Connect with us

LATEST NEWS

ದುಬೈಯಲ್ಲಿ ತುಳು ಪಾತೇರ್ಗ ತುಳು ಒರಿಪಾಗ ಸಂಘದ 8 ನೇ ವರ್ಷದ ಗೌಜಿ ಗಮ್ಮತ್ತ್..!

Published

on

ದುಬೈ : ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 8ನೇ ವರ್ಷದ ಗೌಜಿಗಮ್ಮತ್ತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು ಮಾರ್ಚ್ 20 ರ ಆದಿತ್ಯವಾರ ದುಬೈಯ ಝಬೀಲ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆಯಿತು .

ತುಳುನಾಡಿನ ಸಂಪ್ರದಾಯದಂತೆ ಭಾಗವಹಿಸಲು ಬಂದಂತಹ ತುಳು ಭಾಂದವರನ್ನು ಬೆಲ್ಲ ನೀರು ನೀಡುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ದುಬೈಯ ಖ್ಯಾತ ಉದ್ಯಮಿ ಹಾಗೂ ತಂಡದ ಗೌರವ ಮಾರ್ಗದರ್ಶಕರು ಆದಂತಹ ಶ್ರೀಯುತ ಅಜ್ಮಲ್ ಸಯ್ಯಿದ್ ಹಾಗೂ ಶ್ರೀಮತಿ ಅಸ್ಮಾತ್ ಅಜ್ಮಲ್ ದಂಪತಿಗಳು ಕಳಸೆಗೆ ಸೇರಿನಿಂದ ಭತ್ತವನ್ನು ತುಂಬಿಸವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು.

ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಭಾಕರ್ ಶೆಟ್ಟಿ, ಸತೀಶ್ ಉಲ್ಲಾಳ್, ಶ್ರೀಮತಿ ಬೇಬಿ ಕೋಟ್ಯಾನ್, ನೋವೆಲ್ ಅಲ್ಮೇಡ, ಆನಂದ ಬೈಲೂರು ಹಾಗೂ ಸಂದೀಪ್ ಕಾರ್ಕಳ ಉಪಸ್ಥಿತರಿದ್ದರು.

ದಕ್ಷಿತ್ ಪ್ರೇಮ್ ಜೀತ್ ರವರನ್ನು ಅಮರ್ ನಂತೂರು ಅಡಿಕೆಮರದ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುದರ ಮೂಲಕ ತುಳುನಾಡಿನ ಆಟಗಳಿಗೆ ಚಾಲನೆ ನೀಡಿದರು.

ಭಾಗವಹಿಸಲು ಬಂದ ತುಳುವರನ್ನು ನೊಗ , ಬಲ್ಲ್, ನಾಯೆರ್,ಅಡ್ಡಪಲಾಯಿ ಎಂಬ ನಾಲ್ಕು ತಂಡಗಳಾಗಿ ವಿಂಗಡಿಸಿ ನಂತರ ತುಳುನಾಡಿನ ಕ್ರೀಡೆಗಳಾದ ಕಬ್ಬಡಿ, ಲಗೋರಿ, ಹಗ್ಗ ಜಗ್ಗಾಟ , ಸೈಕಲ್ ಚಕ್ರ ಓಟ, ರಸಪ್ರಶ್ನೆ ಚಿತ್ರದ ಆಟ ಅಭಿನಯದ ಆಟ , ಮಕ್ಕಳಿಗೆ ಕಪ್ಪೆಜಿಗಿತ, ಲಿಂಬು ಚಮಚ, ಪುಸ್ತಕದ ಓಟ, ಮುಂತಾದ ಆಟಗಳನ್ನು ಹಮ್ಮಿಕೊಳ್ಳಲಾಯಿತು .

ನಾಲ್ಕು ತಂಡಗಳಿಗೆ ನೀಡಿದ ವಿಷಯಗಳಾದ ಬಯಕೆ ಬೊಕ್ಕ ತೊಟ್ಟಿಲ್ ಪಾಡುನ ಕ್ರಮ, ಅಂಗನವಾಡಿ, ಮಾಮಿ ಮರ್ಮಲ್, ಜಾತ್ರೆ ಬೊಕ್ಕ ಕೊರಿದ ಕಟ್ಟ ವಿಷಯದ ಬಗ್ಗೆ ತಂಡದ ಅಭಿನಯ ಎಲ್ಲರ ಮನ ಸೂರೆ ಗೊಂಡಿತು.

ನೋವೆಲ್ ಅಲ್ಮೇಡಾ ಮತ್ತು ಅಮರ್ ನಂತೂರ್ ರವರು ಆಟೋಟಗಳನ್ನು ನಿರ್ವಹಿಸಿದರು. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಮ್ಮಿಕೊಳ್ಳಲಾದ ಕ್ರೀಡೆಗಳನ್ನು ಶ್ರೀಮತಿ ಸುಪ್ರಿಯಾ ಆದರ್ಶ್ ಶೆಟ್ಟಿಯವರು ನೀರ್ವಹಿಸಿದರು.

350 ಕ್ಕಿಂತಲೂ ಹಿಚ್ಚಿನ ತುಳುವರು ಅತೀ ಉತ್ಸಹದಿಂದ ಆಟೋಟಗಳಲ್ಲಿ ಬಾಗವಹಿಸಿ ಸಂತೋಷ ಪಟ್ಟರು. ತದನಂತರ ದುಬಾಯಿಯ ಯಕ್ಷಗಾನ ಕಲಾವಿದ , ಸಮಾಜ ಸೇವಕಾರದ ಶ್ರೀಯುತ ಪ್ರಭಾಕರ್ ಸುವರ್ಣ, ಮತ್ತು ಚಿತ್ರ ಕಲಾ ಕಲಾವಿದೆ ಶ್ರೀಮತಿ ಮಮತ ಪೂಜಾರಿ ಇವರನ್ನ ಸಾಲು ಹೊದಿಸಿ ಅಪ್ಪೆ ಭಾಷೆ ತುಳವ ತುಡರ್ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆ ಲಕ್ಷ್ಮೀ ಸರಿಪಲ್ಲ ಇವರನ್ನ ನೆನಪಿನ ಕಾಣಿಕೆ ನೀಡಿ ಗೌರವಿಸಾಲಾಯಿತು.ಮದ್ಯಾಹ್ನ ಊಟಕ್ಕೆ ತುಳುನಾಡಿನ ಖಾದ್ಯಗಳಾದ ಗಂಜಿ , ಮಾವಿನ ಕಾಯಿ ಚಟ್ನಿ, ಕಡಲೆ ಬಲ್ಯಾರ್, ನುಂಗೆಲ್ ನಂಗ್ ಕಾಯಿಸಿದು , ಕಡ್ಲೆ ಬೆಳೆ ಪಾಯಸವನ್ನು ಊರಿನಿಂದ ತರಿಸಿದ ಅಡಿಕೆಯ ಹಾಳೆಯ ಬಟ್ಟಲಿನಲ್ಲಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

ಸಂಜೆ ಗೊಳಿಬಜೆ ಮತ್ತು ಚಾಹ ದ ವ್ಯವಸ್ಥೆ ಮಡಾಲಾಗಿತ್ತು. ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಿದ ಎಲ್ಲಾ ಮಹಾನಿಯರಿಗೆ ನೆನಪಿನ ಕಾಣಿಕೆ ನೀಡಿ ಜಯ ಗಳಿಸಿದ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಅಭಿನಂದಿಸಾಲಾಯಿತು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಗಣ್ಯ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತಂಡದ ಅಧ್ಯಕ್ಷರಾದ ಪ್ರೇಮ್ ಜೀತ್ ರವರು ಸ್ವಾಗತಿಸಿದರು.

ತಂಡದ ಸಕ್ರಿಯ ಸದಸ್ಯೆರಾದ, ಸತೀಶ್ ಪೂಜಾರಿ , ಕವಿರಾಜ್ ಕುಂದರ್, ಮನೋಜ್ ಕುಲಾಲ್ , ಶೋಬಿತಾ ಪ್ರೇಮಜೀತ್, ದೀಪಕ್ ಸನಿಲ್, ಪ್ರೇಮಶ್ರೀ , ಭಾಸ್ಕರ್ ಅಂಚನ್, ಸುಜಿತ್, ಪ್ರತಿಕ್ ಉಳ್ಳಾಲ, ರವಿಕುಮಾರ್ , ಪುರಂದರ್ ಕುಲಾಲ್ ಗುರುದತ್ತ್ ಬೆಲ್ಚಡ, ಚೇತನ್ ಕುಲಾಲ್, ರೋಷನ್ , ಆದರ್ಶ್ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸಿದರು.

ತುಳು ಪಾತೆರ್ ಗ ತುಳು ಒರಿಪಾಗ ತಂಡದ ಪ್ರದಾನ ಕಾರ್ಯದರ್ಶಿಯವರಾದ ರೀತು ಅಂಚನ್ ಕುಲಶೇಖರ ತಂಡದ ಸಾಧನೆಯನ್ನು ವಿವರಿಸಿ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿ ದನ್ಯವಾದ ಸಮರ್ಪಣೆ ಮಾಡಿದರು.

DAKSHINA KANNADA

ಮಂಡ್ಯದಲ್ಲಿ ಅವಳಿ ಮಕ್ಕಳ ಸಾ*ವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ..!

Published

on

ಮಂಗಳೂರು,(ಮಂಡ್ಯ): ಮಂಡ್ಯದಲ್ಲಿ ಐಸ್‌ ಕ್ರೀಮ್‌ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಹೆತ್ತ ಮಕ್ಕಳಿಗೆ ವಿಷವಿಕ್ಕಿದ ತಾಯಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.

ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.

ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

DAKSHINA KANNADA

ಕಾರ್ಪೋರೇಟರ್ ಮಗಳ ಹ*ತ್ಯೆ..! ಒಂಬತ್ತು ಬಾರಿ ಇರಿದ ಪಾಪಿ…!

Published

on

ಮಂಗಳೂರು (ಹುಬ್ಬಳ್ಳಿ) : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ. ನೇಹಾ ಹಿರೇಮಠ ಕೊಲೆಗೀಡಾದಾಕೆ. ಕಾಲೇಜ್ ಕ್ಯಾಂಪಸ್​ನಲ್ಲಿರುವ ಕ್ಯಾಂಟೀನ್​ನಲ್ಲಿ ಫೈಜಲ್ ಎಂಬಾತ 9 ಬಾರಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ನೇಹಾಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೇಹಾ ಮೃತಪಟ್ಟಿದ್ದಾಳೆ.

                  ತಂದೆ ನಿರಂಜನ್ ಹಿರೇಮಠ ಜೊತೆಗೆ ನೇಹಾ

ಪ್ರೀತಿ ನಿರಾಕರಣೆಗೆ ಪಾಪಿಯಿಂದ ಹೇಯ ಕೃತ್ಯ..!

ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿರುವ ನೇಹಾ ಹಿರೇಮಠಗೆ ಆರೋಪಿ ಫೈಜಲ್ ಎಂಬಾತ ಪ್ರೀತಿಸುವಂತೆ ಪೀಡಿಸಿದ್ದಾನೆ. . ಆದರೆ, ನೇಹಾ ಇದನ್ನು ನಿರಾಕರಿಸುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.
ಆರೋಪಿ ಫೈಜಲ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.ಇನ್ನು ನೇಹಾ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

Continue Reading

DAKSHINA KANNADA

“ಸೆಕ್ಸ್‌” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್‌..!

Published

on

ಮಂಗಳೂರು ( ಪಶ್ಚಿಮ ಬಂಗಾಳ ) : ಮಾಜಿ  ಸಂಸದೆ ಮಹುವಾ ಮೋಯಿತ್ರಾ ( Mahua Moitra ) ವಿವಾದದ ಕಾರಣದಿಂದ ಸಂಸತ್‌ನಿಂದ ಉಚ್ಚಾಟಿತರಾಗಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದರು ಎಂಬ ಆರೋಪ ಅವರ ಮೇಲಿತ್ತು. ಈಗ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದು ಅವರ ಹೇಳಿಕೆ ಬಾರಿ ವೈರಲ್ ಆಗಿದೆ. ಕೃಷ್ಣ ನಗರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿರುವ ಅವರನ್ನ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದಾರೆ. ಈ ವೇಳೆ ಪತ್ರಕರ್ತ ನಿಮ್ಮ ಸಾಮಾರ್ಥ್ಯದ ರಹಸ್ಯ ಏನು ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೊಯಿತ್ರಾ ಅವರು “ಸೆಕ್ಸ್‌” ಎಂದು ಹೇಳಿರುವ ವಿಡಿಯೋವನ್ನು ಮೋದಿ ಕಾ ಪರಿವಾರ ವೈರಲ್ ಮಾಡಿದೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಂಸದೆಯಾಗಿ ಬಹಿರಂಗವಾಗಿ ಹೀಗೆ ಹೇಳುವುದು ತಪ್ಪು ಎಂದು ಖಂಡಿಸಿದ್ದಾರೆ.

ನ್ಯೂಸ್‌ ದಿ ಟ್ರುತ್‌ ಎಂಬ ಮಾದ್ಯಮ ಮಾಡಿದ ಸಂದರ್ಶನ

ಸ್ಪಷ್ಟನೆ ನೀಡಿದ ಸಂದರ್ಶನ ನೀಡಿದ ವರದಿಗಾರ..!

“ಮಹುವಾ ಮೊಯಿತ್ರಾ ಅವರನ್ನು ಸಂದರ್ಶನ ಮಾಡಿದ್ದು ನಾನೇ. ನಿಮ್ಮ ಸಾಮರ್ಥ್ಯದ ಗುಟ್ಟೇನು ಎಂಬುದಾಗಿ ಕೇಳಿದೆ. ಅದಕ್ಕೆ ಅವರು, ಎಗ್ಸ್‌ (ಮೊಟ್ಟೆಗಳು) ಎಂಬುದಾಗಿ ಎರಡು ಬಾರಿ ಉತ್ತರಿಸಿದರು. ಆದರೆ, ಭಕ್ತ ಮಂಡಳಿಯು ಎಗ್ಸ್‌ ಎಂಬುದನ್ನು ಸೆಕ್ಸ್‌ ಎಂಬುದಾಗಿ ತಿರುಚಿದೆ” ಎಂಬುದಾಗಿ ನ್ಯೂಸ್‌ ದಿ ಟ್ರುತ್‌ ಎಂಬ ಮಾಧ್ಯಮ ಸಂಸ್ಥೆ ವರದಿಗಾರ ತಮಲ್‌ ಸಾಹ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ವರದಿಗಾರ ಸ್ಪಷ್ಟನೆ ನೀಡುವ ಹೊತ್ತಿಗೆ ವಿಡಿಯೊ ಭಾರಿ ವೈರಲ್‌ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

 

Continue Reading

LATEST NEWS

Trending