Connect with us

NATIONAL

13 ವರ್ಷದ ಹುಡುಗನಿಗೆ ಐಪಿಎಲ್ ನಲ್ಲಿ ಕೋಟಿ-ಕೋಟಿ !

Published

on

ಮಂಗಳೂರು/ಸೌದಿ ಅರೇಬಿಯಾ: ಐಪಿಎಲ್ ನ ಮೆಗಾ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 13 ವರ್ಷದ ಹುಡುಗ ಹೆಸರು ನೊಂದಯಿಸಿದ್ದ. ಆದರೆ, ಆ ಹುಡುಗನನ್ನು ಕೋಟಿ ಬೆಲೆಗೆ ತಂಡ ಖರೀದಿಸಿದೆ.

ಐಪಿಎಲ್ 2025ರ ಮೆಗಾ ಹರಾಜಿಗೆ ಹೆಸರು ನೊಂದವಣಿ ಮಾಡುವ ಮೂಲಕ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ 13 ವರ್ಷದ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದರು. ಸದ್ಯ ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನ್ ಮೂಡಿಸಿದ ಈ ಹುಡುಗನ ಮೇಲೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಕಣ್ಣು ಬಿದ್ದಿದೆ.

ವೈಭವ್ ಸೂರ್ಯವಂಶಿ ಮೂಲ ಬೆಲೆ 30ಲಕ್ಷ ರೂಪಾಯಿ ಆಗಿತ್ತು. ಆದರೆ ವೈಭವ್ ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಆರ್ ಪೈಪೊಟಿಗೆ ಬಿದ್ದಿತ್ತು. ದೆಹಲಿ ತಂಡ 1 ಕೋಟಿ ಬಿಡ್ ಮಾಡ್ತಿರೋದಾಗಿ ಹೇಳಿತು. ಆದರೆ ರಾಜಸ್ಥಾನ 1.10 ಕೋಟಿ ನೀಡಿ ಖರೀದಿಸಿತು. ವೈಭವ್ ಮೂಲ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗುವ ಮೂಲಕ, ಚಿಕ್ಕ ವಯಸ್ಸಿನಲ್ಲೇ ತಮ್ಮ ಹೆಸರಿನಲ್ಲಿ ದಾಖಲೆಗಳನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!
ಬಿಸಿಸಿಐ ಪ್ರಕಟಿಸಿರುವ ಅಂತಿಮ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ 491ನೇ ಸ್ಥಾನದಲ್ಲಿದ್ದು ಆನ್ ಕ್ಯಾಪ್ಡ್ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಸೂರ್ಯವಂಶಿ ಪ್ರತಿಭೆಯನ್ನು ಗುರುತಿಸಿರುವ ರಾಜಸ್ಥಾನ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ , ಕೊನೆಗೂ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಭವ್ ಸೂರ್ಯವಂಶಿ ಬಿಹಾರದ ಸಮಸ್ತಿಪುರ ಮೂಲದವರು ಇವರು ತಮ್ಮ 12ನೇ ವಯಸ್ಸಿನಲ್ಲಿ ಅಂದರೆ 2023ರಲ್ಲಿ ರಣಜಿಗೆ ಪಾದರ್ಪಣೆ ಮಾಡಿದರು. ಅಂಡರ್-19ನಲ್ಲಿ ಆಸ್ಟ್ರೇಲಿಯಾ ವಿರುದ್ದ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಆಕರ್ಷಕ ಶತಕ ಬಾರಿಸಿದ್ದರು. ಕೇವಲ 62 ಬಾಲ್ ನಲ್ಲಿ 104 ರನ್ ಗಳಿಸಿ ಗಮನ ಸೆಳೆದಿದ್ದರು.
ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಹಾಗೂ ವಿನೂ ಮಂಕಡ್ ಟ್ರೋಫಿಗಳನ್ನು ಆಡಿದ್ದಾರೆ. ಇದೀಗ ಐಪಿಎಲ್ ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

LATEST NEWS

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ: ಮುಂದಿನ ಸಿಎಂ ಇವರೇ ?

Published

on

ಮಂಗಳೂರು/ಮಹಾರಾಷ್ಟ್ರ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಗಳಿಸಿದೆ. ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿ ಯಾರೆಂಬ ಕುತೂಹಲದ ನಡುವೆಯೇ ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.


ಇಂದು ಬೆಳಿಗ್ಗೆ ರಾಜಭವನಕ್ಕೆ ತೆರಳಿದ ಅವರು ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಉಪಮುಖ್ಯಮಂತ್ರಿಗಳಾದ ಅಜಿತ್ ಪವರ್ ಹಾಗೂ ದೇವೇಂದ್ರ ಫಡ್ನವಿಸ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಸ್ಫೋಟ – 3 ಮನೆಗಳು ಕುಸಿದು ಇಬ್ಬರು ಸಾ*ವು
ಇನ್ನೂ ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನಾ ಶಿಂಧೆ ಬಣ 57, ಎನ್ ಸಿಪಿ ಅಜಿತ್ ಪವರ್ ಬಣ 41 ಹಾಗೂ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಕೇವಲ 49 ಸೀಟುಗಳನ್ನು ಗಳಿಸಿ ತೀವ್ರ ಮುಖಭಂಗ ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲದಂತಾಗಿದೆ.

ಮುಂದಿನ ಮುಖ್ಯಮಂತ್ರಿ ಯಾರು ?
ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ದೇವೇಂದ್ರ ಫಡ್ನವಿಸ್ ಜವಾಬ್ದಾರಿಯನ್ನು ಪಡೆಯಬಹುದು ಹಾಗೂ ಉಪಮುಖ್ಯಂತ್ರಿಗಳಾಗಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವರ್ ಅಧಿಕಾರ ವಹಿಸುವ ಸಾಧ್ಯತೆ ಇದೆ.

Continue Reading

LATEST NEWS

ಮಧ್ಯಪ್ರದೇಶದಲ್ಲಿ ಸ್ಫೋಟ – 3 ಮನೆಗಳು ಕುಸಿದು ಇಬ್ಬರು ಸಾ*ವು

Published

on

ಮೊರೆನಾ: ಮಧ್ಯಪ್ರದೇಶದ ಮೊರೆನಾ ನಗರದಲ್ಲಿ ಮಧ್ಯರಾತ್ರಿಯ ಸುಮಾರಿಗೆ ಮೂರು ಮನೆಗಳು ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಥೋಡ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಫೋಟಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಫೋರೆನ್ಸಿಕ್ ತಂಡವೂ ಸ್ಥಳದಲ್ಲಿದೆ ಎಂದು ಅವರು ಹೇಳಿದ್ದಾರೆ.

Continue Reading

NATIONAL

‘ವಿಶ್ವ ಚೆಸ್ ಚಾಂಪಿಯನ್‌ಶಿಪ್‌’ ನಲ್ಲಿ ಗುಕೇಶ್‌ಗೆ ಸೋಲಾರಂಭ !!

Published

on

ಮಂಗಳೂರು/ಸಿಂಗಾಪುರ: ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ವಿರುದ್ಧದ ವಿಶ್ವ ಚೆಸ್ ಚಾಂಪಿಯನ್ ಶಿಪ್ ಫೈನಲ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತದ ಡಿ.ಗುಕೇಶ್ ಸೋಲನುಭವಿಸಿದ್ದಾರೆ. ಇದರೊಂದಿಗೆ 14 ಸುತ್ತುಗಳ ಟೂರ್ನಿಯಲ್ಲಿ ಲಿರೆನ್ 1 ಅಂಕದ ಮುನ್ನಡೆ ಸಾಧಿಸಿದ್ದಾರೆ.

ಕ್ಲಾಸಿಕಲ್ ಚೆಸ್‌ನಲ್ಲಿ ಒಟ್ಟು 40 ಮೂವ್‌ಗಳಿಗೆ 120 ನಿಮಿಷ ನೀಡಲಾಗುತ್ತದೆ. ಮೊದಲ ಗೇಮ್‌ನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ 18 ವರ್ಷದ ಗುಕೇಶ್, 12ನೇ ಕಾಯಿ ಚಲಾಯಿಸುವಾಗ ಅರ್ಧ ಗಂಟೆ ಮುನ್ನಡೆಯಲ್ಲಿದ್ದರು. ಆದರೆ ಬಳಿಕ ಲಿರೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಕೊನೆಯಲ್ಲಿ ಸಮಯದ ಅಭಾವ ಎದುರಿಸಿದ ಗುಕೇಶ್, ಪಂದ್ಯವನ್ನು ಲಿರೆನ್‌ಗೆ ಬಿಟ್ಟುಕೊಟ್ಟರು. ಇಬ್ಬರ ನಡುವೆ ಇನ್ನೂ 13 ಸುತ್ತಿನ ಗೇಮ್‌ಗಳು ನಡೆಯಬೇಕಿದೆ. 2ನೇ ಗೇಮ್ ಮಂಗಳವಾರ ನಡೆಯಲಿದೆ

 

Continue Reading

LATEST NEWS

Trending

Exit mobile version