ಸುಳ್ಯ: ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಆರನೇ ಭಾರಿ ಲಘು ಭೂಕಂಪನ ಉಂಟಾಗಿದ್ದು, ಇಂದು ಮುಂಜಾನೆ ಮೂರು ಗಂಟೆಯ ವೇಳೆಗೆ ಭೂಮಿ ಲಘು ಕಂಪಿಸಿದೆ ಎಂಬ ಸುದ್ದಿ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ.
ಕಲ್ಲುಗುಂಡಿ, ಸಂಪಾಜೆ ಭಾಗಗಳಲ್ಲಿ ಭೂಮಿ ನಡುಗಿದೆ. ಭಾರೀ ಶಬ್ದದೊಂದಿಗೆ 6ನೇ ಭಾರಿ ಭೂಮಿ ನಡುಗಿದೆ. ಕೆಲವೊಂದು ಭಾಗದ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, ‘ಮತ್ತೆ ಭೂಕಂಪವಾಗಿರುವ ಕುರಿತ ದೂರುಗಳು ಬಂದಿಲ್ಲ ಎಂದಿದ್ದಾರೆ.