Thursday, March 23, 2023

28 ವರ್ಷದ ಸೊಸೆಯನ್ನೇ ಮದುವೆಯಾದ 70ರ ಮಾವ..!

70 ವರ್ಷದ ವ್ಯಕ್ತಿಯೊಬ್ಬರು ತನ್ನ 28 ವರ್ಷದ ಸೊಸೆಯನ್ನೇ ವಿವಾಹವಾಗಿದ್ದಾರೆ. ಇಂಥದ್ದೊಂದು ಮದುವೆ ಗೋರಖ್‌ಪುರದಲ್ಲಿ ನಡೆದಿದೆ.

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್​ಪುರನ ಗ್ರಾಮವೊಂದರಲ್ಲಿ ನಡೆದ ಮದುವೆ ಈ ಹಾಟ್‌ ಟಾಪಿಕ್‌ ಇದಾಗಿದ್ದು ಭಾರಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ .

ಸುಮಾರು 70 ವರ್ಷದ ಮಾವ ತನ್ನ 28 ವರ್ಷದ ವಿಧವೆಯಾಗಿದ್ದ ಸೊಸೆಯನ್ನೇ ವಿವಾಹವಾಗಿದ್ದಾರೆ.

ಬದಲ್‌ಗಂಜ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಒಬ್ಬರಿಗೊಬ್ಬರು ಇಷ್ಟಪಟ್ಟು ದೇವಸ್ಥಾನದಲ್ಲಿ ಹಾರ ಬದಲಾಸಿ ಮದುವೆಯಾದರಂತೆ.

ಸೊಸೆಯನ್ನು ಹೆಂಡತಿಯಾಗಿ ಸ್ವೀಕರಿಸಿದ ಮಾವ ಆಕೆಯ ಹಣೆಗೆ ಸಿಂಧೂರ ಹಚ್ಚಿದ್ದಾರೆ.

ದೇವರ ದರ್ಶನ ಪಡೆದು ಮನೆಗೆ ಮರಳಿದ್ದಾರೆ. ಈ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾವ ಮತ್ತು ಸೊಸೆಯ ನಡುವಿನ ಸಂಬಂಧದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ.

ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ ಕೈಲಾಶ್ ಯಾದವ್ ಅವರಿಗೆ 70 ವರ್ಷ. ಮೃತಪಟ್ಟ ತನ್ನ ಮಗನ ಪತ್ನಿ ಪೂಜಾಳನ್ನೇ ಇವರು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ಪೂಜಾ ಅವರ ವಯಸ್ಸು 28. ಕೈಲಾಶ್ ಅವರ ಪತ್ನಿ 12 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರ ನಾಲ್ಕು ಮಕ್ಕಳಲ್ಲಿ ಮೂರನೇ ಮಗ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.

ಗಂಡನ ಮರಣಾ ನಂತರ ಸೊಸೆ ಪೂಜಾ ತನ್ನ ಜೀವನವನ್ನು ಬೇರೆಡೆ ಸಾಗಿಸಲು ಹೊರಟಿದ್ದರು. ಮನೆಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ದಿನಕಳೆದಂತೆ ಸೊಸೆ ಮಾವನಿಗೆ ಮನಸೋತಳು.

ವಯಸ್ಸು, ಸಂಬಂಧದ ಕೊಂಡಿ ಕಳಚಿ ದೇವಸ್ಥಾನಕ್ಕೆ ತೆರಳಿ ಇಬ್ಬರೂ ಏಳು ಪ್ರದಕ್ಷಿಣೆ ಹಾಕಿ ದಂಪತಿಯಾಗಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದ ಕುಮಟಾದ ಯುವತಿ ಡಿಡೀರ್ ನಾಪತ್ತೆ..! 

ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು...

40 ವರ್ಷಗಳಿಂದ ಅದೇ ಪೊಳ್ಳು ಭರವಸೆ : ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಸುಳ್ಯ ಅರಮನೆಗಾಯದ ಜನತೆ..!

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ...

ಉಡುಪಿ : ಕಳವಾದ 74 ಲಕ್ಷ ರೂಪಾಯಿ ಸೊತ್ತುಗಳು ಮರಳಿ ಮಾಲಕರಿಗೆ ಹಸ್ತಾಂತರಿಸಿದ ಪೊಲೀಸರು.!

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್...