ಬಂಟ್ವಾಳ: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ಇಂದು ನಡೆದಿದೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಳನ್ನು ವಿಠಲ್ ಜೇಸೀಸ್ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಎಂದು ಗುರುತಿಸಲಾಗಿದೆ. ಈಕೆ ಅಳಿಕೆ ಗ್ರಾಮದ ನಿವಾಸಿಯಾಗಿದ್ದಾಳೆ.
ಅನ್ವಿತಾ ಜೇಸೀಸ್ ಶಾಲೆಯ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇಂದು ಹಠಾತ್ ಆಗಿ ಸಂಭವಿಸಿದ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾಳೆ.
ತಂದೆ ವಿನಯ್ ಹೆಗ್ಡೆ ಹಾಗೂ ತಾಯಿ ಸಾಯಿ ಗೀತಾ ಅವರನ್ನು ಅಗಲಿದ್ದಾರೆ.