Connect with us

    ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ 9ನೇ ಬಲಿ..!!

    Published

    on

    ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ 9ನೇ ಬಲಿ..!!

    ಮಂಗಳೂರು: ಮಂಗಳೂರಿನಲ್ಲಿ ಮಹಾಮಾರಿ ಕೊರೊನಾಗೆ 9ನೇ ಬಲಿಯಾಗಿದೆ.  ಕೋವಿಡ್ 19 ನಿಂದ 70 ವರ್ಷದ ವೃದ್ಧ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಜೂನ್ 7 ರಂದು ಬೆಂಗಳೂರಿನಿಂದ ಆಗಮಿಸಿದ್ದ ವೃದ್ಧ ಮಧುಮೇಹ ಮತ್ತು ನ್ಯೂಮೋನಿಯದಿಂದ ಬಳಲುತ್ತಿದ್ದರು.

    ಜೂನ್ 12 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

    ಜೊತೆಗೆ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸೂಚನೆ ನೀಡಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮುಡಾ ಪ್ರಕರಣ : ಸಿಎಂ ಸಿದ್ಧರಾಮಯ್ಯ ಅರ್ಜಿ ವಜಾ..!

    Published

    on

    ಮಂಗಳೂರು/ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಈ ಆದೇಶ ನೀಡಲಾಗಿದೆ. ಈ ಮೂಲಕ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಕೋರ್ಟ್‌ ಎತ್ತಿ ಹಿಡಿದಿದೆ.

    ಸಿ.ಎಂ.ಸಿದ್ಧರಾಮಯ್ಯ ಪರ ವಕೀಲ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದು, ಇದನ್ನು ಕೋರ್ಟ್‌ ತಿರಸ್ಕರಿಸಿದೆ. ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ಲೋಪ ಇಲ್ಲ ಮತ್ತು ಅವರ ವಿವೇಚನಾಧಿಕಾರ ಸರಿಯಾಗಿದೆ. 17ಎ ಅನುಮತಿಯನ್ನು ದೂರುದಾರರು ತೆಗೆದುಕೊಳ್ಳುವುದು ಕಡ್ಡಾಯವಾಗಿದ್ದು, ದೂರುದಾರರು ಅದನ್ನು ಪಾಲಿಸಿದ್ದಾರೆ ಎಂದು ಹೈಕೋರ್ಟ್‌ ಹೇಳಿದೆ.

    ಇದನ್ನೂ ಓದಿ : 2.5 ಲಕ್ಷಕ್ಕೆ ನವಜಾತ ಶಿಶು ಮಾರಾಟ ಯತ್ನ; 10 ಮಂದಿಯ ಬಂಧನ

    ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ  ವಾದ ಮಂಡಿಸಿದ್ದರು. ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.

    Continue Reading

    LATEST NEWS

    ಈ ಆಹಾರ ಪದಾರ್ಥಗಳಿಗೂ ಬಳಸಲಾಗುತ್ತೆ ಪ್ರಾಣಿಗಳ ಕೊಬ್ಬು, ಸೇವಿಸುವ ಮುನ್ನ ಇರಲಿ ಎಚ್ಚರ

    Published

    on

    ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ತಾವು ಏನು ತಿನ್ನುತ್ತೇವೆ, ಈ ಆಹಾರವು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎನ್ನುವ ಬಗ್ಗೆ ಯೋಚಿಸಲು ಸಮಯವಿಲ್ಲ. ಹೀಗಿರುವಾಗಲೇ ತಿರುಪತಿಯ ಲಡ್ದುವಿನಲ್ಲಿ ಪ್ರಾಣಿ ಕೊಬ್ಬು ಇದೆ ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿದೆ. ಆದರೆ ಪ್ರಾಣಿಗಳ ಕೊಬ್ಬನ್ನು ವಿವಿಧ ಆಹಾರಗಳು ಮತ್ತು ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ಹೀಗಾಗಿ ಈ ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕೆಲವು ಸಾಮಾನ್ಯ ಉತ್ಪನ್ನಗಳ ಬಗೆಗೆ ನಿಮಗೆ ತಿಳಿದಿದ್ದರೆ ಉತ್ತಮ.

    ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗುವ ಆಹಾರ ಪದಾರ್ಥಗಳು:

    ಮಾರ್ಗರೀನ್: ಕೆಲವು ವಿವಿಧ ಮಾರ್ಗರೀನ್ ಪ್ರಾಣಿಗಳ ಕೊಬ್ಬನ್ನು ಹೊಂದಿರುತ್ತದೆ. ಇವುಗಳನ್ನು ‘ಸುವಾಸನೆ’ ಅಥವಾ ‘ನೈಸರ್ಗಿಕ ಕೊಬ್ಬು’ಎನ್ನಲಾಗುತ್ತದೆ.

    ಬಿಸ್ಕತ್ತುಗಳು ಮತ್ತು ಕುಕೀಗಳು: ನಾವು ಸೇವಿಸುವ ಬಿಸ್ಕತ್ತುಗಳು ಮತ್ತು ಕುಕೀಗಳು ಪ್ರಾಣಿಗಳ ಕೊಬ್ಬನ್ನು ಒಳಗೊಂಡಿರುತ್ತವೆ. ಹೀಗಾಗಿ ನೀವು ಬೆಣ್ಣೆ ರುಚಿಯ ಬಿಸ್ಕತ್ತುಗಳು ಮತ್ತು ಕುಕೀಗಳನ್ನು ಸೇವಿಸುತ್ತಿದ್ದರೆ ಹೆಚ್ಚು ಜಾಗರೂಕರಾಗಿರುವುದು ಉತ್ತಮ.

    ಪ್ಯಾಟೀಸ್ ಮತ್ತು ಸಾಸೇಜ್‌ಗಳು: ಸಾಸೇಜ್‌ಗಳು, ಪ್ಯಾಟೀಸ್ ಮತ್ತು ಮಾಂಸದ ಚೆಂಡುಗಳಂತಹ ಮಾಂಸ ಆಧಾರಿತ ಉತ್ಪನ್ನಗಳಲ್ಲಿ ಈ ಪ್ರಾಣಿಗಳ ಕೊಬ್ಬು ಇರುತ್ತದೆ.

    ತ್ವರಿತ ಆಹಾರ: ಪ್ರಾಣಿಗಳ ಕೊಬ್ಬನ್ನು ಫ್ರೆಂಚ್ ಫ್ರೈಸ್ ಮತ್ತು ಬರ್ಗರ್‌ಗಳಂತಹ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

    ಸೂಪ್‌ಗಳು ಮತ್ತು ಸ್ಟಾಕ್‌ಗಳು: ಪ್ರಾಣಿಗಳ ಕೊಬ್ಬನ್ನು ಕೆಲವು ಸೂಪ್‌ಗಳು ಮತ್ತು ಸ್ಟಾಕ್‌ ಗಳಂತಹ ಪದಾರ್ಥಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.

    ಚೀಸ್ ಮತ್ತು ಡೈರಿ ಉತ್ಪನ್ನಗಳು: ಪ್ರಾಣಿಗಳ ಕೊಬ್ಬನ್ನು ಕೆಲವು ಸಂಸ್ಕರಿಸಿದ ಚೀಸ್‌ನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ

    ಚಾಕೊಲೇಟ್ ಹಾಗೂ ಘನೀಕೃತ ಆಹಾರಗಳು: ಕೆಲವು ಚಾಕೊಲೇಟ್ ರುಚಿ ಹಾಗೂ ವಿನ್ಯಾಸವನ್ನು ಒದಗಿಸಲು ಪ್ರಾಣಿಗಳ ಕೊಬ್ಬನ್ನು ಸೇರಿಸಬಹುದು. ಅದಲ್ಲದೇ ಸಿದ್ಧಪಡಿಸಿದ ಹೆಪ್ಪುಗಟ್ಟಿದ ಆಹಾರಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಹೆಚ್ಚು ಬಳಸಲಾಗುತ್ತದೆ.

    Continue Reading

    LATEST NEWS

    2.5 ಲಕ್ಷಕ್ಕೆ ನವಜಾತ ಶಿಶು ಮಾರಾಟ ಯತ್ನ; 10 ಮಂದಿಯ ಬಂಧನ

    Published

    on

    ಮಂಗಳೂರು/ಹೈದರಾಬಾದ್ : ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದಡಿ  ಪೋಷಕರು ಸೇರಿ 10 ಮಂದಿಯನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 15 ದಿನದ ಶಿಶುವನ್ನು ಮಾರಾಟ ಮಾಡುವ ಯತ್ನ ನಡೆದಿತ್ತು ಎಂಬುದು ತಿಳಿದು ಬಂದಿದೆ.

    ಹೈಕ್ ಇಸ್ಮಾಯಿಲ್, ಸುಲ್ತಾನಾ ಬೇಗಂ, ಮೆಹದಿ ಅಲಿ ಅಲಿಯಾಸ್ ಸಲೀಂ, ಫಾತಿಮಾ ರೆಹಮ್ತ್, ಸೈಯದ್ ಇಮ್ತಿಯಾಜ್ ಪಾಷಾ, ನಜ್ಮಾ ಬೇಗಂ, ಫಿರೋಜ್ ಖಾನ್, ಸಯೀದಾ ಶೇಖ್, ನಫೀಜ್ ಬೇಗಂ ಮತ್ತು ಸಯೀದಾ ಬೇಗಂ ಬಂಧಿತರು

    ಆ್ಯಪ್ ಮೂಲಕ ಮಾರಾಟ ಯತ್ನ :

    ಆ್ಯಪ್ ವೊಂದರ ಮೂಲಕ ಶಿಶುವನ್ನು ಮಾರಾಟ ಮಾಡುವ ಯತ್ನ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ದಕ್ಷಿಣ ವಲಯದ ಕಮಿಷನರ್ ಟಾಸ್ಕ್ ಫೋರ್ಸ್ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ನವಜಾತ ಶಿಶುವನ್ನು 2.5 ಲಕ್ಷಕ್ಕೆ ಮಾರಾಟ ಮಾಡಲು ಪೋಷಕರು ಯತ್ನಿಸಿದ್ದರು. ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಪೋಷಕರು ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್ಸ್..!

    ಸದ್ಯ ಶಿಶುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

    Continue Reading

    LATEST NEWS

    Trending