಇದನ್ನೂ ಓದಿ : ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ!

    ಈ ಬಾಳೆಯ ಎಲೆಗಳನ್ನು ಬಳಸಿಕೊಂಡು ಪರ್ಯಾಯ ಅವಧಿಯಲ್ಲಿ ಅನ್ನದಾಸೋಹ ಕಾರ್ಯ ನಡೆಯಲಿದೆ. ಇನ್ನು ಒಂದು ವರ್ಷಗಳ ಕಾಲ ಶೀರೂರು ಶ್ರೀ ದೇಶಾದ್ಯಂತ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಲಿದ್ದಾರೆ.

    Continue Reading

    LATEST NEWS

    ಮಂಗಳೂರು: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ

    Published

    on

    ಮಂಗಳೂರು: ಮನೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಅತ್ತಾವರದಲ್ಲಿ ಶುಕ್ರವಾರ(ಡಿ.6) ನಡೆದಿದೆ.

    ಮನೆ ಮಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ನ ರೇಗ್ಯುಲೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಮನೆಮಂದಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.

    ಬಳಿಕ ಪಾಂಡೇಶ್ವರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

    Continue Reading

    LATEST NEWS

    Trending