Thursday, October 21, 2021

ಆರು ಗಂಟೆ ವ್ಯತ್ಯಯ: ಫೇಸ್‌ಬುಕ್‌ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟ

ವಾಷಿಂಗ್‌ಟನ್‌ ಡಿಸಿ: ಈ ಹಿಂದೆಂದೂ ಕಾಣದ ಜಾಗತಿಕ ವ್ಯತ್ಯಯವು ಫೇಸ್​ಬುಕ್​, ಇನ್​ಸ್ಟಾಗ್ರಾಮ್ ಮತ್ತು ವಾಟ್ಸಾಪ್​ ಅನ್ನು ಅಕ್ಟೋಬರ್​ 4ನೇ ತಾರೀಕಿನ ಸಂಜೆಯಿಂದ ಡೌನ್ ಆಗುವಂತೆ ಮಾಡಿತು. ಇದರಿಂದಾಗಿ ಫೇಸ್​ಬುಕ್​ನ ಸ್ಥಾಪಕ ಮಾರ್ಕ್​ ಝುಕರ್​ಬರ್ಗ್​ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ.

ಒಂದು ದಿನ- ಕೆಲವು ಗಂಟೆಗಳ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಝುಕರ್​ಬರ್ಗ್​​ರನ್ನು ಬಿಲ್​ಗೇಟ್ಸ್​ಗೂ ಕೆಳಗೆ ಐದನೇ ಸ್ಥಾನಕ್ಕೆ ತಳ್ಳಿದೆ.

ಸೆಪ್ಟೆಂಬರ್ 13ರಿಂದ ಈಚೆಗೆ ಒಟ್ಟಾರೆಯಾಗಿ 1900 ಕೋಟಿ ಅಮೆರಿಕನ್ ಡಾಲರ್​ನಷ್ಟು ಆಸ್ತಿ ಕರಗಿಹೋಗಿದೆ.

ಅಕ್ಟೋಬರ್ 4ನೇ ತಾರೀಕಿನಂದು ಫೇಸ್​ಬುಕ್​ ಸ್ಟಾಕ್​​ನಲ್ಲಿ ಭಾರೀ ಮಾರಾಟ ಒತ್ತಡ ಕಂಡುಬಂತು. ಒಂದೇ ದಿನದಲ್ಲಿ ಶೇ 5ರಷ್ಟು ಕುಸಿದಿದ್ದು, ಸೆಪ್ಟೆಂಬರ್ ಮಧ್ಯದಿಂದ ಈಚೆಗೆ ಈ ಸ್ಟಾಕ್ ಶೇ 15ರಷ್ಟು ಇಳಿಕೆ ಕಂಡಿದೆ.
ತನ್ನ ರೂಟರ್ಸ್​ನಲ್ಲಿ ತಪ್ಪಾದ ಕಾನ್ಫಿಗರೇಷನ್ ಬದಲಾವಣೆ ಮಾಡಿದ್ದರಿಂದ ಆರು ಗಂಟೆಗಳ ಕಾಲ ವ್ಯತ್ಯಯ ಎದುರಿಸಬೇಕಾಯಿತು.

ಇದರಿಂದಾಗಿ ಫೇಸ್​ಬುಕ್ ಮತ್ತು ಅದರ ಮೆಸೇಜಿಂಗ್ ಸರ್ವೀಸಸ್​ಗಳಾದ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಮೆಸೆಂಜರ್ ಬಳಸುವ 350 ಕೋಟಿ ಬಳಕೆದಾರರಿಗೆ ಸಂಪರ್ಕವೇ ಸಿಗಲಿಲ್ಲ.

ರೂಟರ್ಸ್​ನಲ್ಲಿ ಕಾನ್ಫಿಗರೇಷನ್​ ಬದಲಾವಣೆಯೇ ಈ ಸಮಸ್ಯೆಗೆ ಕಾರಣ ಎಂದು ನಮ್ಮ ಎಂಜಿನಿಯರಿಂಗ್ ತಂಡ ಕಂಡುಕೊಂಡಿದೆ.

ಈ ರೂಟರ್ಸ್​ ನಮ್ಮ ಡೇಟಾ ಸೆಂಟರ್​ಗಳು ನೆಟ್​ವರ್ಕ್ ಟ್ರಾಫಿಕ್ ಮಧ್ಯೆ ಕೋ ಆರ್ಡಿನೇಟ್ ಮಾಡುತ್ತದೆ.

ಈ ಸಂವಹನಕ್ಕೆ ತಡೆಯಾಗಿದ್ದರಿಂದ ಸಮಸ್ಯೆ ಎದುರಾಯಿತು. ನೆಟ್​ವರ್ಕ್​ನ ದಟ್ಟಣೆಯ ಈ ತಡೆಯು ಡೇಟಾ ಸೆಂಟರ್ ಸಂವಹನದ ಮೇಲೆ ಪರಿಣಾಮ ಬೀರುವಂತೆ ಮಾಡಿ,

ನಮ್ಮ ಸೇವೆ ನಿಂತುಹೋಯಿತು ಎಂದು ಫೇಸ್​ಬುಕ್ ಬ್ಲಾಗ್​ಪೋಸ್ಟ್​ನಲ್ಲಿ ಹೇಳಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...