ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿಯನ್ನು ಭೇಟಿಯಾಗುವ ನೆಪದಲ್ಲಿ ಬಂದು 60 ಬಾರಿ ಚುಚ್ಚಿ ಚುಚ್ಚಿ ಭೀಕರವಾಗಿ ಕೊಲೆಗೈದಿದ್ದಾರೆ. ಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಾರ್ಯನಿಮಿತ್ತ ಹುಬ್ಬಳ್ಳಿಗೆ ಬಂದಿದ್ದ ಗುರೂಜಿನ್ನು 12.23ರ ಸುಮಾರಿಗೆ ಹೋಟೇಲ್ ರಿಸೆಪ್ಷನ್‌ನಲ್ಲಿ ವಾಸ್ತು ಕೇಳುವ ನೆಪದಲ್ಲಿ ಭೇಟಿ ಮಾಡಿದ್ದಾರೆ. ರಿಸೆಪ್ಷನ್‌ನಲ್ಲಿ 30 ನಿಮಿಷ ಕಾದಿದ್ದ ದುಷ್ಕರ್ಮಿಗಳು ಅವರು ಬರುತ್ತಿದ್ದಂತೆ ಓರ್ವ ಗುರೂಜಿಯ ಕಾಲಿಗೆ ಬೀಳುತ್ತಿದ್ದಂತೆ ಮತ್ತೋರ್ವ ಚಾಕುವಿನಿಂದ ಇರಿದಿದ್ದಾನೆ. ತದನಂತರ ಇಬ್ಬರೂ ಚುಚ್ಚಿ ಕೊಲೆಗೈದು ಹೋಟೇಲ್‌ನಿಂದ ಓಡಿಹೋಗಿ ಪರಾರಿಯಾಗಿದ್ದಾರೆ.
ಸದ್ಯ ಹುಬ್ಬಳ್ಳಿಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಹುಬ್ಬಳ್ಳಿ ನಗರದಾದ್ಯಂತ ನಾಕಾಬಂಧಿ ಬಳಸಿ ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ. ನಗರದಿಂದ ಹೊರಗೋಗುವ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.
ಮನೆ, ಅಂಗಡಿ, ಕಟ್ಟಡದ ಬಗ್ಗೆ ವಾಸ್ತು ಹೇಳುತ್ತಿದ್ದ ಚಂದ್ರಶೇಖರ ಗುರೂಜಿ ಸರಳ ವಾಸ್ತು ಗುರೂಜಿ ಎಂದೇ ಪ್ರಸಿದ್ದೀ ಪಡೆದಿದ್ದರು. ಸದ್ಯ ಗುರೂಜಿಯಿಂದ ಮೋಸ ಹೋದವರೇ ಈ ಕೃತ್ಯ ನಡೆಸಿರಬುದೆಂಬ ಶಂಕೆ ವ್ಯಕ್ತವಾಗಿದೆ.