ಮಂಗಳೂರು: ಕರಾವಳಿಯ ಹಿರಿಯ ಮುತ್ಸದ್ದಿ, ಸಾಲ ಮೇಳದ ರೂವಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಗೆ ಇಂದು 85ನೇ ಹುಟ್ಟು ಹಬ್ಬದ ಸಂಭ್ರಮ.
ಸದ್ಯ ತನ್ನ ಇಳಿವಯಸ್ಸಿನಲ್ಲಿ ಗತಕಾಲದ ದಿನಗಳನ್ನು ಮೆಲುಕುಹಾಕುತ್ತಾ ಬಂಟ್ವಾಳದ ಬಸ್ತಿಪಡ್ಪುವಿನ ‘ಚೆನ್ನಮ್ಮ ಕುಟೀರ’ದಲ್ಲಿ ಕುಟುಂಬದೊಂದಿಗೆ ಜೀವನ ಕಳೆಯುತ್ತಿದ್ದಾರೆ. ಅವರು ಕರಾವಳಿಗೆ ನೀಡಿದ ವಿಶೇಷ ಕೊಡುಗೆ, ಹೊಸ ಚಿಂತನೆಯ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು.
ಹೊಸ ಮುನ್ನುಡಿ ಬರೆದಿದ್ದಾರೆ. ಜೊತೆಗೆ ಸಮಾನ ಸಾಮಾಜಿಕ ಚಿಂತನೆ, ಹತ್ತಾರು ಜನಪರ ಯೋಜನೆ ಜಾರಿಗೆ ತಂದ ಅವರು ರಾಜಕೀಯ ಕ್ಷೇತ್ರದಲ್ಲಿ ಅಜರಾಮರರಾಗಿದ್ದಾರೆ.
ಬಂಟ್ವಾಳದ ಅತೀ ಹಿಂದುಳಿದ ಬಸ್ತಿಪಡ್ಪುವಿನಿಂದ ದೆಹಲಿಯ ಜನಪಥ್‌ವರೆಗೆ ಅತ್ಯಂತ ಪ್ರಭಾವ ಹೊಂದಿದ್ದ ಕರ್ನಾಟಕದ ಏಕೈಕ ರಾಜಕಾರಣಿ ಎಂದರೆ ಬಿ.ಜನಾರ್ದನ ಪೂಜಾರಿ. ಪೂಜಾರಿ ಅವರಿಗೆ ರಾಜಕೀಯವಾಗಿ ಪಕ್ಷದ ಒಳಗೆ ಮತ್ತು ಹೊರಗೆ ರಾಜಕೀಯ ವಿರೋಧಿಗಳಿರಬಹುದು.
ಆದರೆ ಅವರ ಪ್ರಾಮಾಣಿಕತೆ ಬಗ್ಗೆ ಸಾಸಿವೆ ಕಾಳಿನಷ್ಟೂ ದೂರುವಂತಿಲ್ಲ. ಅವರ ನೇರನುಡಿ ಕೆಲವರಿಗೆ ಕಹಿ ಅನಿಸಿರಬಹುದು ಆದರೆ ಅದರಲ್ಲಿ ಸತ್ಯಗಳು ಇತ್ತು ಎನ್ನುವುದನ್ನು ಅವರ ವಿರೋಧಿಗಳು ಒಪ್ಪಿಕೊಳ್ಳುತ್ತಾರೆ.
ಕರಾವಳಿಯ ರಾಜಕಾರಣದಲ್ಲಿ ಎಷ್ಟೋ ರಾಜಕಾರಣಿಗಳು ಬಂದು ಹೋಗಿರಬಹುದು. ಆದರೆ ರಾಜಕೀಯದಲ್ಲಿ ಪೂಜಾರಿ ಅವರ ವ್ಯಕ್ತಿತ್ವವೇ ಬೇರೆ. ಅವರುಡುವ ಶ್ವೇತ ವರ್ಣದ ವಸ್ತ್ರದಂತೆ ನಿಶ್ಕಲ್ಮಶ, ಪ್ರಾಮಾಣಿಕ ರಾಜಕಾರಣಿ ಸಿಗುವುದು ಬಲು ಅಪರೂಪ.
ಆದ್ದರಿಂದ ಅವರು ಕರಾವಳಿ, ರಾಜ್ಯ, ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರಿಗೆ ಪಕ್ಷಾತೀತವಾಗಿ ಗೌರವ ನೀಡಬೇಕು ಎಂಬುವುದು ಎಲ್ಲರ ಆಶಯ. ಆದರೆ ಕಾಲ ಮಿಂಚಿಲ್ಲ.
ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅವರಿಗೆ ‘ಮಹಾಗೌರವ’ ನಡೆಯಬೇಕು ಎಂಬುವುದು ಅವರ ಅಭಿಮಾನಿಗಳ ಆಶಯ.
ಶಾಂತಿ-ಕ್ರಾಂತಿಯ ಹರಿಕಾರ ಜನಾರ್ದನ ಪೂಜಾರಿ ‘ಮಹಾ ಗೌರವ’ ಕ್ಕೆ ಕಾಲ ಸನ್ನಿಹಿತ
ಪಕ್ಷಾತೀವಾದ ಮಹಾಗೌರವ ಅವರಿಗೆ ಸಲ್ಲಬೇಕು