ಮಂಗಳೂರು: 7 ಸಾವಿರ ಕೋಟಿ ರೂಪಾಯಿ ವೆಚ್ಚದ ನೂತನ ವಿದೇಶಿ ರಾಸಾಯನಿಕ ಗೊಬ್ಬರದ ಕಾರ್ಖಾನೆ ಕರ್ನಾಟಕದಲ್ಲಿ ನಿರ್ಮಿಸಲು ಮುಂದಾಗಿದೆ. ಅದನ್ನು ಮಂಗಳೂರಿನಲ್ಲಿ ನಿರ್ಮಿಸಲು ಯೋಚಿಸಿದ್ದೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಇಂದು ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಆ ಕಂಪೆನಿಯು ಸರಕಾರವನ್ನು ಸಂಪರ್ಕಿಸಿದ್ದು, ಈ ಕಾರ್ಖಾನೆಯನ್ನು ಮಂಗಳೂರಿನಲ್ಲಿ ನಿರ್ಮಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ಎರಡನೇ ಆದ್ಯತೆಯನ್ನು ದಾವಣಗೆರೆಗೆ ನೀಡಲಾಗಿದೆ.
ಇದರಿಂದ 10 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ. ಈ ಕಂಪನಿ ತರಲು ಡಾ.ರಾಜೇಂದ್ರ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೆ ಅವರಿಗೆ ಸರಕಾರ ಧನ್ಯವಾದ ತಿಳಿಸಲಿದೆ.
ಇದರ ಜೊತೆಗೆ ಮೇ ಮೊದಲ ವಾರದಲ್ಲಿ ಮಂಗಳೂರಿನಲ್ಲಿ ‘ಉದ್ಯಮಿ ಹಾಗೂ ಉದ್ಯೋಗ ನೀಡೋಣ’ ಕಾರ್ಯಕ್ರಮ ನಡೆಯಲಿದೆ.
ಹಾಗೂ ಉದ್ಯಮಿಗಳ ಸಮಸ್ಯೆ ಬಗೆಹರಿಸಲು ಒಂದು ದಿನದ ‘ಕೈಗಾರಿಕಾ ಅದಾಲತ್’ ನಡೆಸಲಿದ್ದೇವೆ. ಆ ಮೂಲಕ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಕುಮಾರ್ ಸುಧಾರಣೆ
ಆರ್ಥಿಕ ದಿವಾಳಿತನದ ಸಮಯದಲ್ಲಿ ಜರ್ಮನ್, ಅಮೇರಿಕಾ, ಜಪಾನ್‌ನ ಬ್ಯಾಂಕಿಂಗ್ ಕ್ಷೇತ್ರ ಅಲ್ಲೋಲ ಕಲ್ಲೋದ ಸಮಯದಲ್ಲೂ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಪರ್ಸೆಂಟ್ ಎಫೆಕ್ಟ್ ಆಗಿಲ್ಲ.
ಇದಕ್ಕೆ ಮುಖ್ಯ ಕಾರಣ ಮಂಗಳೂರಿನಲ್ಲಿ ಪ್ರಾರಂಭವಾದ 8ರಿಂದ 10 ಬ್ಯಾಂಕುಗಳು ನೂರು ವರ್ಷದ ಹಿಂದೆಯೇ ಹಾಕಿಕೊಟ್ಟ ನಿಯಮ. ಇದರಿಂದ ಭಾರತೀಯ ಬ್ಯಾಂಕಿಂಗ್ ವಲಯ ಇಂದು ಸದೃಢವಾಗಿದೆ. ಹಾಗೂ ಸಹಕಾರಿ ಸಂಘದ ವಲಯದಲ್ಲೂ ಡಾ. ರಾಜೇಂದ್ರ ಕುಮಾರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಲ್ಲ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದಗಲೂ ಬಹಳಷ್ಟು ಸುಧಾರಣೆ ಮಾಡಿದ್ದಾರೆ ಎಂದು ಹೇಳಿದರು.
ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಸೂಕ್ತ ಕ್ರಮ
ಡಾ. ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ 100 ಶೇಕಡಾ ಡಿ ದರ್ಜೆ ನೌಕರಿ ಸ್ಥಳೀಯರಿಗೆ ಸಿಗಲಿದೆ. ಇನ್ನುಳಿದಂತೆ ಉನ್ನತ ಹುದ್ದೆಯನ್ನು 30ಶೇಕಡಾ ಉದ್ಯೋಗ ಸ್ಥಳೀಯರಿಗೆ ಸೇರಿದಂತೆ ಸರಾಸರಿ 70 ಶೇಕಡಾ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ನಿಯಮ ಜಾರಿಗೆ ತಂದಿದ್ದೇವೆ. ಇದಕ್ಕೆ ತಪ್ಪಿದರೆ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.