Connect with us

NATIONAL

ರಾಷ್ಟ್ರಧ್ವಜ ಹಾರಾಟದಲ್ಲಿ ಪಾಕ್‌ನ 18 ವರ್ಷದ ದಾಖಲೆ ಮುರಿದ 78 ಸಾವಿರ ಭಾರತೀಯರು

Published

on

ಪಾಟ್ನಾ: ಒಂದೇ ಬಾರಿಗೆ ದೇಶದ ರಾಷ್ಟ್ರ ಧ್ವಜ ಹಾರಿಸಿ ವಿಶ್ವ ದಾಖಲೆಯನ್ನು ಬರೆದಿದ್ದ ಪಾಕಿಸ್ತಾನದ 18 ವರ್ಷಗಳ ದಾಖಲೆಯನ್ನು 78 ಸಾವಿರ ಭಾರತೀಯರು ಇದೀಗ ಬ್ರೇಕ್ ಮಾಡಿದ್ದು ಈ ಹಿನ್ನೆಲೆ ಗೃಹ ಸಚಿವ ಅಮಿತ್ ಶಾ ಸ್ವತಃ ಟ್ವೀಟ್ ಮಾಡಿದ್ದಾರೆ.


ಪಾಟ್ನಾದಲ್ಲಿ ತಮ್ಮ ಭಾರತೀಯರು ದೇಶದ ರಾಷ್ಟ್ರ ಧ್ವಜವನ್ನು ಏಕ ಕಾಲಕ್ಕೆ ಹಾರಿಸುವ ಮೂಲಕ ಪಾಕ್ ಹೆಸರಿನಲ್ಲಿ ಇದ್ದ ವಿಶ್ವ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರಧ್ವಜ ಹಾರಾಟದ ವಿಡಿಯೋವನ್ನು ಶೇರ್ ಮಾಡಿಕೊಂಡು, ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

2004ರಲ್ಲಿ ಲಾಹೋರ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ 56,000 ಪಾಕಿಸ್ತಾನಿಯರು ತಮ್ಮ ರಾಷ್ಟ್ರಧ್ವಜವನ್ನು ಬೀಸಿದ್ದು, ಈ ಹಿಂದಿನ ವಿಶ್ವ ದಾಖಲೆಯಾಗಿತ್ತು. ಆದ್ರೆ ಸದ್ಯ ಈ ದಾಖಲೆಯನ್ನು ಭಾರತ ಮುರಿದಿದೆ.

ಬಿಹಾರದ ಭೋಜ್‌ಪುರದಲ್ಲಿ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 78,000ಕ್ಕೂ ಹೆಚ್ಚು ಮಂದಿ ಭಾರತೀಯರು ದೇಶದ ರಾಷ್ಟ್ರ ಪತಾಕೆಯನ್ನು ಬೀಸಿದ್ದು, ಈ ಘಟನೆ ಹೊಸ ದಾಖಲೆಗೆ ಸಾಕ್ಷಿಯಾಗಿದೆ.

 

Click to comment

Leave a Reply

Your email address will not be published. Required fields are marked *

FILM

ಆಲಿಯಾ ಭಟ್ ಡೀಫ್ ಫೇಕ್ ವಿಡಿಯೋ ವೈರಲ್ – ವಿಡಿಯೋ ನೋಡಿದ್ರಾ..?

Published

on

ಮುಂಬೈ: ರಶ್ಮಿಕಾ ಮಂದಣ್ಣ, ಕಾಜೋಲ್ ಡೀಫ್ ಫೇಕ್ ವಿಡಿಯೋ ವೈರಲ್  ಬೆನ್ನಲ್ಲೇ ಇದೀಗ ಮತ್ತೊಂದು ನಟಿ ಆಲಿಯಾ ಭಟ್ ನ ಡೀಫ್ ಫೇಕ್ ವಿಡಿಯೋ ವೈರಲ್ ಆಗ್ತಾ ಇದೆ.

ಕೆಲವು ದಿನಗಳ ಹಿಂದೆಯಿಂದ ಡೀಫ್ ಫೇಕ್ ಎಂಬ ಫೇಸ್ ಆ್ಯಪ್ ಮೂಲಕ ಸಿನಿಮಾ ತಾರೆಯರ ಫೋಟೋಗಳನ್ನು ಅರೆ ಬಟ್ಟೆಯಲ್ಲಿ ಹಾಟ್ ಕಾಣಿಸುವಂತೆ ವಿಡಿಯೋ ಮಾಡಿ ವೈರಲ್ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರೆ ಬಟ್ಟೆಯಲ್ಲಿ ಹಾಟ್ ಕಾಣಿಸಿಕೊಂಡಿರುವ ಯಾವುದೋ ಯುವತಿಯ ದೇಹಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ನ ಮುಖವನ್ನು ಅಂಟಿಸಿ ವಿಡಿಯೋ ಮಾಡಿರೋದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಹಿಂದೆ ಹಲವು ನಟಿಗಳ ಡೀಫ್ ಫೇಕ್ ವಿಡಿಯೋ ವೈರಲ್ ಅದಾಗ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಂಡರೂ ಈ ಡೀಫ್ ಫೇಕ್ ವಿಡಿಯೋ ವೈರಲ್ ಮಾಡೋ ಕಿಡಿಗೇಡಿಗಳ ಕಾಟ ನಿಲ್ಲಿಸ್ತಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಂತಹ ವಿಡಿಯೋಗಳು ಇನ್ನು ಹೆಚ್ಚಾಗುತ್ತದೆ ಎಂದು ನೆಟ್ಟಿಗರು ಹೇಳ್ತಾ ಇದ್ದಾರೆ.

 

Continue Reading

LATEST NEWS

ಕೊಚ್ಚಿ ವಿಶ್ವವಿದ್ಯಾನಿಲಯದಲ್ಲಿ ಕಾಲ್ತುಳಿತ: ನಾಲ್ವರು ಬಲಿ, 64 ಮಂದಿಗೆ ಗಾಯ..!

Published

on

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ವಿಶ್ವವಿದ್ಯಾನಿಲಯವೊಂದರಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ವಿದ್ಯಾರ್ಥಿಗಳು ಮತ್ತು ಓರ್ವ ಯುವಕ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ. ದುರ್ಘಟನೆಯಲ್ಲಿ 64 ಮಂದಿ ಗಾಯಗೊಂಡಿದ್ದಾರೆ.

ಕೊಚ್ಚಿನ್ ಯೂನಿವರ್ಸಿಟಿ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಟೆಕ್‌ ಫೆಸ್ಟ್‌ ನಡೆಯುತ್ತಿದ್ದು, ಕ್ಯಾಂಪಸ್‍ನಲ್ಲಿರುವ ಓಪನ್ ಏರ್ ಆಡಿಟೋರಿಯಂನಲ್ಲಿ ಗಾಯಕಿ ನಿಖಿತಾ ಗಾಂಧಿ ಅವರ ಗಾಯನ ಕಾರ್ಯಕ್ರಮ ನಡೆಯುತ್ತಿತ್ತು. ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವನ್ನು ನೀಡಲಾಗಿತ್ತು. ಕಾರ್ಯಕ್ರಮ ಇನ್ನೂ ಆರಂಭವಾಗಿರಲಿಲ್ಲ. ವಿದ್ಯಾರ್ಥಿಗಳನ್ನು ತಂಡ ತಂಡವಾಗಿ ಒಳಗೆ ಬಿಡಲಾಗುತ್ತಿತ್ತು. ಹೊರ ಭಾಗದಲ್ಲಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದರು. ಅಷ್ಟರಲ್ಲಿ ಏಕಾ ಏಕಿ ಮಳೆ ಬಂದಿದ್ದು, ಈ ವೇಳೆ ಮಳೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಆಡಿಟೋರಿಯಂಗೆ ನುಗ್ಗಿದ್ದಾರೆ. ಅಲ್ಲಿ ಮೆಟ್ಟಿಲುಗಳಿದ್ದವು. ಕೆಲವು ಜನರು ಕೆಳಗೆ ಬಿದ್ದರು ಮತ್ತು ಅವರ ಮೇಲೆಯೇ ಉಳಿದವರು ನಡೆದುಕೊಂಡು ಹೋದರು. ಅಡಿಗೆ ಸಿಲುಕಿ ತೀವ್ರ ಗಾಯಗೊಂಡ ಮೂವರು ವಿದ್ಯಾರ್ಥಿಗಳು ಮತ್ತು ಓರ್ವ ಯುವಕ ಸೇರಿದಂತೆ ನಾಲ್ವರು ಕಾಲ್ತುಳಿತಕ್ಕೆ ಸಿಕ್ಕಿ ಮೃತ ಪಟ್ಟಿದ್ದಾರೆ.

64 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಳಮಶ್ಶೇರಿ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಯಿತು. ವಿದ್ಯಾರ್ಥಿಗಳಾದ ಸಾರಾ ತೋಮಸ್‌, ಅತುಲ್‌ ತಂಬಿ ಮತ್ತು ಆ್ಯನ್‌ ರಿಫ್ತಾ ರೋಯ್‌ ಹಾಗೂ ಇನ್ನೋರ್ವ ಯುವಕ ಆಲ್ವಿನ್‌ ಜೋಸೆಫ್‌ ಸಾವನ್ನಪ್ಪಿದವರು. ಕಾರ್ಯಕ್ರಮದಲ್ಲಿ ಆಗಮನ ಮತ್ತು ನಿರ್ಗಮನಕ್ಕೆ ಒಂದೇ ದ್ವಾರದ ವ್ಯವಸ್ಥೆ ಇದ್ದ ಕಾರಣ ನೂಕು ನುಗ್ಗಲಿಗೆ ಕಾರಣವಾಗಿತ್ತು ಎನ್ನಲಾಗಿದೆ.

Continue Reading

bengaluru

Bengaluru: ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ

Published

on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌- ಎಚ್.ಎ.ಎಲ್‌. ಭೇಟಿ ನೀಡಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.

ಈ ಬಗ್ಗೆ ತಮ್ಮ ಅನುಭವವನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ಎಚ್. ಎ.ಎಲ್. ನ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಆಗಮಿಸಿದ್ದ ಪ್ರಧಾನಿ ಮೋದಿ ತೇಜಸ್ ಯುದ್ಧ ವಿಮಾನ ಸೇರಿದಂತೆ ಎಚ್. ಎ.ಎಲ್‌. ನ ಉತ್ಪಾದನಾ ಸೌಲಭ್ಯವನ್ನು ಸುಮಾರು 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿದರು.

ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಇಂದು ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದೆ. ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಸ್ವಾವಲಂಬನೆಯ ಕ್ಷೇತ್ರದಲ್ಲಿ ಜಗತ್ತಿನ ಯಾವ ದೇಶಕ್ಕಿಂತಲೂ ನಾವು ಕಡಿಮೆಯಿಲ್ಲ ಎಂದು ನಾನು ಅಪಾರ ಹೆಮ್ಮೆಯಿಂದ ಹೇಳ ಬಲ್ಲೆ. ಭಾರತೀಯ ವಾಯುಪಡೆ, ಡಿಆರ್ ಡಿಒ ಮತ್ತು ಎಚ್. ಎ. ಎಲ್. ಮತ್ತು ಎಲ್ಲಾ ಭಾರತೀಯರಿಗೆ ಮನದಾಳದ ಅಭಿನಂದನೆಗಳು.

ತೇಜಸ್‌ ಯುದ್ಧ ವಿಮಾನದಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವ ವಿಸ್ಮಯಕಾರಿಯಾಗಿತ್ತು. ನಮ್ಮ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ಥಳೀಯ ಉತ್ಪನ್ನಗಳ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸ ಖಂಡಿತಾ ಹೆಚ್ಚಾಗಿದೆ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಹೆಮ್ಮೆಯ ಭಾವ ಮತ್ತು ಆಶಾಭಾವನೆ ಹೆಚ್ಚಾಗಿದೆ’ ಎಂದು ತಿಳಿಸಿದ್ದಾರೆ.

Continue Reading

LATEST NEWS

Trending