Connect with us

    STATE

    ಮುಖ್ಯಶಿಕ್ಷಕನಿಂದಲೇ ಬ*ಲತ್ಕಾರಕ್ಕೊಳಗಾದ 5ನೇ ತರಗತಿ ವಿದ್ಯಾರ್ಥಿನಿ !

    Published

    on

    ಮಂಗಳೂರು/ಕಲಬುರಗಿ: 5ನೇ ತರಗತಿ ವಿದ್ಯಾರ್ಥಿನಿಯನ್ನು ಮುಖ್ಯಶಿಕ್ಷಕನೇ ಅ*ತ್ಯಾಚಾರ ಮಾಡಿ ಬೆದರಿಕೆ ಹಾಕಿದ ಹೇ*ಯಕೃತ್ಯ ಕಲಬುರಗಿಯ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ.

     

    ಬಂಜಾರ್‌ ಸಮುದಾಯ ಸೇರಿ ವಿವಿಧ ಸಂಘಟನೆಗಳು ಯಡ್ರಾಮಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿವೆ. ಯಡ್ರಾಮಿ ಪಟ್ಟಣದ ನವೋದಯ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಹಾಜಿಮಲಂಗ್ ಗಣಿಯಾರ್ ಬಂಧಿತ ಆರೋಪಿ.

    ಶಾಲೆಯ 11 ವರ್ಷದ ಸಂತ್ರಸ್ತೆ ಬಾಲಕಿಯನ್ನು ಕಳೆದ 2-3 ದಿನದ ಹಿಂದೆಯೇ ಶಾಲೆಯಲ್ಲಿ ಪುಸಲಾಯಿಸಿ ಹಾಜಿ ಮಲಂಗ್ ಅ*ತ್ಯಾಚಾರ ಎಸಗಿದ್ದು, ಈ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಬಾಲಕಿ ಪಕ್ಕದ ಮನೆಯವರ ಮುಂದೆ ಶಾಲೆಯಲ್ಲಿ ನಡೆದ ಘಟನೆ ವಿವರಿಸಿದ ವೇಳೆ ಪಕ್ಕದ ಮನೆಯವರು ಕೂಡಲೇ ಬಾಲಕಿಯ ತಂದೆ-ತಾಯಿಗೆ ವಿಷಯ ತಿಳಿಸಿದ್ದು, ಬಂಜಾರಾ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಸೋಮವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಘಟನೆ ಖಂಡಿಸಿ ಪ್ರತಿಭಟನೆಯೂ ನಡೆಯಿತು. ಶಾಸಕ ಡಾ.ಅಜಯಸಿಂಗ್, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಯಡ್ರಾಮಿಯಲ್ಲಿ ಶಾಲಾ ಬಾಲಕಿ ಮೇಲೆ ನಡೆದಿರುವಂತಹ ಈ ಅತ್ಯಾಚಾರ ಘಟನೆ ಹೀ*ನ ಕೃ*ತ್ಯವೆಂದು ಖಂಡಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ‘ದು*ಷ್ಟಕೃತ್ಯ ಎಸಗಿರುವರ ಜಾತಿ, ಮತ ನೋಡುತ್ತ ಕುಳಿ ತುಕೊಳ್ಳೋದಿಲ್ಲ, ಅಂತಹವರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂ ನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ. ಯಡ್ರಾಮಿಯಲ್ಲಿ ಘಟನೆ ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳವರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬದ ಜೊತೆ ಮಾತನಾಡಿ, ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

    ‘ಖಾಸಗಿ, ಸರ್ಕಾರಿ ಶಾಲೆ ಯಾವುದೇ ಆಗಿರಲಿ, ಅವರು ಇತರರಿಗೆ ಮಾದರಿಯಾಗಿರುವಂತೆ ಶಿಸ್ತು, ಸಂಯಮದಿಂದ ಬದುಕ ಬೇಕು. ಅವರೇ ಇಂತಹ ಹೀ*ನ ಕೃ*ತ್ಯಕ್ಕೆ ಮುಂದಾಗುತ್ತಾರೆಂದರೆ ಅದನ್ನು ಯಾರೂ ಸಹಿಸಲಾಗದು. ಅಂತಹವರಿಗೆ ತಕ್ಕಪಾಠ ಕಲಿಸಲೇಬೇಕಾಗುತ್ತದೆ’ ಎಂದು ಹೇಳಿದರು. ‘ಆರೋಪಿಯ ಕೃ*ತ್ಯ ಘೋರವಾಗಿದೆ. ಮಾನವೀಯತೆಯನ್ನೇ ಮರೆತು ವರ್ತಿಸಿದ್ದಾನೆ. ಇಲ್ಲಿ ಆರೋಪಿ ಯಾರು, ಆತನ ಸಮುದಾಯ ಇವನ್ನೆಲ್ಲ ನೋಡದೆ ಅಗತ್ಯ ಪೊಲೀಸ್, ವೈದ್ಯಕೀಯ, ನ್ಯಾಯಾಂಗ ಕ್ರಮಗಳೊಂದಿಗೆ ಕಾನೂನು ರೀತಿಯ ಶಿಕ್ಷೆಯಾಗಲಿದೆ’ ಎಂದು ಡಾ. ಅಜಯ್ ಸಿಂಗ್ ಹೇಳಿದರು.

    bangalore

    ಆನ್ ಲೈನ್ ಗೇಮಿಂಗ್ ಹುಚ್ಚಿಗೆ ಬ*ಲಿಯಾದ ಯುವಕ !

    Published

    on

    ಮಂಗಳೂರು/ಬೆಂಗಳೂರು: ಆನ್ ಲೈನ್ ಗೇಮಿಂಗ್ ಹುಚ್ಚು ಜಾಸ್ತಿಯಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಗೃಹಿಣಿಯರು, ಸೆಲೆಬ್ರಿಟಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿದೆ.

    ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆನ್ ಲೈನ್ ಗೇಮಿಂಗ್ ನಿಂದ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿ*ಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.

    ಇದನ್ನೂ ಓದಿ: ಹತ್ತು ನಿಮಿಷದಲ್ಲಿ 2.63 ಕೋಟಿಗೆ ಬ್ರಾಡ್ಮನ್ ಕ್ಯಾಪ್ ಹರಾಜು !

    ಈಗ ಇಂಥದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪ್ರವೀಣ್ ಎಂಬ 19 ವರ್ಷದ ಯುವಕ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾಗಿದ್ದಾನೆ. ಕಳೆದ ಹತ್ತು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಪ್ರವೀಣ್ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್ ಆಡುತ್ತಿದ್ದ. ಆನ್ ಲೈನ್ ಗೇಮ್ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಹೀಗಾಗಿ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

    ಆನ್ ಲೈನ್ ಗೇಮ್ ಭೂತ ಹೊಕ್ಕು ಆತನ ಜೀವವನ್ನೆ ಕಿತ್ತುಕೊಂಡಿದೆ. ಆನ್ ಲೈನ್ ಮೂಲಕ ಆಟವಾಡಿ ಹಣವನ್ನು ಕಳೆದುಕೊಂಡು ನಂತರ ಸಾಲ ಮಾಡುತ್ತಾರೆ. ಸಾಲಗಾರರ ಕಾಟ ತಡೆಯಲಾಗದೇ ಆತ್ಮಹತ್ಯೆಗೆ ಬ*ಲಿಯಾಗುತ್ತಿದ್ದಾರೆ.

    Continue Reading

    LATEST NEWS

    ಸರ್ಕಾರಿ ಉದ್ಯೋಗಿಗಳೇ ಬಿಪಿಎಲ್‌ ಕಾರ್ಡ್ ನಿಮ್ಮ ಬಳಿ ಇದೆಯಾ ? ಇದನ್ನೊಮ್ಮೆ ಓದಿ ..

    Published

    on

    ಈಗಾಗಲೇ ಕರ್ನಾಟಕ ಸರ್ಕಾರ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ನಡೆಸುತ್ತಿದ್ದು, ಬಿಪಿಎಲ್ ಕಾರ್ಡ್ (BPL Card) ಪಡೆಯುವ ಅರ್ಹತೆ ಷರತ್ತುಗಳ ಆಧಾರದಲ್ಲಿ ಸರ್ಕಾರೀ ನೌಕರರು, ತೆರಿಗೆದಾರರ ಬಳಿ ಬಿಪಿಎಲ್ ಇದ್ದರೆ ಅದನ್ನು ಎಪಿಎಲ್ ಗೆ ವರ್ಗಾಯಿಸುವ ಕೆಲಸ ಮಾಡುತ್ತಿದೆ. ಅಂತೆಯೇ ಈ ನಡುವೆ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರೀ ನೌಕರರಿಗೆ ಬಿಗ್ ಶಾಕ್ ಸಿಕ್ಕಿದೆ.

    ಸರ್ಕಾರದ ಮಾನದಂಡದ ಪ್ರಕಾರ ಸರ್ಕಾರೀ ನೌಕರರು, ತೆರಿಗೆ ಪಾವತಿ ಮಾಡುವವರಿಗೆ ಬಿಪಿಎಲ್ ಕಾರ್ಡ್ ರದ್ದಾಗಿದೆ. ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿದ್ದ ನೌಕರರ ರೇಷನ್ ಕಾರ್ಡ್ ನ್ನು ಎಪಿಎಲ್ ಗೆ ವರ್ಗಾಯಿಸಿರುವುದಲ್ಲದೆ ದಂಡದ ಬರೆ ನೀಡಿದೆ.

    ಇನ್ನು ಇದುವರೆಗೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 4,12, 890 ರೂ. ದಂಡ ವಿಧಿಸಲಾಗಿದೆ ಹಾಗೂ ಸುಮಾರು 72 ಸರ್ಕಾರಿ ನೌಕರರಿಗೆ ದಂಡ ವಿಧಿಸಲಾಗಿದೆ. ಒಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಅರ್ಹತೆ ಇರುವ ಬಡವರಿಗೆ ಮಾತ್ರ ಲಭಿಸುವಂತಾಗಬೇಕು. ಬಿಪಿಎಲ್ ಕಾರ್ಡ್ ಮೂಲಕ ಅನರ್ಹರೂ ಉಚಿತ ಯೋಜನೆಗಳ ಲಾಭ ಪಡೆಯುತ್ತಿದ್ದರೆ ಅದು ಸರ್ಕಾರಕ್ಕೆ ನಷ್ಟ ಉಂಟು ಮಾಡಲಿದೆ.

    Continue Reading

    sports

    ‘ಆರ್ ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ’: ಜಿತೇಶ್ ಶರ್ಮಾ !

    Published

    on

    ಮಂಗಳೂರು/ಬೆಂಗಳೂರು: ಇತ್ತಿಚೇಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಜಿತೇಶ್ ಶರ್ಮಾ ಅವರನ್ನು ಆರ್ ಸಿಬಿ 11 ಕೋಟಿಗೆ ಖರೀದಿಸಿತು. ಬೆಂಗಳೂರು ತಂಡ ಸೇರಿದ ಜಿತೇಶ್ ಆರ್ ಸಿಬಿ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ.


    ಆರ್ ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಆರ್ ಸಿಬಿ ನನ್ನನ್ನು ಖರೀದಿ ಮಾಡಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸಿದರು. ಹರಾಜಿನ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಉತ್ತಮ ತಂಡ ಖರೀದಿಸುತ್ತದೆ ಎನ್ನುವ ವಿಶ್ವಾಸವಿತ್ತು. ಆರ್ ಸಿಬಿ ನನ್ನನ್ನು ಖರೀದಿ ಮಾಡಿದ್ದು ಖುಷಿ ಹೆಚ್ಚಿಸಿದೆ ಎಂದಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?

    ವಿರಾಟ್ ಕೊಹ್ಲಿ ಜೊತೆ ಆಡಲು ನಾನು ಕಾಯುತ್ತಿದ್ದೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಅವರ ಫಿಟ್ ನೆಸ್ ನನಗೆ ಯಾವಾಗಲೂ ಸ್ಪೂರ್ತಿಯಾಗಿದೆ. ಅವರ ಜೊತೆ ಆಡಲು ನನಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

    ”ಹರಾಜಿನಿಂದ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಮುಕ್ತವಾಗಿ ಆಡುವ ಮತ್ತು ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಅವಕಾಶ ನೀಡುವ ತಂಡಕ್ಕಾಗಿ ಆಡಬೇಕು ಎನ್ನುವ ಆಸೆ ಇತ್ತು, ಆರ್ ಸಿಬಿ ನನ್ನನ್ನು ಖರೀದಿ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ದೇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು, ಆರ್ ಸಿಬಿ ನನಗೆ ಪರಿಪೂರ್ಣ ತಂಡವಾಗುತ್ತದೆ ಎನ್ನುವ ವಿಶ್ವಾಸವಿದೆ” ಎಂದಿದ್ದಾರೆ.

    Continue Reading

    LATEST NEWS

    Trending