LATEST NEWS
ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ನಕ್ಸಲರು ಶರಣಾಗತಿ
Published
19 hours agoon
By
NEWS DESK2ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದಂತ 6 ಮೋಸ್ಟ್ ವಾಂಟೆಂಡ್ ನಕ್ಸಲರು ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ.
ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಕಚೇರಿಯಿಂದ ಮಾಹಿತಿ ನೀಡಲಾಗಿದ್ದು, ಇಂದು ಸಂಜೆ 6 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾಗತಿ ಆಗಲಿದ್ದಾರೆ ಎಂದು ತಿಳಿಸಿದೆ.
ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ
ರಾಜ್ಯ ಸರ್ಕಾರದಿಂದ ಶರಣಾಗುತ್ತಿರುವಂತ ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಮೂರು ಕೆಟಗರಿಯಲ್ಲಿ ಪ್ಯಾಕೇಜ್ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
- ಕೆಟಗರಿ ಎ ವರ್ಗದಡಿ ನಮ್ಮ ರಾಜ್ಯದವರೇ ಆಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ, ಕೇಸ್ ಇದ್ದು ಶರಣಾಗುತ್ತಿರುವವರಿಗೆ 7.50 ಲಕ್ಷ ಹಣ ನೀಡುತ್ತಿದೆ.
- ಕೆಟಗರಿ ಬಿ ವರ್ಗದಡಿ ಹೊರ ರಾಜ್ಯದ ನಕ್ಸಲರಿಗೆ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೇ 4 ಲಕ್ಷ ಪ್ಯಾಕೇಜ್ ನೀಡುವುದಾಗಿ ತಿಳಿಸಿದೆ.
- ಕೆಟಗರಿ ಸಿ ವರ್ಗದಡಿ ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಪ್ರಕರಣಗಳು ಇದ್ದರೂ 2 ಲಕ್ಷ ಹಣವನ್ನು ಪ್ಯಾಕೇಜ್ ನಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ಯಾರೆಲ್ಲ ನಕ್ಸಲರು ಶರಣಾಗತಿ?
- ಬಾಳೆಹೊಳೆ ಕಳಸದ ವನಜಾಕ್ಷಿ
- ಮುಂಡಗಾರು ಶೃಂಗೇರಿಯ ಲತಾ
- ದಕ್ಷಿಣ ಕನ್ನಡದ ಕುಂತಲೂರಿನ ಸುಂದರಿ
- ರಾಯಚೂರಿನ ಮಾರಪ್ಪೆ ಅರೋಳಿ
- ತಮಿಳುನಾಡಿನ ವಸಂತ ಟಿ
- ಕೇರಳದ ಎನ್.ಜೀಶಾ
DAKSHINA KANNADA
ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ
Published
1 second agoon
09/01/2025By
NEWS DESK3ಮಂಗಳೂರು : ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ 9 ದೋಣಿಗಳನ್ನು ವಶಪಡಿಸಿದ್ದಾರೆ.
ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಂಬ್ಲಮೊಗರು ಸಮೀಪ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸ್ಥಳದಲ್ಲಿದ್ದ ಸುಮಾರು 13.5 ಲಕ್ಷ ರೂಪಾಯಿ ಮೌಲ್ಯದ 9 ಬೋಟು, 2 ಯಂತ್ರ, 3 ಗ್ಯಾಸ್ ಸಿಲಿಂಡರ್, 13 ಪ್ಲಾಸ್ಟಿಕ್ ಬಕೆಟ್ ಗಳನ್ನು ವಶಪಡಿಸಲಾಯಿತು.
ಇದನ್ನೂ ಓದಿ: ಮಗುವಿಗೆ ಸು*ಟ್ಟು ಗಾಯ ಮಾಡಿದ ಪ್ರಕರಣ; ಆರೋಪಿ ತಾಯಿಗೆ ಶಿಕ್ಷೆ ಪ್ರಕಟ
ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಗಣಿ ಇಲಾಖೆ ಭೂವಿಜ್ಞಾನಿ ಗಿರೀಶ್ ಮೋಹನ್, ಸಿಬ್ಬಂದಿಗಳು ಇದ್ದರು.
LATEST NEWS
ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 7 ಮಂದಿ ಸಾ*ವು, 30ಕ್ಕೂ ಅಧಿಕ ಮಂದಿಗೆ ಗಾಯ
Published
1 hour agoon
09/01/2025By
NEWS DESK3ತಿರುಪತಿ : ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ದರ್ಶನ ಟಿಕೆಟ್ ಪಡೆಯಲು ಸೇರಿದ್ದ ಭಕ್ತರ ಸಮೂಹದಲ್ಲಿ ಉಂಟಾದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮೃ*ತಪಟ್ಟವರ ಸಂಖ್ಯೆ ಏಳಕ್ಕೇರಿದೆ.
ಬುಧವಾರ ಸಂಜೆ ನಡೆದ ಈ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವಿಷ್ಣು ನಿವಾಸಮ್, ಶ್ರೀನಿವಾಸಂ ಮತ್ತು ಪದ್ಮಾವತಿ ಪಾರ್ಕ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು ಟಿಕೆಟ್ ವಿತರಣೆ ಆರಂಭಿಸಿದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು.
ಅಸ್ವಸ್ಥ ಭಕ್ತರೊಬ್ಬರು ಸರದಿಯಿಂದ ನಿರ್ಗಮಿಸಲು ಗೇಟು ತೆರೆದ ಸಂದರ್ಭದಲ್ಲಿ ಎರಡು ಕಡೆಗಳಲ್ಲಿ ಕಾಲ್ತುಳಿತ ಸಂಭವಿಸಿತು. ಮುಂಜಾನೆಯಿಂದಲೇ ಸರದಿಯಲ್ಲಿ ಕಾಯುತ್ತಿದ್ದ ಭಕ್ತರು ಮುಂದೆ ನುಗ್ಗಿದ್ದು, ತೀವ್ರ ಜನದಟ್ಟಣೆ ಮತ್ತು ಅವ್ಯವಸ್ಥೆಗೆ ಕಾರಣವಾಯಿತು.
ಇದನ್ನೂ ಓದಿ: ಮಗುವಿಗೆ ಸು*ಟ್ಟು ಗಾಯ ಮಾಡಿದ ಪ್ರಕರಣ; ಆರೋಪಿ ತಾಯಿಗೆ ಶಿಕ್ಷೆ ಪ್ರಕಟ
ತಮಿಳುನಾಡಿನ ಸೇಲಂನಿಂದ ಆಗಮಿಸಿದ್ದ ಮಲ್ಲಿಕಾ ಎಂಬ ಮಹಿಳೆ ದೇಗುಲ ನಗರಿಯ ರುಯಿಯಾ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃ*ತಪಟ್ಟರೆ ಇತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಕೊ*ನೆಯುಸಿರೆಳೆದಿದ್ದಾರೆ. ಮತ್ತಿಬ್ಬರು ಎಸ್ ವಿ ಐಎಂಎಸ್ ನಲ್ಲಿ ಮೃ*ತಪಟ್ಟರು. ಹಲವು ಮಂದಿ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿರುವುದರಿಂದ ಮೃ*ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನದಟ್ಟಣೆಯನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದು ಕಾಲ್ತುಳಿತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗೇಟು ತೆಗೆದ ಸಂದರ್ಭದಲ್ಲಿ ಪೊಲೀಸರು ಕೂಡಾ ಅಲ್ಲಿರಲಿಲ್ಲ. ಹಲವು ಗಂಟೆಗಳಿಂದ ಕಾಯುತ್ತಿದ್ದ ಸಾವಿರಾರು ಮಂದಿ ಟಿಕೆಟ್ ಪಡೆಯಲು ನುಗ್ಗಿದರು ಎಂದು ಘಟನೆಯಲ್ಲಿ ಉಳಿದುಕೊಂಡ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ.
ವೈಕುಂಠ ಏಕಾದಶಿಯಂದು 2-3 ಲಕ್ಷ ಮಂದಿ ದರ್ಶನ ಪಡೆಯುತ್ತಾರೆ. ಜನವರಿ 10, 11 ಮತ್ತು 12ರಂದು ನಡೆಯುವ ವೈಕುಂಠ ದ್ವಾರ ಸೇವಾ ದರ್ಶನಕ್ಕಾಗಿ ಒಂಬತ್ತು ಕೇಂದ್ರಗಳ 94 ಕೌಂಟರ್ಗಳಲ್ಲಿ ಟೋಕನ್ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
DAKSHINA KANNADA
ಮಗುವಿಗೆ ಸು*ಟ್ಟು ಗಾಯ ಮಾಡಿದ ಪ್ರಕರಣ; ಆರೋಪಿ ತಾಯಿಗೆ ಶಿಕ್ಷೆ ಪ್ರಕಟ
Published
2 hours agoon
09/01/2025By
NEWS DESK3ಸುಳ್ಯ : ತಾಯಿಯೊಬ್ಬಳು ತನ್ನ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾ*ಯಗೊಳಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ನ್ಯಾಯಾಲಯ ಆರೋಪಿಗೆ ಶಿಕ್ಷೆ ಘೋಷಿಸಿದೆ.
ಕಾವ್ಯಶ್ರೀ ಎಂಬುವವರು 2022ರ ಆ.16ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಬಿಸಿ ಹಾಲಿನ ಪಾತ್ರೆಯಿಂದ ತನ್ನ 5 ವರ್ಷ ಪ್ರಾಯದ ಪುತ್ರಿಯ ದೇಹದ ವಿವಿಧ ಕಡೆ ಸು*ಟ್ಟು ನೋವುಂಟು ಮಾಡಿದ್ದರು.
ಇದನ್ನೂ ಓದಿ: ಮಂಗಳೂರು: ಹೊಸಬೆಟ್ಟು ಬೀಚ್ ಬಳಿ ನೀರಾಟಕ್ಕಿಳಿದ ನಾಲ್ವರಲ್ಲಿ ಮೂವರು ಸಾವು, ಓರ್ವನ ರಕ್ಷಣೆ
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಸುಳ್ಯ ಠಾಣೆಯಲ್ಲಿ ತಾಯಿ ವಿರುದ್ದ ದೂರು ದಾಖಲಿಸಿದ್ದರು.
ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರು ಆಪಾದಿತೆಯನ್ನು ದೋಷಿಯೆಂದು ಘೋಷಿಸಿದ್ದಾರೆ. ಅಪಾದಿತೆಗೆ ಒಟ್ಟು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಕಾರಗೃಹ ವಾಸದ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದಿಸಿದ್ದರು.
LATEST NEWS
ಬಂಟ್ವಾಳ: ಅದ್ಧೂರಿಯಾಗಿ ನಡೆದ “ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನ-25” ಕಾರ್ಯಕ್ರಮ
ಮಂಗಳೂರು: ಹೊಸಬೆಟ್ಟು ಬೀಚ್ ಬಳಿ ನೀರಾಟಕ್ಕಿಳಿದ ನಾಲ್ವರಲ್ಲಿ ಮೂವರು ಸಾವು, ಓರ್ವನ ರಕ್ಷಣೆ
ಕೆನಡಾ ಪ್ರಧಾನಿ ರೇಸ್ ನಲ್ಲಿರುವ ಅನಿತಾ ಆನಂದ್ ಯಾರು ?
ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ನಕ್ಸಲರು ಶರಣಾಗತಿ
ಮಂಗಳೂರು: ಕ್ಯು ಆರ್ ಕೋಡ್ ಬದಲಿಸಿ ಪೆಟ್ರೋಲ್ ಬಂಕ್ ಸೂಪರ್ವೈಸರ್ನಿಂದ 58.85 ಲ. ರೂ ವಂಚನೆ
ಜಾತ್ರೆಯಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ; 29 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
Trending
- DAKSHINA KANNADA6 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- FILM23 hours ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM3 days ago
ಯಶ್ ಫ್ಯಾನ್ಸ್ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್ನಿಂದ ಸಿಕ್ತು ಸಿಹಿ ಸುದ್ದಿ
- BIG BOSS5 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?