Connect with us

    LATEST NEWS

    ಶಕ್ತಿ ವಿದ್ಯಾಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ

    Published

    on

    ಮಂಗಳೂರು : ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸೂರಜ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹಾಗೂ ರುಪ್ಸಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಆದ ಡಾ.ಮಂಜುನಾಥ್ ರೇವಣ್ಕರ್ ನೇರವೇರಿಸಿದರು.  ಡಾ.ಅಂಬೇಡ್ಕರ್ ಮತ್ತು ಡಾ.ರಾಜೇಂದ್ರ ಪ್ರಸಾದ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

    ಬಳಿಕ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ನಮ್ಮ ತಾಯ್ನಾಡು. ನಮ್ಮನ್ನು ಹೆತ್ತ ತಾಯಿ ಬೇರೆ ಬೇರೆಯಾಗಿದ್ದರೂ ನಮ್ಮೆಲ್ಲರನ್ನು ಹೊತ್ತು ಬೆಳೆಸುವ ತಾಯಿ ಈ ಭಾರತ ಮಾತೆ. ಈ ದೇಶದ ಒಳಿತಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದು ಶಕ್ತಿ ಇದೆ. ಒಂದಲ್ಲ ಒಂದು ರೀತಿಯಲ್ಲಿ ಅದು ಅವನ ವ್ಯಕ್ತಿತ್ವದಲ್ಲಿ ತೋರುತ್ತದೆ. ಆ ಶಕ್ತಿಯೇ ಅವರನ್ನು ಮುಂದಕ್ಕೆ ಸಮಾಜದಲ್ಲಿ ಒಂದು ಸ್ಥಾನವನ್ನು ಗಳಿಸಲು ಪ್ರೇರೇಪಿಸುತ್ತದೆ ಎಂದರು.

    ಇದನ್ನೂ ಓದಿ : ಪತಿಗೆ ಕಿರು*ಕುಳ, ಮಾನಸಿಕ ಹಿಂ*ಸೆ ನೀಡಿದ ಆರೋಪ; ಖ್ಯಾತ ಕಿರುತೆರೆ ನಟಿ ವಿರುದ್ಧ ಎಫ್‌ಐಆರ್

    ಈ ಸಂದರ್ಭದಲ್ಲಿ ಎಸ್.ಜಿ.ಎಫ್.ಐ.ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಯ್ಕ್ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಿಯಾಂಕ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    DAKSHINA KANNADA

    ಎಜೆ ಆಸ್ಪತ್ರೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆ; ಮೊಣಕಾಲು, ಸೊಂಟದ ಶಸ್ತ್ರ ಚಿಕಿತ್ಸೆಗೆ ರೋಬೋಟ್ ಬಳಕೆ

    Published

    on

    ಮಂಗಳೂರು : ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿರುವ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಯುಎಸ್‌ ಎಯಲ್ಲಿ ಅಭಿವೃದ್ದಿ ಪಡಿಸಲಾದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಟೆಕ್ನಾಲಜಿಯನ್ನು ಮಂಗಳೂರಿಗೆ ಪರಿಚಯಿಸಿದೆ. ಸ್ಮಿತ್ ಪ್ಲಸ್ ನೆವ್ಯೂದವರು ಅಭಿವೃದ್ದಿ ಪಡಿಸಿರುವ ಈ ಸುಧಾರಿತ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಡಾ. ಎ.ಜೆ.ಶೆಟ್ಟಿ ಅವರು ಉದ್ಘಾಟಿಸಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಹೇಳಿದ್ದಾರೆ.

    ಈ ವ್ಯವಸ್ಥೆಯ ಮೂಲಕ ರೋಗಿಗಳಿಗೆ ಉತ್ತಮ ಶಸ್ತ್ರ ಚಿಕಿತ್ಸಾ ಫಲಿತಾಂಶ ಹಾಗೂ ವೇಗವಾಗಿ ಚೇತರಿಕೆಗೆ ದಾರಿ ಮಾಡಿಕೊಡುತ್ತದೆ. ಈ ಹಿಂದೆಯೂ ಹಲವು ತಂತ್ರಜ್ಞಾನಗಳನ್ನು ಮೊದಲು ಮಂಗಳೂರಿಗೆ ಪರಿಚಯಿಸಿದ ಎಜೆ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಇದೀಗ ಪರಿಚಯಿಸಿರುವ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ತಂತ್ರಜ್ಞಾನ ಕೂಡ ಎಜೆ ಆಸ್ಪತ್ರೆಯ ಗರಿಮೆಯನ್ನು ಹೆಚ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ : ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ

    ಪತ್ರಿಕಾಗೋಷ್ಠಿಯಲ್ಲಿ ಡಾ.ಸುದೀಪ್ ಶೆಟ್ಟಿ, ಡಾ.ಮಯೂರ್ ರೈ, ಡಾ.ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.

    Continue Reading

    LATEST NEWS

    ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ

    Published

    on

    ಮಂಗಳೂರು/ ನವದೆಹಲಿ : ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಅಣಿಯಾಗಿದೆ. ಜನವರಿ 29 ರಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ‌ದ 100 ನೇ ರಾಕೆಟ್ ಉಡಾವಣೆಗೆ ಸಿದ್ಧತೆ ನಡೆದಿದೆ.  ಜನವರಿ 29 ರಂದು ಬೆಳಿಗ್ಗೆ 6.23ಕ್ಕೆ ಶ್ರೀಹರಿಕೋಟಾದಿಂದ 2,250 ಕೆಜಿ ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ – ಎಫ್‌ 15 ರ ಮೂಲಕ ಕಳುಹಿಸಲು ಸಜ್ಜಾಗಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.

    ಇದು ಜಿಎಸ್‌ಎಲ್‌ವಿ ಉಡಾವಣಾ ವಾಹನದ  17ನೇ ಹಾರಾಟವಾಗಲಿದ್ದು, 19 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಕೂರಿಸುವ ಯೋಜನೆ ರೂಪಿಸಲಾಗಿದೆ.  ಈ ಕಾರ್ಯಾಚರಣೆಯ ಅಡಿ ಎನ್‌ವಿಎಸ್‌ – 02 ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಭಾರತದ ಪ್ರಾದೇಶಿಕ ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್‌ಸ್ಟೆಲೇಷನ್(NavIc) ಸಿಸ್ಟಮ್‌ನ್ನು ಮತ್ತಷ್ಟು ಬಲಪಡಿಸಲಿದೆ.

    ಇದನ್ನೂ ಓದಿ : “ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್

    ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್‌ಸ್ಟೆಲೇಷನ್ (NavIc) ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದೆ. ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಯನ್ನು ಒದಗಿಸುವ ಜೊತೆಗೆ ಮಿಲಿಟರಿ ಮತ್ತು ಇತರೆ ನ್ಯಾವಿಗೇಷನ್ ಆಧಾರಿತ ಸೇವೆ ಒದಗಿಸಲಿದೆ.

    Continue Reading

    LATEST NEWS

    ಮೊಬೈಲ್‌ ಫೋನ್ ನುಂಗಿ ಪ್ರಾಣ ಕಳೆದುಕೊಂಡ ಮಹಿಳೆ

    Published

    on

    ಆಂಧ್ರಪ್ರದೇಶ: ಸಾವು ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಇಲ್ಲೊಂದು ನಡೆದ ವಿಚಿತ್ರ ಘಟನೆಯೇ ಸಾಕ್ಷಿ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಮೊಬೈಲ್ ಫೋನ್‌ ಅನ್ನು ನುಂಗಿ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಕಾಕಿನಾಡಲ್ಲಿ ನಡೆದಿದೆ.

    ಬೊಮ್ಮೂರಿನ ಪೆನುಮಲ್ಲದ ರಮ್ಯ ಸ್ಮೃತಿ (35) ಪ್ರಾಣ ಕಳೆದುಕೊಂಡ ಮಹಿಳೆ.

    ಈ ಮಹಿಳೆ ಕಳೆದ 15 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಮನೆಯವರೂ ಕೂಡ ಈಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಮಹಿಳೆ ಕೀ ಪ್ಯಾಡ್ ಮೊಬೈಲ್‌ ಅನ್ನು ನುಂಗಿದ್ದು, ಮನೆಯವರು ಫೋನ್ ಕಾಣುತ್ತಿಲ್ಲ ಎಂದು ಹುಡುಕಿದಾಗ ಮೊಬೈಲ್ ನುಂಗಿರುವ ಬಗ್ಗೆ ಆಕೆ ಹೇಳಿರುತ್ತಾಳೆ.

    ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈಕೆಯ ಅನ್ನನಾಳಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ತಕ್ಷಣ ಆಕೆಯನ್ನು ವೈದ್ಯರ ಸಲಹೆಯ ಮೆರೆಗೆ ಕಾಕಿನಾಡದ ಜಿಜಿಎಚ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ.

    ಇನ್ನು ಒಂದೆಡೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಮೃತ ಮಹಿಳೆಯ ತಂದೆ ಹೇಳಿದ್ದು, ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

    Continue Reading

    LATEST NEWS

    Trending