Home ಕರ್ನಾಟಕ ವಾರ್ತೆ ಸ್ಯಾನಿಟೈಸರ್ ಬಳಕೆಗೆ ಯಂತ್ರ ತಯಾರಿಸಿದ ಪುತ್ತೂರಿನ ಪೋರ.!!

ಸ್ಯಾನಿಟೈಸರ್ ಬಳಕೆಗೆ ಯಂತ್ರ ತಯಾರಿಸಿದ ಪುತ್ತೂರಿನ ಪೋರ.!!

ಸ್ಯಾನಿಟೈಸರ್ ಬಳಕೆಗೆ ಯಂತ್ರ ತಯಾರಿಸಿದ ಪುತ್ತೂರಿನ ಪೋರ

ಪುತ್ತೂರು: ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ ಮಹಾಮಾರಿ ಕೊರೊನಾ ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಈ ಮಹಾಮಾರಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ದೇಶದಲ್ಲಿ ಸುಮಾರು 50 ದಿನಗಳ ಸುಧೀರ್ಘ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇವೆ.

ಇದೇ ಕಾರಣಕ್ಕೆ ದೇಶದ ಜನ ಇನ್ನು ಕೊರೊನಾ ಜೊತೆಗೇ ಬದುಕು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲೂ ಇದ್ದಾರೆ.

ಕೊರೊನಾದಿಂದ ದೂರು ಉಳಿಯಲು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೈಗಳನ್ನು ನಿರಂತರವಾಗಿ ತೊಳೆಯುವುದರಿಂದ ಸಾಧ್ಯ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯೂ ಆಗಿದೆ.

ಹೀಗೆ ಕೈ ತೊಳೆಯಲು ಇದೀಗ ಸ್ಯಾನಿಟೈಸರ್ ಬಳಕೆ ಅನಿವಾರ್ಯವಾಗಿದ್ದು, ಇದರ ಬಳಕೆಯ ವಿಧಾನದಲ್ಲೂ ಬದಲಾವಣೆಯ ಅಗತ್ಯವಿದೆ ಅನ್ನೋದನ್ನು ಮನಗಂಡ,

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪೋರನೊಬ್ಬ ಸ್ಯಾನಿಟೈಸರ್ ಬಳಕೆಯ ವಿಧಾನದಲ್ಲಿ ಸಂಶೋಧನೆ ನಡೆಸಿ ಯಂತ್ರವೊಂದನ್ನು ತಯಾರಿಸಿದ್ದಾನೆ.

ಪುತ್ತೂರಿನ ನಿವಾಸಿ ಎಂಟನೇ ತರಗತಿಯ ವಿದ್ಯಾರ್ಥಿ ನಿಹಾಲ್ ಈ ಸಾಧನೆ ಮಾಡಿದ ಪೋರ. ಸ್ಯಾನಿಟೈಸರ್ ಗಳನ್ನು ಬಹುತೇಕ ಎಲ್ಲಾ ಕಛೇರಿಗಳಲ್ಲಿ ಬಳಸುತ್ತಿದ್ದರೂ, ಸ್ಯಾನಿಟೈಸರ್ ನೀಡಲೆಂದೇ ಕೆಲವು ಕಡೆಗಳಲ್ಲಿ ಸಿಬ್ಬಂದಿಗಳನ್ನ ನಿಯೋಜಿಸಬೇಕು.

ಇಲ್ಲವೇ ಸ್ಯಾನಿಟೈಸರ್ ಅನ್ನು ಕಛೇರಿಯ ಬಾಗಿಲ ಬಳಿಯಿಟ್ಟು ಬರುವ ಜನರೇ ಸ್ಯಾನಿಟೈಸರ್ ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಇದರಿಂದ ರೋಗಾಣು ಇತರರಿಗೂ ಹರಡುವ ಸಾಧ್ಯತೆಯನ್ನು ಮನಗಂಡ ಈ ವಿದ್ಯಾರ್ಥಿ ಕಾಲಲ್ಲಿ ಒತ್ತಿ ಸ್ಯಾನಿಟೈಸರ್ ಬಳಸಬಹುದಾದ ಈ ಯಂತ್ರವನ್ನು ತಯಾರಿಸಿದ್ದಾನೆ.

ಅತ್ಯಂತ ಸಾಮಾನ್ಯ ತಂತ್ರಜ್ಞಾನವನ್ನು ಬಳಸಿ ಈ ಯಂತ್ರವನ್ನು ಸಂಶೋಧಿಸಿರುವ ನಿಹಾಲ್ ಹೀಗೆ ತಯಾರಿಸಿದ ಯಂತ್ರಗಳನ್ನು ಪುತ್ತೂರಿನ ಎಲ್ಲಾ ಸರಕಾರಿ ಕಛೇರಿಗಳಿಗೆ ಉದಾರವಾಗಿ ನೀಡುತ್ತಿದ್ದಾನೆ.

ಪುತ್ತೂರಿನ ಬಹುತೇಕ ಎಲ್ಲಾ ಸರಕಾರಿ ಕಛೇರಿಗಳಲ್ಲಿ, ಖಾಸಗಿ ಕಛೇರಿಗಳಲ್ಲಿ ಈ ಸ್ಯಾನಿಟೈಸರ್ ಯಂತ್ರ ಸಾಮಾನ್ಯವಾಗಿದ್ದು, ಯುಪಿವಿಸಿ ಪೈಪ್ ಬಳಸಿ ಈ ಯಂತ್ರವನ್ನು ತಯಾರಿಸಿದ್ದಾನೆ.

ಒಂದು ಯಂತ್ರಕ್ಕೆ ಸುಮಾರು 1000 ದಿಂದ 1500 ರೂಪಾಯಿ ಖರ್ಚು ತಗಲುತ್ತಿದ್ದು, ಆಸಕ್ತರಿಗೆ ಇದನ್ನು ಪೂರೈಸುವ ಇಚ್ಛೆಯನ್ನೂ ಹೊಂದಿದ್ದಾನೆ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...