HomeLATEST NEWSವಿಷಪೂರಿತ ಕೀಟ ಕಚ್ಚಿ 8ನೇ ತರಗತಿ ವಿದ್ಯಾರ್ಥಿನಿ ದಾರುಣ ಮೃತ್ಯು..!

ವಿಷಪೂರಿತ ಕೀಟ ಕಚ್ಚಿ 8ನೇ ತರಗತಿ ವಿದ್ಯಾರ್ಥಿನಿ ದಾರುಣ ಮೃತ್ಯು..!

ವಿಷಪೂರಿತ ಕೀಟ ಕಚ್ಚಿ ಪುಟ್ಟ ಬಾಲಕಿ ಮೃತ ಪಟ್ಟಿರುವ ದಾರುಣ ಘಟನೆ ಕೇರಳದ ಪತ್ತನಂತಿಟ್ಟದ ತಿರುವಲ್ಲಾದಲ್ಲಿ ನಡೆದಿದೆ.

ಪತ್ತನಂತಿಟ್ಟ: ವಿಷಪೂರಿತ ಕೀಟ ಕಚ್ಚಿ ಪುಟ್ಟ ಬಾಲಕಿ ಮೃತ ಪಟ್ಟಿರುವ ದಾರುಣ ಘಟನೆ ಕೇರಳದ ಪತ್ತನಂತಿಟ್ಟದ ತಿರುವಲ್ಲಾದಲ್ಲಿ ನಡೆದಿದೆ.

ಪೆರಿಂಗಾರ ಕೊಚಾರಿಮುಕ್ಕಂನ ಪನಾರ ಮನೆ ನಿವಾಸಿ ಅನೀಶ್ ಮತ್ತು ಶಾಂತಿ ಕೃಷ್ಣನ್ ದಂಪತಿಯ ಪುತ್ರಿ ಅಂಜಿತಾ ಅನೀಶ್ ಮೃತಪಟ್ಟ ಬಾಲಕಿ.

ಮಾ.5ರಂದು ಸಂಜೆ ಮನೆಯ ಸಮೀಪದ ಹೊಲದಲ್ಲಿ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಾಗ ಕಿವಿಯ ಕೆಳಗೆ ಕೀಟವೊಂದು ಕಚ್ಚಿದೆ.

ನೊಣದಂತಹ ಜೀವಿ ಕಚ್ಚಿರುವುದಾಗಿ ಬಾಲಕಿ ಮನೆಯಲ್ಲಿ ಹೇಳಿದ್ದಾಳೆ. ಕೀಟ ಕಚ್ಚಿದ 30 ನಿಮಿಷದಲ್ಲಿ ಬಾಲಕಿಯ ಇಡೀ ದೇಹದಲ್ಲಿ ತುರಿಕೆ ಆರಂಭವಾಗಿದೆ.

ಕೂಡಲೇ ಬಾಲಕಿಯನ್ನು ತಿರುವಲ್ಲಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುವಷ್ಟರಲ್ಲಿ ಬಾಲಕಿ ಕುಸಿದು ಬಿದ್ದಿದ್ದಾಳೆ.

ಮತ್ತೆ ಅವಳನ್ನು ತಿರುವಲ್ಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಶ್ವಾಸಕೋಶಕ್ಕೆ ಸೋಂಕು ಹರಡಿದ ಹಿನ್ನಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ತಿರುವಲ್ಲಾದ ಎಂಜಿಎಂ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಜಿತಾ ಅನೀಶ್ ಗೆ ಪ್ರಬಲ ವಿಷಕಾರಿ ಕೀಟ ಕಚ್ಚಿರಬಹುದೆಂದು ವೈದ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Latest articles

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ- ಐದು ಮಂದಿ ಸ್ಥಳದಲ್ಲೇ ಸಾವು…!

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ...

ಬಂಟ್ವಾಳ ವಿಟ್ಲದಲ್ಲಿ ರಸ್ತೆಗೆ ಅಡ್ಡ ಬಂದ ದನ : ಆಟೋ ರಿಕ್ಷಾ ಪಲ್ಟಿ-50 ಲೀಟರ್ ಹಾಲು ನಷ್ಟ..!

ಸಾರಡ್ಕ - ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ಹಾಲು...

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...

ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ...