LATEST NEWS
ತಮಿಳುನಾಡಿನ ಆಸ್ಪತ್ರೆಯೊಂದರಲ್ಲಿ 7 ಮಂದಿ ಸಾ*ವು, ಹಲವರಿಗೆ ಗಂ*ಭೀರ !
Published
2 weeks agoon
By
NEWS DESK3ಮಂಗಳೂರು/ಚೆನ್ನೈ: ತಮಿಳುನಾಡಿನ ದಿಂಡಿಗಲ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ ಕನಿಷ್ಠ 7 ಮಂದಿ ಸಾ*ವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಮೃ*ತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ನೆಲ ಮಹಡಿಯಲ್ಲಿನ ರಿಸೆಪ್ಷನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕ್ಷಣಮಾತ್ರದಲ್ಲಿ ಅದು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ.
ಇದನ್ನೂ ಓದಿ: ಮಂಜನಾಡಿ ಗ್ಯಾಸ್ ಸ್ಫೋಟ ಪ್ರಕರಣ; ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾರ, ಅಗ್ನಿ ಅವಘಡದಿಂದಾಗಿ ಆಸ್ಪತ್ರೆಯಲ್ಲಿ ಆವರಿಸಿದ ದಟ್ಟವಾದ ಹೊಗೆಯಿಂದ ಹಲವಾರು ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ರಿಸೆಪ್ಷನ್ ಹಾಲ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್, ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
LATEST NEWS
ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಬಳಸಬೇಡಿ: UGC ಸೂಚನೆ
Published
7 minutes agoon
26/12/2024By
NEWS DESK2ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ಸಾರ್ವಜನಿಕ ವೈ-ಫೈ ಬಳಸಿ ಇ-ಮೇಲ್ ಖಾತೆ ತೆರೆಯಬಾರದು ಎಂದು ಯುಜಿಸಿ ಹೇಳಿದೆ. ಅಲ್ಲದೆ ನೆಟ್ ಬ್ಯಾಂಕಿಂಗ್ ಬಳಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ಗಳಿಂದ ಮೊಬೈಲ್ ಚಾರ್ಜ್ ಮಾಡುವ ಮೂಲಕ ಖಾತೆಯನ್ನ ಹ್ಯಾಕ್ ಮಾಡಬಹುದು ಎಂದಿದೆ.
ಇಷ್ಟಕ್ಕೂ ವಿದ್ಯಾರ್ಥಿಗಳಿಗೆ UGC ಈ ಎಚ್ಚರಿಕೆಯನ್ನ ನೀಡಿದ್ದು ಯಾಕೆ.!
ಸೈಬರ್ ಅಪರಾಧವನ್ನ ತಡೆಯುವ ಅಭಿಯಾನದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ಸಹ ತೊಡಗಿಸಿಕೊಳ್ಳುತ್ತಿದೆ. ಅದೇ ಸಮಯದಲ್ಲಿ, ಸೈಬರ್ ಅಪರಾಧದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಯುಜಿಸಿ ಎಲ್ಲಾ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನ ಕೇಳಿದೆ. ಮೇಲ್ ಮತ್ತು ಅದಕ್ಕೆ ಲಗತ್ತಿಸಲಾದ ಫೈಲ್’ಗಳನ್ನ ಎಚ್ಚರಿಕೆಯಿಂದ ತೆರೆಯಬೇಕು ಎಂದು ಆಯೋಗ ಹೇಳಿದೆ. ವಿದ್ಯಾರ್ಥಿಗಳು ಯಾವುದೇ ಸಾಫ್ಟ್‌ವೇರ್’ನ್ನ ಅಧಿಕೃತ ವೆಬ್‌ಸೈಟ್’ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು. ಕಾಲಕಾಲಕ್ಕೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ನವೀಕರಿಸುತ್ತೀರಿ.
UGC NET ಪ್ರವೇಶ ಕಾರ್ಡ್ ಯಾವಾಗ ಬಿಡುಗಡೆ ಮಾಡಲಾಗುತ್ತದೆ.?
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಯುಜಿಸಿ ನೆಟ್ 2024 ಡಿಸೆಂಬರ್ ಸೆಷನ್ ಪರೀಕ್ಷೆಗಾಗಿ ಪರೀಕ್ಷಾ ನಗರ ಸ್ಲಿಪ್ ಬಿಡುಗಡೆ ಮಾಡಿದೆ. ಈಗ ಪ್ರವೇಶ ಪತ್ರಗಳನ್ನ ನೀಡಲಾಗುವುದು. ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಹಾಲ್ ಟಿಕೆಟ್ ಬಿಡುಗಡೆಯಾಗಲಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಪರೀಕ್ಷೆಯನ್ನು CBT ಮೋಡ್‌ನಲ್ಲಿ ಜನವರಿ 3ರಿಂದ ಜನವರಿ 16, 2024 ರವರೆಗೆ ನಡೆಸಲಾಗುತ್ತದೆ.
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಪೊಸಿಡೆಕ್ಸ್ ಟೆಕ್ನಾಲಜೀಸ್ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟ ಸಾಯಿದತ್ತಾ ನಡುವಿನ ಪ್ರೇಮ ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ಇಬ್ಬರೂ ತಮ್ಮ ಪ್ರೀತಿ ಕಿಂಚಿತ್ತೂ ಸುಳಿವು ನೀಡದೆ ನಿಭಾಯಿಸಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
“2013ರಲ್ಲಿ ಇಬ್ಬರೂ ಹೈದರಾಬಾದ್‌ನಿಂದ ದೆಹಲಿಗೆ ಹೋಗುವ ವಿಸ್ತಾರದ ವಿಮಾನದಲ್ಲಿ ಇಬ್ಬರೂ ಪರಸ್ಪರ ಭೇಟಿಯಾದೆವು. ಅಲ್ಲಿಂದ ಶುರುವಾದ ಮಾತುಕತೆ ನಿಧಾನಕ್ಕೆ ಪ್ರೀತಿಗೆ ತಿರುಗಿತು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಮುಗಿದ ಕೂಡಲೇ ಮದುವೆಯಾಗಲು ತೀರ್ಮಾನಿಸಿದೆವು” ಎಂದು ಸಿಂಧು ಮತ್ತು ದತ್ತಾ ಹೇಳಿದ್ದಾರೆ.
ಇದನ್ನೂ ಓದಿ : ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು
2013ಕ್ಕೂ ಮುನ್ನ ಸುಮ್ಮನೆ ಒಂದು ಪರಿಚಯವಿತ್ತು. ಬೇರೆ ಏನೂ ಇರಲಿಲ್ಲ ಎಂದಿರುವ ಸಿಂಧು, ದತ್ತಾ ಎಲ್ಲದ್ದಕ್ಕೂ ಬೆಂಬಲ ನೀಡುತ್ತಾರೆ. ಏನೇ ಅಗತ್ಯ ಬಂದರೂ ಜೊತೆಗಿರುತ್ತಾರೆ. ಈ ರೀತಿಯ ಸಂಗಾತಿ ಅತ್ಯಗತ್ಯ ಎಂದು ಹೇಳಿದ್ದಾರೆ. ಮೊದಲು ಸಂದೇಶ ಕಳಿಸಿದ್ದು, ಕರೆ ಮಾಡಿದ್ದು ಸಿಂಧು ಎಂದು ವೆಂಕಟ ಸಾಯಿದತ್ತಾ ತಮಾಷೆ ಮಾಡುತ್ತಾ ಕಾಲೆಳೆಯುತ್ತಾರೆ.
LATEST NEWS
ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
Published
38 minutes agoon
26/12/2024By
NEWS DESK2ಹುಬ್ಬಳ್ಳಿ: ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ 9 ಮಾಲಾಧಾರಿಗಳ ಪೈಕಿ ಇಬ್ಬರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಮೃತರ ಕುಟುಂಬಸ್ಥರನ್ನು ಸಂತೈಸಿದರು. ಈ ವೇಳೆ ಸಚಿವರ ಮುಂದೆ ಕುಟುಂಬಸ್ಥರು ಕಣ್ಣೀರು ಹಾಕಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಾಡ್, ಸಿಲಿಂಡರ್ ಸ್ಫೋಟದಲ್ಲಿ ನಿಜಲಿಂಗಪ್ಪ, ಸಂಜಯ್ ನಿಧನ ಹೊಂದಿದ್ದಾರೆ. ಈಗ ಏನು ಮಾತನಾಡಬೇಕು ಅಂತ ತೋಚುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ, ಕಿಮ್ಸ್ ಅವರನ್ನ ಬದುಕಿಸಲು ಪ್ರಯತ್ನ ಮಾಡಿದೆವು.
4 ನುರಿತ ವೈದ್ಯರನ್ನು ಕರೆಸಿ ಬದುಕಿಸಲು ಸಕಲ ಪ್ರಯತ್ನ ಮಾಡಲಾಗಿತ್ತು. ಆದರೆ ಇದನ್ನು ಮೀರಿ ಸುಟ್ಟ ಪ್ರಮಾಣ ಹೆಚ್ಚಾಗಿದ್ದರಿಂದ ಉಳಿಸಿಕೊಳ್ಳಲಾಗಲ್ಲಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ನಷ್ಟ ಎದುರಿಸುವ ಶಕ್ತಿ ಆ ಕುಟುಂಬಕ್ಕೆ ನೀಡಲಿ. ಮುಖ್ಯಮಂತ್ರಿಗಳು ಸಹ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ನಿರ್ದೇಶನದ ಮೇಲೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಓರ್ವ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಉಳಿದವರ ಕುಟುಂಬದ ಜೊತೆ ಸಮಾಲೋಚನೆ ಮಾಡಿ ಇನ್ನೂ ಹೆಚ್ಚಿನ ಚಿಕಿತ್ಸೆ ನೀಡುತ್ತೇವೆ ಎಂದರು. ಸದ್ಯ ಕಿಮ್ಸ್ ಶವಾಗಾರದಿಂದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಎರಡು ಅಂಬುಲೆನ್ಸ್ ಮೂಲಕ ಮೃತದೇಹವನ್ನು ಮನೆಗೆ ರವಾನಿಸಲಾಗಿದೆ.
Pingback: ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷರನ್ನು ಆಹ್ವಾನಿಸಿದ ಟ್ರಂಪ್ ! - NAMMAKUDLA NEWS - ನಮ್ಮಕುಡ್ಲ ನ್ಯೂಸ್