ಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಬಾಲಕಿ ಸನ್ನಿಧಿ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದ್ದು, ಈಕೆ ಅಂತ್ಯ ಕ್ರಿಯೆಯನ್ನು ಮನೆ ಸಮೀಪದಲ್ಲೇ ನಿನ್ನೆ ನೆರವೇರಿಸಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಕಿ ಸನ್ನಿಧಿ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಕುಟುಂಬಸ್ಥರು, ಸ್ನೇಹಿತರು ಆಕ್ರಂದನ ಮುಗಿಲು ಮುಟ್ಟಿತ್ತು.
ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಮರಳಿ ಬರುತ್ತಿರುವಾಗ ಕಾಲು ಸಂಕ ದಾಟುವ ವೇಳೆ ಕಾಲು ಜಾರಿ ಬಿದದು ಸನ್ನಿಧಿ ನೀರುಪಾಲಾಗಿದ್ದು, ಈಕೆಗಾಗಿ ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದರು. 48 ಗಂಟೆಗಳ ಹುಡುಕಾಟ ಬಳಿಕ ಬಿದ್ದ ಸ್ಥಳದಿಂದ ಕೆಲವೇ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು. ಇನ್ನು ಮೃತದೇಹವನ್ನು ಮನೆಗೆ ತಂದ ವೇಳೆ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.