ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ರಚಿಸಿದ ಚಿತ್ರಾಕೃತಿ ಎಲ್ಲರ ಗಮನಸೆಳೆಯುತ್ತಿದೆ.
ಇದನ್ನು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ ಹಾಗೂ ಹಾಗೂ ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಬಳಿಕ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ್ರು. ಗುರು ಬೆಳದಿಂಗಳು ಸಮಿತಿಯ ಅಧ್ಯಕ್ಷ ಹಾಗೂ ಕುದ್ರೊಳಿ ದೇವಾಲಯದ ಕೋಶಾಧಿಕಾರಿ ಮಾತನಾಡಿ” ಯಾವುದೇ ರಾಸಾಯನಿಕ ಬಳಸದ ತರಕಾರಿಗಳನ್ನು ಉಪಯೋಗಿಸಿ ಚಿತ್ರಾಕೃತಿ ರಚಿಸಿದ್ದು, 900 ಕೆ.ಜಿ ಧಾನ್ಯಗಳನ್ನು ಭಕ್ತರಿಗೆ ವಿತರಿಸಲಾಗುವುದು ಎಂದರು.
ಕಲಾವಿದ ಹಾಗೂ ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಸೇರಿ 38 ಫೀಟ್ ವೃತ್ತದಲ್ಲಿ ಈ ವಿಶಿಷ್ಟ ರಚನೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕಲಾಸೊಬಗಿಗೆ 108 ಬಾಳೆ ಎಲೆಯನ್ನೂ ಕೂಡಾ ಉಪಯೋಗಿಸಿ ಎಲ್ಲರ ಚಿತ್ತ ಅದರತ್ತ ಆಕರ್ಷಿಸುವಂತೆ ಮಾಡಿದ ಈ ವಿಭಿನ್ನ ಚಿತ್ರಾಕೃತಿಗೆ ಉಪಯೋಗಿಸಿದ ಚೆಂಡು ಹೂ ಮತ್ತಷ್ಟು ಮೆರುಗು ನೀಡುತ್ತಿದೆ.
ಇನ್ನು ಚಿತ್ರಾಕೃತಿಯಲ್ಲಿ 300 ಕೆ.ಜಿ ಸಾಗು , 300 ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಸಲಾಗಿದೆ. ಒಟ್ಟು 900 ಕೆಜಿ ಧಾನ್ಯಗಳ ಜೊತೆಗೆ ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ,ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಸೇರಿಸಿ ನವ ವಿಧಾನದಲ್ಲಿ ಸುಮಾರು 54 ಕಳಶವಿಟ್ಟು ಅಲಂಕರಿಸಿದ ಸುಂದರ ವಿಭಿನ್ನ ಶೈಲಿಯ ಈ ಚಿತ್ರಾಕೃತಿ ನೋಡಲು ಜನರು ಉತ್ಸಾಹದಿಂದ ದೇಗುಲಕ್ಕೆ ಆಗಮಿಸುತ್ತಿದ್ದಾರೆ.
ಗುರುಬೆಳದಿಂಗಳು ಅಧ್ಯಕ್ಷ & ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ,ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಉರ್ಮೀಳಾ ರಮೇಶ್, MCC ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೋ, ಕಾರ್ಪೊರೇಟರ್ ಅನಿಲ್ , ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಚಿತ್ತರಂಜನ್ ಕಂಕನಾಡಿ ಗರೋಡಿ,
ಕ್ಷೇತ್ರದ ಆಡಳಿತ ಸಮಿತಿ ಸದಸ್ಯೆ ಗೌರವಿ ಪಿ.ಕೆ, ಗುರುಬೆಳದಿಂಗಳು ಸದಸ್ಯರಾದ ಗಜೇಂದ್ರ ಪೂಜಾರಿ, ಡಾ. ಅನುಸೂಯ, ಪ್ರವೀಣ್ ಅಂಚನ್, ಪ್ರಮೋದ್ ಕೋಟ್ಯಾನ್,
ಅಭಿವೃದ್ಧಿ ಸಮಿತಿಯ ಸದಸ್ಯ ನಮ್ಮ ಕುಡ್ಲ ವಾಹನಿ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರಾ, ಶೈಲೇಂದ್ರ ವೈ ಸುವರ್ಣ, ರವಿ ಪೂಜಾರಿ ಚಿಲಿಂಬಿ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್, ಜಯರಾಮ ಕಾರಂದೂರು,ಕೃತಿನ್ ಧೀರಜ್ ಅಮೀನ್, ರಾಜೇಂದ್ರ ಚಿಲಿಂಬಿ, ನವೀನ್ ಸುವರ್ಣ, ಜಯಾನಂದ ಪೂಜಾರಿ, ಮ್ಯಾನೇಜರ್ ವಿನೀತ್, ಗೋಕರ್ಣನಾಥ ಸೇವಾದಳದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.