ಮಂಗಳೂರು: 1962ರಲ್ಲಿ ನಡೆದ ಭಾರತ ಚೀನಾ ಯುದ್ದಕ್ಕೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಟಿಕುಟಿರ ಪ್ರಕಾಶನ ಬೆಂಗಳೂರು ಪ್ರಸ್ತುತಿಯ ರೇಖೆ ದಾಟಿದ ಗಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಾವುಟಗುಡ್ಡದ ಸೈನಿಕರ ಭವನದಲ್ಲಿ ಇಂದು ನಡೆಯಿತು.
ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುಸ್ತಕ ಬಿಡುಗಡೆಯನ್ನು 1962, 65 ಮತ್ತು 71ರ ಯುದ್ಧದ ಸಮರ ಸೇನಾನಿ ಕಮಾಂಡರ್ ಜೆರಾಲ್ಡ್ ಪಾಲ್ ಮಸ್ಕರೇನಸ್ ಮಂಗಳೂರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸಮರ ಸೇನಾನಿ ಕಮಾಂಡರ್ ಜೆರಾಲ್ಡ್ ಪಾಲ್ ಮಸ್ಕರೇನಸ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪುಸ್ತಕ ಪರಿಚಯವನ್ನು ನಿವೃತ್ತ ಸೇನಾಧಿಕಾರಿ ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮಾಡಿದರು. ಕಾರ್ಯಕ್ರಮದಲ್ಲಿ ವಟಿಕಟೀರ ಪ್ರಕಾಶನ ಬೆಂಗಳೂರು ಇದರ ಕಿರಣ್ ವಟಿ, ಕೃತಿ ಲೇಖಕಿ ವೀಣಾ ಶಾಣುಭೋಗ್, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ. ಎಸ್ ಐರನ್,
ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಕರ್ನಲ್ ಶರತ್ ಭಂಡಾರಿ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಸರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಮಹಾಬಲ ಪೂಜಾರಿ ಕದಂಬೋಡಿ, ಪ್ರಭಾ ಕಾಮತ್ ಹುಂಡಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.