ಕೊಡಗು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ 7 ನೇ ತರಗತಿ ವಿಧ್ಯಾರ್ಥಿನಿಯೊಬ್ಬಳು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ವೈಷ್ಣವಿ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಗಿದ್ದಾಳೆ. ಈಕೆ ಜಿತೇಂದ್ರ ಅಕ್ಷತ ದಂಪತಿಯ ಪುತ್ರಿ ಆಗಿದ್ದಳು. ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ ಮೃತ ವಿದ್ಯಾರ್ಥಿನಿ 7 ತರಗತಿ ಓದುತ್ತಿದ್ದಳು.
ಆದರೆ, ಪರೀಕ್ಷೆ ಆರಂಭವಾದ ಒಂದು ವಾರದಿಂದಲೂ ವೈಷ್ಣವಿ ತೀವರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಈ ಬಗ್ಗೆ ಮನೆಯವರು ಕೇಳಿದ್ದರೂ ಯಾವುದನ್ನೂ ಹೇಳಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.