Thursday, April 22, 2021

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಕಂಗನಾ’ಅತ್ಯುತ್ತಮ ನಟಿ’ ಪ್ರಶಸ್ತಿ-ತುಳುತ್ತ ಪಿಂಗಾರೋಕ್ಲಾ ರಾಷ್ಟ್ರಪ್ರಶಸ್ತಿ..!

ನವದೆಹಲಿ :  67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಸೋಮವಾರ (ಮಾ.22) ಘೋಷಣೆ ಮಾಡಿದ್ದಾರೆ. 2019ರ ಸಾಲಿನ ‘ಅತ್ಯುತ್ತಮ ನಟಿ’ ಪ್ರಶಸ್ತಿಯು ಕಂಗನಾ ರಣಾವತ್‌ ಅವರ ಪಾಲಾಗಿದೆ.

ಕಂಗನಾ ರಣಾವತ್ ಸಿಕ್ಕಿದ ನಾಲ್ಕನೇ ರಾಷ್ಟ್ರ ಪ್ರಶಸ್ತಿಯಾಗಿದೆ.’ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರದ ನಟನೆಗೆ ಈ ಬಾರಿ ಅವರಿಗೆ ಪ್ರಶಸ್ತಿ ದಕ್ಕಿದೆ. ಇನ್ನು ನಟ ಧನುಷ್‌ ಅವರಿಗೆ ‘ಅಸುರನ್’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಅವರ ಜೊತೆಗೆ ಮನೋಜ್‌ ಬಾಜ್‌ಪೇಯಿ ಅವರಿಗೂ ಕೂಡ ‘ಭೋಂಸ್ಲೇ’ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ. ಉಳಿದಂತೆ ಪ್ರಶಸ್ತಿ ವಿವರಗಳು ಈ ಕೆಳಗಿನಂತಿವೆ.

ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ (ತಮಿಳು- ಸೂಪರ್ ಡಿಲಕ್ಸ್‌)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಷಿ (ಹಿಂದಿ-ದಿ ತಾಷ್ಕೆಂಟ್ ಫೈಲ್ಸ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಾವನಿ ರವೀಂದ್ರ (ಮರಾಠಿ- ಬರ್ದೋ)
ಅತ್ಯುತ್ತಮ ಹಿನ್ನೆಲೆ ಗಾಯಕ: ಬಿ. ಪ್ರಾಕ್ (ಹಿಂದಿ-ಕೇಸರಿ)
ಅತ್ಯುತ್ತಮ ಕೌಟುಂಬಿಕ ಮೌಲ್ಯ ಇರುವ ಸಿನಿಮಾ: ಒರು ಪಾಧಿರಾ ಸ್ವಪ್ನಂ ಪೊಲೆ (ಮಲಯಾಳಂ)
ಇಂದಿರಾ ಗಾಂಧಿ ಪ್ರಶಸ್ತಿ (ಚೊಚ್ಚಲ ನಿರ್ದೇಶನಕ್ಕಾಗಿ): ಮತ್ತುಕುಟ್ಟಿ ಕ್ಸೇವಿಯರ್ (ಮಲಯಾಳಂ- ಹೆಲೆನ್)
ಅತ್ಯುತ್ತಮ ಸಿನಿಮಾ ರಾಷ್ಟ್ರ ಪ್ರಶಸ್ತಿ: ಮರಕ್ಕರ್ (ಮಲಯಾಳಂ)
ಅತ್ಯುತ್ತಮ ನಟಿ: ಕಂಗನಾ ರಣಾವತ್‌ (ಮಣಿಕರ್ಣಿಕಾ, ಪಂಗಾ)
ಅತ್ಯುತ್ತಮ ನಟ:ಧನುಷ್ (ಅಸುರನ್) & ಮನೋಜ್ ಬಾಜ್‌ಪೇಯಿ (ಭೋಂಸ್ಲೇ)
ಅತ್ಯುತ್ತಮ ನಿರ್ದೇಶನ: ಬಹತ್ತರ್ ಹೂರೈನ್
ಅತ್ಯುತ್ತಮ ಮಕ್ಕಳ ಸಿನಿಮಾ: ಕಸ್ತೂರಿ
ಅತ್ಯುತ್ತಮ ವಸ್ತ್ರ ವಿನ್ಯಾಸ: ಮರಕ್ಕರ್
ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ: ಮಹರ್ಷಿ (ತೆಲುಗು- ವಂಶಿ ಪೈಡಿಪಲ್ಲಿ)

ಅತ್ಯುತ್ತಮ ತುಳು ಸಿನಿಮಾ: ಪಿಂಗಾರ
ಅತ್ಯುತ್ತಮ ಹರಿಯಾಣ್ವಿ ಸಿನಿಮಾ: ಛೋರಿಯನ್ ಛೋರನ್ ಸೇ ಕಾಮ್‌ ನಹೀ ಹೋತಿ

ಅತ್ಯುತ್ತಮ ತೆಲುಗು ಸಿನಿಮಾ: ಜೆರ್ಸಿ
ಅತ್ಯುತ್ತಮ ತಮಿಳು ಸಿನಿಮಾ: ಅಸುರನ್
ಅತ್ಯುತ್ತಮ ಪಂಜಾಬಿ ಸಿನಿಮಾ: ರಬ್ ದ ರೇಡಿಯೋ 2
ಅತ್ಯುತ್ತಮ ಒಡಿಯಾ ಸಿನಿಮಾ: ಸಾಲಾ ಬುಧಾರ್‌ ಬದ್ಲಾ ಮತ್ತು ಕಲಿರಾ ಅತೀತ
ಅತ್ಯುತ್ತಮ ಮಣಿಪುರಿ ಸಿನಿಮಾ: ಐಗಿ ಕೋನ
ಅತ್ಯುತ್ತಮ ಮಲಯಾಳಂ ಸಿನಿಮಾ: ಕಳ್ಳ ನೊಟ್ಟಂ
ಅತ್ಯುತ್ತಮ ಮರಾಠಿ ಸಿನಿಮಾ: ಬರ್ದೋ
ಅತ್ಯುತ್ತಮ ಕೊಂಕಣಿ ಸಿನಿಮಾ: ಕಾಜ್ರೋ
ಅತ್ಯುತ್ತಮ ಕನ್ನಡ ಸಿನಿಮಾ: ಅಕ್ಷಿ
ಅತ್ಯುತ್ತಮ ಹಿಂದಿ ಸಿನಿಮಾ: ಛಿಛೋರೆ
ಅತ್ಯುತ್ತಮ ಬಂಗಾಳಿ ಸಿನಿಮಾ: ಗುಮ್ನಾಮಿ
ಅತ್ಯುತ್ತಮ ಸಾಹಸ ನಿರ್ದೇಶನ: ಅವನೇ ಶ್ರೀಮನ್ನಾರಾಯಣ (ಕನ್ನಡ- ವಿಕ್ರಮ್‌ ಮೋರ್)
ಅತ್ಯುತ್ತಮ ನೃತ್ಯ ನಿರ್ದೇಶನ: ಮಹರ್ಷಿ (ತೆಲುಗು)
ಅತ್ಯುತ್ತಮ ಸ್ಪೆಷಲ್‌ ಎಫೆಕ್ಟ್‌: ಮರಕ್ಕರ್‌ (ಮಲಯಾಳಂ)
ವಿಶೇಷ ಜ್ಯೂರಿ ಪ್ರಶಸ್ತಿ: ಓತ್ತಾ ಸೆರುಪ್ಪು ಸೈಜ್‌-7 (ತಮಿಳು)
ಅತ್ಯುತ್ತಮ ಸಾಹಿತ್ಯ: ಕೊಲಾಂಬಿ (ಮಲಯಾಳಂ)
ಅತ್ಯುತ್ತಮ ಸಂಗೀತ ನಿರ್ದೇಶನ (ಹಾಡುಗಳು): ವಿಶ್ವಾಸಂ (ತಮಿಳು- ಡಿ. ಇಮ್ಮಾನ್)
ಅತ್ಯುತ್ತಮ ಸಂಗೀತ ನಿರ್ದೇಶನ: ಜ್ಯೇಷ್ಟ್‌ಪುತ್ರೋ (ಬಂಗಾಳಿ-ಪ್ರಬುದ್ಧ ಬ್ಯಾನರ್ಜೀ)
ಅತ್ಯುತ್ತಮ ಮೇಕಪ್: ಹೆಲೆನ್ (ಮಲಯಾಳಂ)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಆನಂದಿ ಗೋಪಾಲ್
ಅತ್ಯುತ್ತಮ ಸಂಕಲನ: ಜೆರ್ಸಿ (ತೆಲುಗು-ನವೀನ್ ನೂಲಿ)
ಅತ್ಯುತ್ತಮ ಚಿತ್ರಕಥೆ (ಒರಿಜಿನಲ್): ಜ್ಯೇಷ್ಟ್‌ಪುತ್ರೋ
ಅತ್ಯುತ್ತಮ ಚಿತ್ರಕಥೆ (Adapted): ಗುಮ್ನಾಮಿ
ಅತ್ಯುತ್ತಮ ಸಂಭಾಷಣೆ: ದಿ ತಾಷ್ಕೆಂಟ್ ಫೈಲ್ಸ್ (ಹಿಂದಿ)
ಅತ್ಯುತ್ತಮ ಛಾಯಾಗ್ರಹಣ: ಜಲ್ಲಿಕಟ್ಟು (ಮಲಯಾಳಂ)

ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ಎ ಗಾಂಧಿಯನ್ ಅಫೇರ್: ಇಂಡಿಯಾಸ್‌ ಕ್ಯೂರಿಯಸ್‌ ಪೋರ್ಟ್ರಯಲ್ ಆಫ್ ಲವ್ ಇನ್ ಸಿನಿಮಾ- ಸಂಜಯ್ ಸೂರಿ
(ವಿಶೇಷ ಮನ್ನಣೆ: ಸಿನಿಮಾ ಪಹರಣ ಮನುಸ್- ಅಶೋಕ್ ರಾಣೆ ಮತ್ತು ಕನ್ನಡ ಸಿನಿಮಾ: ಜಾಗತಿಕ ಸಿನಿಮಾ ವಿಕಾಸ-ಪ್ರೇರಣೆ ಪ್ರಭಾವ- ಪಿ.ಆರ್. ರಾಮದಾಸ ನಾಯ್ಡು)
ಅತ್ಯುತ್ತಮ ಸಿನಿಮಾ ವಿರ್ಮಶಕರು: ಸೊಹಿನಿ ಚಟ್ಟೋಪಾಧ್ಯಯ್

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...