ನವದೆಹಲಿ: ರಾಜಸ್ಥಾನದಲ್ಲಿ ಮೊದಲ HMPV ಸೋಂಕು ದೃಢಪಟ್ಟಿದ್ದು, 6 ತಿಂಗಳ ಮಗುವಿನಲ್ಲಿ HMPV ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ HMPV ಸೋಂಕಿತರ ಸಂಖ್ಯೆ 14 ಕ್ಕೆ ಏರಿದೆ. ಗುಜರಾತ್‌ನಲ್ಲಿ ಅತಿ ಹೆಚ್ಚು (4 ಪ್ರಕರಣಗಳು) ಸಕ್ರಿಯ ಪ್ರಕರಣಗಳಿವೆ. ರಾಜಸ್ಥಾನದಲ್ಲಿ 6 ತಿಂಗಳ ಹೆಣ್ಣು ಮಗುವಿಗೂ ಸೋಂಕು ತಗುಲಿದೆ ಎಂದು ವರದಿಯಾಗಿದೆ.
ಹ್ಯೂಮನ್ ಮೆಟಾಪ್ನ್ಯೂಮೊ ವೈರಸ್ (HMPV) ಎಂದರೇನು?
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ವೈರಸ್ ಆಗಿದ್ದು, ಇದು ಮುಖ್ಯವಾಗಿ ಚಳಿಗಾಲದಲ್ಲಿ ಹರಡುತ್ತದೆ. ಈ ವೈರಸ್ ತುಂಬಾ ಆಕ್ರಮಣಕಾರಿಯಾದರೆ, ಅದು ಶ್ವಾಸಕೋಶವನ್ನು ಪ್ರವೇಶಿಸುತ್ತದೆ ಮತ್ತು ನ್ಯುಮೋನಿಯಾವನ್ನು ಉಂಟುಮಾಡುತ್ತದೆ. ಇದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಚಿಕ್ಕ ಮಕ್ಕಳು ಮತ್ತು ವೃದ್ಧರು ಈ ವೈರಸ್‌ನಿಂದ ಹೆಚ್ಚು ಪರಿಣಾಮ ಬೀರುತ್ತಾರೆ. ಈ ವೈರಸ್ ಅನ್ನು ಮೊದಲು 2001 ರಲ್ಲಿ ಗುರುತಿಸಲಾಯಿತು.
HMPV ಹೇಗೆ ಹರಡುತ್ತದೆ?
ಈ ವೈರಸ್ ಕೆಮ್ಮು, ಸೀನುವಿಕೆ, ಕೈಕುಲುಕುವುದು ಅಥವಾ ಸೋಂಕಿತ ವ್ಯಕ್ತಿಯನ್ನು ಸ್ಪರ್ಶಿಸುವ ಮೂಲಕವೂ ಹರಡುತ್ತದೆ. HMPV ವೈರಸ್‌ನ ಲಕ್ಷಣಗಳು ಸೋಂಕಿಗೆ ಒಳಗಾದ 5 ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ವೈರಸ್‌ನ ಹೆಚ್ಚಿನ ಲಕ್ಷಣಗಳು ಕರೋನಾ ವೈರಸ್‌ನಂತೆಯೇ ಇರುತ್ತವೆ, ಇದರಿಂದಾಗಿ ಜನರು ಅದರ ಬಗ್ಗೆ ಭಯಪಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ನಾವು ಎಷ್ಟೇ ಸುರಕ್ಷಿತವಾಗಿದ್ದರೂ ಅದು ಸಾಕಾಗುವುದಿಲ್ಲ. ಶತ್ರುಗಳ ದಾಳಿ ಯಾವಾಗ ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಆಗಬಹುದು. ಆದರೆ ಈ ಒಂದು ಬಿಲ್ಡಿಂಗ್ ಸುರಕ್ಷತೆಯಲ್ಲಿ ಜಗತ್ತನ್ನೇ ಮೀರಿಸಿದೆ. ಯಾಕೆಂದರೆ ಈ ಬಿಲ್ಡಿಂಗ್ ಹೊಕ್ಕಲು ಯಾರಿಗೂ ಅಷ್ಟು ಸಾಧ್ಯವಿಲ್ಲದ ಸಂಗತಿ. ಇದರಲ್ಲಿರುವ ಹೈ ಸೆಕ್ಯೂರಿಟಿಯಿಂದಾಗಿ ಶತ್ರುಗಳಿಗೆ ಏನು ಮಾಡಲು ಅಸಾಧ್ಯ. ಹಾಗಾದರೆ ಅದು ಯಾವ ಬಿಲ್ಡಿಂಗ್ ? ಎಲ್ಲಿದೆ ಎಂಬುದನ್ನು ನೋಡೋಣ ಬನ್ನಿ.
ಅಮೇರಿಕ ಅಧ್ಯಕ್ಷರ ವೈಟ್ ಹೌಸ್ ಪ್ರಪಂಚದ ಅತ್ಯಂತ ಸುರಕ್ಷಿತ ಕಟ್ಟಡ. ಇಲ್ಲಿರುವ ಸೆಕ್ಯೂರಿಟಿ ನೋಡಿದರೆ ನಿಮಗೂ ಶಾಕ್ ಆಗಬಹುದು. ಈ ಬಿಲ್ಡಿಂಗ್‌ನ ನಾಲ್ಕು ಸುತ್ತಲೂ 13 ಫೀಟ್ ಎತ್ತರದ ಸ್ಟೀಲ್‌ನ ಗೇಟ್‌ಗಳಿವೆ. ಇದರಲ್ಲಿ ಸ್ಪೇಷಲ್ ಫ್ರೇಜರ್ ಸೆನ್ಸರ್‌ಗಳನ್ನ ಅಳವಡಿಸಲಾಗಿದೆ. ಇದನ್ನು ಯಾರಾದರೂ ಹತ್ತುವ ಪ್ರಯತ್ನ ಪಟ್ಟರೆ ಸೆಕ್ಯೂರಿಟಿ ಅಲರಾಂ ಅಲರ್ಟ್ ಆಗುತ್ತದೆ.
ಇನ್ನು ಇದರ ಸುತ್ತಲೂ ಇನ್ಫ್ರಾರೆಡ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಚಲಿಸುವ ವ್ಯಕ್ತಿಗಳ ಹೀಟರ್‌ಗಳನ್ನ ಮೇಜರ್ ಮಾಡುತ್ತದೆ. ಯಾವೂದೇ ರೀತಿಯ ಅಪಾಯ ಬಂದರೂ ಸೆಕ್ಯೂರಿಟಿ ಟೀಮ್‌ಗಳಿಗೆ ಅಲರ್ಟ್ ಕೊಡುತ್ತದೆ. ಈ ವೈಟ್ ಹೌಸ್‌ನ ಏರಿಯಾ ನೋ ಫೈಝೋನ್. ಅಂದರೆ ಒಂದು ವೇಳೆ ಶತ್ರುಗಳು ಉಪದ್ರ ಕೊಡಲು ಬಂದರೆ Surface to air machine system ಇದೆ. ಇದು ಮೊದಲೇ ಪತ್ತೇ ಮಾಡಿ ನಾಶ ಮಾಡುತ್ತದೆ.
ವೈಟ್ ಹೌಸ್‌ನ ಒಳಗಡೆ ಮಲ್ಟಿ ಲೇವಲ್ ಬಂಕರ್ ಕೂಡ ಇದೆ. ಇದು ಅಮೇರಿಕ ಅಧ್ಯಕ್ಷರನ್ನ ನ್ಯೂಕ್ಲಿಯರ್ ಅಟ್ಯಾಕ್ ಮತ್ತು ಕೆಮಿಕಲ್ ಅಟ್ಯಾಕ್ ನಿಂದ ಸುರಕ್ಷಿತ ಮಾಡುತ್ತದೆ. ಇನ್ನು ಈ ಕಟ್ಟಡದ ಕಿಟಕಿಗಳೆಲ್ಲಾ ಬುಲೆಟ್ ಫ್ರೂಫ್, 24×7 ವೇ ಯಲ್ಲಿ ಎಐ ಕ್ಯಾಮಾರಗಳು, ಅಷ್ಟೇ ಅಲ್ಲದೇ ನುರಿತ ಶ್ವಾನಗಳು ಕೂಡ ಇಲ್ಲಿ ಇದೆ.
ಪುತ್ತೂರು : ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಸೂರಜ್ ಕೆ(36) ಬಂಧಿತ ಕಳ್ಳ. ಡಿಸೆಂಬರ್ 20 ರಂದು ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲು ಮುರಿದು ಆರೋಪಿ ಸೂರಜ್ ಚಿನ್ನಾಭರಣಗಳನ್ನು ಕದ್ದಿದ್ದ. ಇದೇ ರೀತಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿತ್ತು.
ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಆರೋಪಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದಾಗಿ ತಿಳಿದುಬಂದಿದೆ.
ಆರೋಪಿಯಿಂದ 18,00000 ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3,00,000 ರೂ. ಮೌಲ್ಯದ ಕಾರು ಸೇರಿ ಒಟ್ಟು 21,00,000 ರೂ.ನ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು/ಚಿಕ್ಕಮಗಳೂರು : ಆರು ಜನ ನಕ್ಸಲರ ಶರಣಾಗತಿಯೊಂದಿಗೆ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ರಾಜ್ಯ ಎಂದು ಸರ್ಕಾರ ಹೇಳುತ್ತಿದ್ದರೂ, ಆ ಒಬ್ಬ ಕುಖ್ಯಾತ ನಕ್ಸಲ್ ಇನ್ನೂ ಶರಣಾಗತಿಯಾಗದೇ ತಲೆಮರೆಸಿಕೊಂಡಿದ್ದಾನೆ.
ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಎಂಟು ನಕ್ಸಲರ ಪೈಕಿ ವಿಕ್ರಮ್ ಗೌಡ ಎನ್ ಕೌಂಟರ್ ಆಗಿದ್ದರೆ, ಆರು ಮಂದಿ ಬುಧವಾರ ಶರಣಾಗತರಾಗಿದ್ದಾರೆ. ಆದರೆ ಓರ್ವ ನಕ್ಸಲ್ ರವಿಂದ್ರ ಮಾತ್ರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.
ಹೇಗಾದರೂ ಮಾಡಿ ಆತನನ್ನೂ ಶರಣಾಗತಿ ಮಾಡಿಸಲು ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ.
ಜಾತ್ರೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ರವೀಂದ್ರ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕೊಟೆ ಹೊಂಡದ ಮರಾಠ ಕಾಲೋನಿ ನಿವಾಸಿಯಾಗಿರುವ ರವೀಂದ್ರ ನಾಯ್ಕ ಪೊಲೀಸರಿಗೆ ಬೇಕಾಗಿರುವ ಕೊನೆಯ ನಕ್ಸಲ್ ಮುಖಂಡನಾಗಿದ್ದಾನೆ. ಈತ 2007ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳು ಅಮಾವಾಸ್ಯೆ ಜಾತ್ರೆಯಲ್ಲಿ, ಅಂದು ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿದ್ದ ಶ್ರೀಮತಿಯೊಂದಿಗೆ ಕಾಣಿಸಿಕೊಂಡಿದ್ದೇ ಕೊನೆ. ನಂತರ ಆತ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.
ನಕ್ಸಲ್ ಸಂಘಟನೆ ತೊರೆದ ಶ್ರೀಮತಿ
ರವೀಂದ್ರ ನಾಯಕ ಅವರ ಶ್ರೀಮತಿ ನಕ್ಸಲ್ ಸಂಘಟನೆ ತೊರೆದು ಜಿಲ್ಲಾಡಳಿತದೆದುರು ಶರಣಾದರೂ ರವೀಂದ್ರ ನಾಯ್ಕ ಮಾತ್ರ ಚಳುವಳಿಯಲ್ಲೇ ಸಕ್ರೀಯನಾಗಿದ್ದ. ಆತನ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲೇ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಚಿಕ್ಕಮಗಳೂರಿನ ಬೇರೆ ಬೇರೆ ಠಾಣೆಗಳು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು ಸುಮಾರು 38 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹೊರ ರಾಜ್ಯಗಳಲ್ಲೂ ಪ್ರಕರಣಗಳಿವೆ ಎನ್ನಲಾಗಿದೆ.
ಶರಣಾಗತಿಗೆ ಒಪ್ಪುತ್ತಿಲ್ಲ ರವೀಂದ್ರ
ಕಳೆದ 18 ವರ್ಷಗಳ ಹಿಂದೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದ ರವೀಂದ್ರ ನಾಯ್ಕ ಈಗ ಶರಣಾಗತಿ ಹೊಂದಿರುವ ಆರು ಜನರಿಗಿಂತಲೂ ಕಿರಿಯ ಎನ್ನಲಾಗುತ್ತಿದೆ. ಇನ್ನೂ ಹೋರಾಟದ ಕಿಚ್ಚಿರುವುದರಿಂದ ಆತ ಶರಣಾಗತಿಗೆ ಒಪ್ಪುತ್ತಿಲ್ಲ ಎಂದೂ ನಿನ್ನೆ ಪ್ರವಾಸಿಮಂದಿರದ ಬಳಿ ನಕ್ಸಲ್ ಸಹಾನುಭೂತಿ ಹೊಂದಿದ ಕೆಲವರು ಈ ಕುರಿತು ಮಾತನಾಡಿಕೊಂಡಿದ್ದಾರೆ.
ಸ್ಪಷ್ಟನೆ ಕೊಟ್ಟ ಗೃಹ ಸಚಿವರು
ಈ ಬಗ್ಗೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಡಾ.ಜಿ. ಪರಮೇಶ್ವರ್, “ನಕ್ಸಲ್ ಚಟುವಟಿಕೆ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ನಕ್ಸಲ್ ರವೀಂದ್ರನನ್ನು ಶರಣಾಗತರಾಗಿರುವ ಗುಂಪಿನವರು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ, ತನಿಖೆ ನಡೆದಿದೆ. ನಕ್ಸಲರ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಅಗತ್ಯಕ್ರಮ ಕೈಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.
ನಕ್ಸಲ್ ಮುಕ್ತ ರಾಜ್ಯ ಎನ್ನುವ ಅಧಿಕೃತ ಘೋಷಣೆ ಹೊರಬೀಳಲು ಅಡ್ಡಿಯಾಗಿರುವ ಕೊನೆಯ ಹೆಸರು ಈಗ ರವೀಂದ್ರ ನಾಯ್ಕನದ್ದಾಗಿದೆ. ಆದರೆ ಈತ ಮಾತ್ರ ನಾಪತ್ತೆಯಾಗಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.