ಮಂಗಳೂರು : ಬಹು ನಿರೀಕ್ಷಿತ 2021 ನೇ ಸಾಲಿನ ಸಿಇಟಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಮಂಗಳೂರಿನ ಖ್ಯಾತ ಕಾಲೇಜ್ ಎಕ್ಸ್ ಪರ್ಟ್ ಈ ಬಾರಿಯೂ ದಾಖಲೆಯ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದೆ.
ಪರೀಕ್ಷೆಯ ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ 6 ರ‍್ಯಾಂಕ್‌ಗಳನ್ನು ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ರೀತಮ್ ಬಿ. ಅವರು ಕೃಷಿಯಲ್ಲಿ 2ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 3ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 3ನೇ ರ‍್ಯಾಂಕ್, ಬಿ ಫಾರ್ಮಾದಲ್ಲಿ 10 ಹಾಗೂ ಎಂಜಿನಿಯರಿಗ್‌ನಲ್ಲಿ 13ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ತೇಜಸ್ ಕೃಷಿಯಲ್ಲಿ 4, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 24, ಎಂಜಿನಿಯರಿಂಗ್ ನಲ್ಲಿ 53, ಫಾರ್ಮಾದಲ್ಲಿ 59 ಹಾಗೂ ಸಂಜನಾ ಕಾಮತ್ ಪಂಚಮಹಲ್ ಕೃಷಿಯಲ್ಲಿ 7ನೇ ರ‍್ಯಾಂಕ್, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 25, ಫಾರ್ಮಾದಲ್ಲಿ 57, ಎಂಜಿನಿಯರಿಂಗ್‌ನಲ್ಲಿ 73ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಇನ್ನು ಸಿಇಟಿಯ 20 ವಿಭಾಗಗಳಲ್ಲಿ ಮೊದಲ 50 ರ‍್ಯಾಂಕ್‌ಗಳಲ್ಲಿ 47 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡು ಇತಿಹಾಸ ನಿರ್ಮಿಸಿದ್ದಾರೆ .
ಮೊದಲ 100 ರ‍್ಯಾಂಕ್‌ಗಳಲ್ಲಿ 85 ರ‍್ಯಾಂಕ್‌ಗಳು, ಮೊದಲ 150 ರ‍್ಯಾಂಕ್‌ಗಳಲ್ಲಿ 121, ಮೊದಲ 200 ರ‍್ಯಾಂಕ್‌ಗಳಲ್ಲಿ 157 ರ‍್ಯಾಂಕ್‌ಗಳು, ಮೊದಲ 300 ರ‍್ಯಾಂಕ್‌ಗಳಲ್ಲಿ 213 ಹೀಗೆ ರ‍್ಯಾಂಕ್‌ಗಳ ಸುರಿಮಳೆಯನ್ನು ಎಕ್ಸ್ಪರ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡು ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಅದಲ್ಲದೆ ಕಾಲೇಜಿನ ವಿದ್ಯಾರ್ಥಿಗಳಾದ ಚಿನ್ಮಯ್ ಎನ್. ಕೃಷಿಯಲ್ಲಿ ೧೨, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 16, ಫಾರ್ಮಾದಲ್ಲಿ 27, ಹೃಷಿಕೇಶ್ ಎನ್.ಎಚ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 13, ಕೃಷಿಯಲ್ಲಿ 32, ಫಾರ್ಮಾದಲ್ಲಿ 30, ಪ್ರಮುಖ್ ಆರ್.ಎಂ. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 17, ಕೃಷಿಯಲ್ಲಿ 24, ಫಾರ್ಮಾದಲ್ಲಿ 37, ಎಚ್.ಎನ್. ಜಾಗೃತಿ ಕೃಷಿಯಲ್ಲಿ 19, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 56, ಧನ್ವಿನ್ ಎಲ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 20, ಫಾರ್ಮಾದಲ್ಲಿ 38, ಕೃಷಿಯಲ್ಲಿ 92, ಆರ್. ಸೃಷ್ಟಿ ಕೃಷಿಯಲ್ಲಿ 23, ವೆಟರ್ನರಿ ಸೈನ್ಸ್ ಮತ್ತು ಬಿಎನ್ ವೈಎಸ್‌ನಲ್ಲಿ 80, ಎಚ್.ಡಿ. ನಿನಾದ್ ಕೃಷಿಯಲ್ಲಿ 25, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 85, ಭರತ್ ಆರ್ . ಶೆಟ್ಟಿ ಕೃಷಿಯಲ್ಲಿ 26, ಗಗನ್ ಅಶೋಕ್ ಭಂಡಾರಿ ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 27, ಫಾರ್ಮಾದಲ್ಲಿ 47, ಕೃಷಿಯಲ್ಲಿ 55, ರಾಜ್ ಅನಿಕೇತ್ ರೆಡ್ಡಿ ಎಂಜಿನಿಯರಿಂಗ್‌ನಲ್ಲಿ 67, ಕೃಷಿಯಲ್ಲಿ 31, ವಿಭಾ ಪರಮೇಶ್ವರ ಹೆಗ್ಡೆ ಕೃಷಿಯಲ್ಲಿ 35, ಮೇಘನಾ ಭಟ್ ಕೃಷಿಯಲ್ಲಿ 39, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 75, ತನುಷ್ ಗೌಡ ವಿ ವೆಟರ್ನರಿ ಸೈನ್ಸ್ ಮತ್ತು ಬಿಎನ್ ವೈಎಸ್‌ನಲ್ಲಿ 45, ಕೃಷಿಯಲ್ಲಿ 49, ಫಾರ್ಮಾದಲ್ಲಿ 68, ಅಮೋಘ ಎ. ಹಾಲಹಳ್ಳಿ ಎಂಜಿನಿಯರಿಂಗ್‌ನಲ್ಲಿ 49, ಈಶಾ ಹನುಮರೆಡ್ಡಿ ಕೋಟಿ ಕೃಷಿಯಲ್ಲಿ 50, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 57, ಸುಹಾನ್ ಸಮರ್ಥ ಬಿ.ಎಸ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 53, ಫಾರ್ಮಾದಲ್ಲಿ 82, ಕಿರಣ್ ಎಂ.ಪಿ. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 61, ಅಖಿಲ್ ಎಸ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 67, ರೋಹನ್ ನಿಖಿಲ್ ದುಬೀರ್ ಕೃಷಿಯಲ್ಲಿ 65, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 69, ಫಾರ್ಮಾದಲ್ಲಿ 97, ಮಸೋನಿಯಾ ಎಚ್. ವಿಜಯ ಕುಮಾರ್ ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 66, ವರುಣ್ ದಿನೇಶ್ ಶೆಟ್ಟಿ 68, ಚಿರಂಥ್ ಕೆ.ವಿ., ಕೃಷಿಯಲ್ಲಿ 87, ರಜಿತಾ ಹರಿಶಂಕರ್ ಕೃಷಿಯಲ್ಲಿ 96ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪ್ರಕ್ರೀಯಿಸಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮತ್ತು ಉಪಾಧ್ಯಕ್ಷೆ ಡಾ. ಉಷಾ ಪ್ರಭಾ ಎನ್. ನಾಯಕ್ ಕೋವಿಡ್ 19ರ ನಡುವೆಯೂ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ ಆರು ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಸಂಸ್ಥೆಯು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕೋವಿಡ್ 19ರಿಂದಾಗಿ ವಿದ್ಯಾಭ್ಯಾಸಕ್ಕೆ ಎಲ್ಲಿ ಹಿನ್ನಡೆಯಾಗುತ್ತದೆಯೋ ಎಂಬ ಅಂಜಿಕೆ ಇತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರು, ಶಿಕ್ಷಕೆತರ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು ವಿಶೇಷ ಕಾಳಜಿ ವಹಿಸಿದ್ದರು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಪೋಷಕರು ಸ್ಪಂದಿಸಿದ್ದರು. ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬಂದಿದೆ. `ಶ್ರಮ ಏವ ಜಯತೆ’ ಎಂಬ ಸಂಸ್ಥೆಯ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಪ್ರತಿಕ್ರೀಯಿಸಿದ್ದಾರೆ.
ಮಂಗಳೂರು : ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ … ಹೀಗಂತ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ.
ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸುವ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ.
ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು.
ಆದರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಎಂದು ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.
ಮಂಗಳೂರು : ಇಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾಲಿ ಚಾಯ್ ವಾಲ ಅವರನ್ನು ಅದ್ದೂರಿಯಾಗಿ ಸ್ವಾಗತ ಕೊರಲಾಯಿತು.
ಮಂಗಳೂರಿನಲ್ಲಿ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟದಲ್ಲಿ ಈ ಬಾರಿ ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್‌ವಾಲ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಅವರು ಭಾಗವಹಿಸಲಿದ್ದಾರೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಿಲ್ಲಾಡಳಿತದ ಸಹಕಾರದಲ್ಲಿ ಈ ಐದು ದಿನಗಳ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಹಮ್ಮಿಕೊಳ್ಳಲಾಗಿದೆ.
ತನ್ನ ಮಂಗಳೂರು ಭೇಟಿಯ ಕುರಿತು ಡಾಲಿ ಚಾಯ್‌ವಾಲ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ‘ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. ಮಜಾ ಕರೇಂಗೆ .. ಚಾಯ್ ಪಿಯೇಂಗೆ’ ಎಂದು ಪೋಸ್ಟ್ ಹಾಕಿದ್ದರು.
ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್ ಹಂಚಿ ಕೊಂಡ ಬಳಿಕ ಡಾಲಿ ಚಾಯ್‌ವಾಲ ಅವರು ದೇಶಾದ್ಯಂತ ಪರಿಚಿತರಾಗಿದ್ದಾರೆ. ಅವರ ಮೂಲ ಹೆಸರು ಸುನಿಲ್ ಪಾಟೀಲ್. ಆದರೆ ಅವರು ಡಾಲಿ ಚಾಯ್‌ವಾಲ ಎಂದೇ ಪ್ರಸಿದ್ಧರಾಗಿದ್ದಾರೆ.
ಸುಳ್ಯ: ಹೆಂಡತಿಯನ್ನು ಗುಂ*ಡಿಕ್ಕಿ ಕೊಂ*ದ ಗಂಡ ಬಳಿಕ ತಾನೂ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಶರಣಾಗಿರುವ ಘಟನೆ ನಿನ್ನೆ (ಜ.17) ತಡರಾತ್ರಿ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ, ಕೃಷಿಕ ರಾಮಚಂದ್ರ ಗೌಡ ಅಲಿಯಾಸ್ ಚಂದ್ರ (54) ಕೃತ್ಯ ಎಸಗಿ ಆ*ತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಪತ್ನಿ ವಿನೋದ (43) ಹ*ತ್ಯೆಗೊಳಗಾದವರು. ತನ್ನದೇ ಲೈಸನ್ಸ್ ಹೊಂದಿದ್ದ ಗನ್‌ನಿಂದ ಕೃ*ತ್ಯ ಎಸಗಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ಕುಡಿದು ಬಂದಿದ್ದ ರಾಮಚಂದ್ರ ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಪತ್ನಿ ಹಾಗೂ ಪುತ್ರನೊಡನೆ ಜಗಳ ಆರಂಭಿಸಿದ್ದು, ಬಳಿಕ ಗಲಾಟೆ ವಿಪರೀತವಾಗಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗಲಾಟೆ ವೇಳೆ ರಾಮಚಂದ್ರ ಗ*ನ್‌ನಿಂದ ಹಿರಿಯ ಮಗ ಪ್ರಶಾಂತ್ ಗೆ ಗುರಿಯಿಟ್ಟಿದ್ದು ಇದನ್ನು ತಪ್ಪಿಸಲು ವಿನೋದ ಕೋ*ವಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ.
ಈ ವೇಳೆ ಪತ್ನಿಯ ಮೇಲೆ ಗುರಿಯಿರಿಸಿ ಗುಂ*ಡಿಕ್ಕಿದ್ದು, ಘಟನೆಯಿಂದ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಮೃ*ತಪಟ್ಟಿದ್ದಾರಳೆ. ಪತ್ನಿ ಮೃ*ತಪಟ್ಟ ಬಳಿಕ ಪತಿ ರಾಮಚಂದ್ರ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿ ಆ*ತ್ಮಹ*ತ್ಯೆಗೆ ಶರಣಾಗಿದ್ದಾನೆ. ಮಗ ಪ್ರಶಾಂತ್ ಈ ಕುರಿತಂತೆ ಹೇಳಿಕೆ ನೀಡಿದ್ದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃ*ತದೇ*ಹಗಳನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ