Connect with us

WORLD

ಕುವೈಟ್‌ನ ‘ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್’ ಗೆ 5 ನೇ ವರ್ಷದ ಸಂಭ್ರಮ

Published

on

ಕುವೈಟ್: ನಮ್ಮ ಕರಾವಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಗಲ್ಫ್‌ ರಾಷ್ಟ್ರಗಳಲ್ಲಿ ಒಂದಾದ ಕುವೈಟ್ ನಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಬ್ರಾಂಡ್ ಸೃಷ್ಟಿ ಮಾಡಿರುವ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಗೆ ಇದೀಗ ಐದು ವರ್ಷದ ಸಂಭ್ರಮ.


ಕುವೈಟ್ ಸೇರಿ ಕತಾರ್, ಬಹರೈನ್, ಸೌದಿ, ದುಬೈಯಲ್ಲಿ ಕಾರ್ಯಚರಿಸುತ್ತಿರುವ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್.

ಗಲ್ಫ್‌ ರಾಷ್ಟ್ರಗಳಲ್ಲಿ ಒಟ್ಟು 22 ಆಸ್ಪತ್ರೆ ಹಾಗೂ ಮೆಡಿಕಲ್ ಸೆಂಟರ್ ಹೊಂದಿದ್ದು, ಪ್ರಮುಖ ಶಾಖೆ ಒಮಾನ್ ನಲ್ಲಿದೆ.

24 ಗಂಟೆಗಳ ಕಾಲ ತೆರೆದಿರುವ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಕುವೈಟ್ ಏರ್ ಪೋರ್ಟ್ ನಿಂದ 15 ನಿಮಿಷ ಪ್ರಯಾಣದ ಸಮಯವಿದ್ದು, ನಮ್ಮ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಈ ಆಸ್ಪತ್ರೆಯ ಮತ್ತೊಂದು ವಿಶೇಷತೆ.

2017ರಲ್ಲಿ ಕುವೈಟ್ ನಲ್ಲಿ ಪ್ರಾರಂಭವಾದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಇದೇ ಮಾರ್ಚ್ ತಿಂಗಳಿನಲ್ಲಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಈ ಸಂಧರ್ಭ ತುಳುಕೂಟ ಕುವೈಟ್, ಕೆಕೆಎಮ್, ಕೆಎಮ್ ಸಿ.ಸಿ, ತಮಿಳು, ಕೇರಳ ಅಸೋಸಿಯೇಷನ್ ಸೇರಿ ವಿವಿಧ ರಾಜ್ಯದ ಅಸೋಸಿಯೇಷನ್ ನ ಅಧ್ಯಕ್ಷರು ಸಂಭ್ರಮದಲ್ಲಿ ಭಾಗಿಯಾಗಿದ್ದರು.

5 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಉಚಿತ ಕಣ್ಣಿನ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಸಂಪೂರ್ಣ ಬಾಡಿ ಚೆಕಪ್ ನಲ್ಲಿ ಅತ್ಯತ್ತಮ ರಿಯಾಯಿತಿ ದರದಲ್ಲಿ ಸೌಲಭ್ಯ ನೀಡಲಾಯಿತು.

ಕೋವಿಡ್ ಸಂದರ್ಭ ಅತ್ಯಂತ ರಿಯಾಯಿತಿ ದರದಲ್ಲಿ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದ ಬದ್ರ್ ಅಲ್ ಸಮಾ.

ಆರೋಗ್ಯ ಮಾತ್ರವಲ್ಲದೆ ಕುವೈಟ್ ನಲ್ಲಿ ನಮ್ಮ ಕನ್ನಡಿಗರಿಗೋಸ್ಕರ ಅನೇಕ ಬ್ಲಡ್ ಡೊನೇಷನ್ ಕಾರ್ಯಕ್ರಮ,

ಕೋವಿಡ್ ಸಂಧರ್ಭ ಜನಪರ ಸೇವೆ ನಿರ್ವಹಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲೂ ಕೂಡ ಸದಾ ಮುಂದಾಗಿದ್ದು ಕುವೈಟ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ರಾಂಚ್ ಮಾನೇಜರ್ ಅಬ್ದುಲ್ ರಜಾಕ್, ಕಂಟ್ರಿ ಹೆಡ್ ಅಶ್ರಫ್ ಅಯ್ಯೂರ್, ಕಾರ್ಪೊರೇಟ್ ಮಾರ್ಕೆಟಿಂಗ್ ಕಾರ್ಡಿನೇಟರ್ ಪ್ರೀಮಾ ಪಿರೇರಾ, ಕಾರ್ಪೊರೇಟ್ ಮಾಸ್ ಮಾರ್ಕೆಟಿಂಗ್ ಕಾರ್ಡಿನೇಟರ್ ರಿಫೈ,

ಇನ್ಸುರೆನ್ಸ್ ಕಾರ್ಡಿನೇಟರ್ ತಾಸಿರ್, ಮಾರ್ಕೆಟಿಂಗ್ ಎಕ್ಸ್ ಕೂಟಿವ್ ರೆಹಜನ್ ಮತ್ತಿತ್ತರರು ಈ ಸಂಧರ್ಭ ಉಪಸ್ಥಿತರಿದ್ದರು.

LATEST NEWS

ಸೈರನ್‌ನಂತೆ ಸೌಂಡ್ ಮಾಡ್ತದೆ ಈ ಪಕ್ಷಿ

Published

on

ಯುಕೆ: ಕೆಲ ಪಕ್ಷಿಗಳ ಕೂಗು ಕೇಳಿದರೆ ಕೇಳಿಸುತ್ತಲೇ ಇರಬೇಕು ಅನ್ನಿಸುತ್ತದೆ. ಅದರಲ್ಲೂ ಕೋಗಿಲೆಯ ಕೂಗನ್ನು ಸಂಗೀತದ ಕಂಠಕ್ಕೆ ಹೋಲಿಸುತ್ತಾರೆ. ಕೆಲ ಪಕ್ಷಿಗಳು ನಾವು ಮಾತಾಡಿದಂತೆಯೇ ಮತ್ತೆ ಮಾತಾಡುತ್ತದೆ. ಇನ್ನು ಕೆಲವು ಗಿಣಿಶಾಸ್ತ್ರ ಹೇಳುತ್ತದೆ. ಹೀಗೆ ಬಗೆಬಗೆಯ ಪಕ್ಷಿಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅದೇ ರೀತಿ ಇಲ್ಲೊಂದು ಪಕ್ಷಿ ಪೊಲೀಸ್ ವಾಹನದಂತೆ ಸೌಂಡ್ ಮಾಡ್ತದೆ. ಜನರು ಪೊಲೀಸ್ ಗಾಡಿಯ ಸೈರನ್ ಕೇಳುತ್ತಿದ್ದಂತೆ ಅಲ್ಲಿಂದ ಜಾಗ ಕಾಲಿ ಮಾಡುತ್ತಾರೆ.

ಆದರೆ ಇಲ್ಲೊಂದು ಸೈರನ್ ಸೌಂಡ್ ಪೊಲೀಸರನ್ನೇ ಕನ್ಫ್ಯೂಸ್ ಮಾಡಿದೆ. ಇದು ಪೊಲೀಸ್ ವಾಹನದ ಸೌಂಡ್ ಅಲ್ಲ. ಬದಲಾಗಿ ಹಕ್ಕಿಯೊಂದರ ಕೂಗು.
ಯುನೈಟೆಡ್ ಕಿಂಗ್ ಡಮ್ ನ ಥೇಮ್ಸ್ ವ್ಯಾಲಿ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲಿ ಸೈರನ್ ಸೌಂಡ್ ರೀತಿಯಲ್ಲಿ ಕೂಗುವ ಹಕ್ಕಿಯೊಂದು ಕಾಣಿಸಿಕೊಂಡಿದೆ. ಈ ಹಕ್ಕಿಯ ಕೂಗು ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ.

ಬಿಸೇಸ್ಟರ್ ಪೊಲೀಸ್ ಸ್ಟೇಷನ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಹಕ್ಕಿ ಸೈರನ್ ನಿಂದ ಕೆಲಕಾಲ ಗೊಂದಲಕ್ಕೀಡಾದ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಪೊಲೀಸ್ ಸೈರನ್ ರೀತಿಯಲ್ಲಿ ಕೂಗುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದೊಂದು ವಿಶೇಷ ಹಕ್ಕಿ:

ಮರದ ಮೇಲೆ ಪುಟ್ಟದಾದ ಕಪ್ಪು ಹಕ್ಕಿಯೊಂದು ಕುಳಿತು ಸೈರನ್‌ನಂತೆ ಕೂಗಿದೆ. ಇದೊಂದು ವಿಶೇಷ ರೀತಿಯ ಪಕ್ಷಿಯಾಗಿದ್ದು, ಸಣ್ಣ ಬಾಲ, ತ್ರಿಕೋನಾಕಾರದ ರೆಕ್ಕೆಗಳು ಇದೆ. ಇಂತಹ ಪಕ್ಷಿಗಳು ಚಳಿಗಾಲದಲ್ಲಿ ಬಿಳಿಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ. ಬೇಸಿಗೆಗಾಲದಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Continue Reading

DAKSHINA KANNADA

ಯುದ್ಧಕ್ಕೆ ಸನ್ನದ್ಧರಾಗಲು ಸರ್ವಾಧಿಕಾರಿಯ ಕರೆ..! ಹೆಚ್ಚಿದ ಜಾಗತಿಕ ಯುದ್ಧದ ಭೀತಿ..!

Published

on

ಮಂಗಳೂರು (North Korea ) : ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ (King Jong Un ) ಯುದ್ಧಕ್ಕೆ ಸನ್ನದ್ಧರಾಗ್ತಾ ಇದ್ದಾರಾ ? ಇಂತಹ ಒಂದು ಆಘಾತಕಾರಿ ವಿಚಾರವನ್ನು ಕೆಸಿಎನ್‌ಎ(KCNA) ಸುದ್ದಿ ಸಂಸ್ಥೆ ಪ್ರಕಟಿಸಿದೆ. ಉತ್ತರ ಕೊರಿಯಾದ ಪ್ರಮುಖ ಮಿಲಿಟರಿ ವಿವಿಯನ್ನು ಪರಿಶೀಲಿಸಿದ ಕಿಮ್‌ ಜಾಂಗ್ ಉನ್‌ “ತನ್ನ ದೇಶದ ಸುತ್ತಲಿನ ಅಸ್ಥಿರ ಭಗೋಳಿಕ ಹಾಗೂ ರಾಜಕೀಯ ಪರಿಸ್ಥಿತಿಗಳು ಎಂದಿಗಿಂತಲೂ ಹೆಚ್ಚು ಯುದ್ಧಕ್ಕೆ ಸಿದ್ಧರಾಗುವ ಸಮಯ” ಎಂದು ಹೇಳಿದ್ದಾಗಿ ವರದಿ ಮಾಡಿದೆ.

kim jong un

ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಕಿಮ್ ಜಾಂಗ್ ಉನ್ ಮಿಲಿಟರಿ ವಿವಿ ಭೇಟಿಯ  ಚಿತ್ರ

ಉತ್ತರ ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ತನ್ನ ಶಸ್ತ್ರಾಸ್ತ್ರಗಳ ಅಭಿವೃದ್ದಿಯನ್ನು ಹೆಚ್ಚಿಸಿದ್ದು, ರಷ್ಯಾದೊಂದಿಗೆ ನಿಕಟ ಮಿಲಿಟರಿ ಮತ್ತು ರಾಜಕೀಯ ಸಂಬಂಧ ಬೆಳೆಸಿಕೊಂಡಿದೆ. ಉಕ್ರೇನ್ ಯದ್ಧದಲ್ಲಿ ಗುಟ್ಟಾಗಿ ಸಹಾಯ ಮಾಡಿದೆ ಅನ್ನೋ ಆರೋಪ ಕೂಡಾ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಅಕ್ಕ ಪಕ್ಕದ ರಾಷ್ಟ್ರಗಳು ಜಂಟಿಯಾಗಿ ಮಿಲಿಟರಿ ಕಸರತ್ತುಗಳನ್ನು ನಡೆಸಿದೆ. ಯುದ್ಧ ಕುಶಲತೆ ಹೆಸರಿನಲ್ಲಿ ಅಮೇರಿಕಾ , ದಕ್ಷಿಣ ಕೊರಿಯಾ ದೇಶಗಳು ಉತ್ತರ ಕೊರಿಯಾವನ್ನು ಪ್ರಚೋದಿಸುತ್ತಿದೆ ಎಂದು ಕಿಮ್ ಜಾಂಗ್ ಉನ್‌ ಆರೋಪಿಸಿದ್ದಾರೆ.
ಶತ್ರುಗಳು ಡಿಪಿಆರ್‌ಕೆ ( ದೆಮಾಕ್ರಟಿಕ್ ಪಿಪಲ್ಸ್ ರಿಪಬ್ಲಿಕ್ ಆಫ್‌ ಕೊರಿಯಾ)ದ ವಿರುದ್ಧ ಮುಖಾಮುಖಿಯಾದರೆ ಮಾರಣಾಂತಿಕ ಹೊಡೆತ ನೀಡುವುದಾಗಿ ಕಿಮ್ ಹೇಳಿದ್ದಾರೆ.

kim jong un photo

                                                      ಫೈಲ್ ಫೋಟೋ

ಈ ತಿಂಗಳ ಆರಂಭದಲ್ಲಿ ಘನ ಇಂಧನ ಬಳಸಿದ ಹೊಸ ಹೈಪರ್ಸಾನಿಕ್ ಮಧ್ಯಂತರ ಕ್ಷಿಪಣಿಯನ್ನು ಉತ್ತರ ಕೊರಿಯ ಅಭಿವೃದ್ದಿ ಪಡಿಸಿದೆ. ಇದು ದ್ರವ ಇಂಧನದ ಬದಲಾಗಿ ಘನ ಇಂಧನವನ್ನು ಬಳಿಸಿಕೊಂಡು ಆವಿಷ್ಕರಿಸಲಾಗಿದೆ. ಇದು ಅತೀ ಹೆಚ್ಚು ದೂರವನ್ನು ಕ್ರಮಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಹೀಗಾಗಿ ಕಿಮ್ ಜಾಂಗ್ ಉನ್ ಅವರ ಯುದ್ಧಾಸಕ್ತಿಯ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಗಾಗಿದೆ. ಯುದ್ಧ ದಾಹಿಯಾಗಿರುವ ಕಿಂಗ್ ಜಾಂಗ್ ಉನ್‌ ನೆರೆಯ ರಾಷ್ಟಗಳ ಜೊತೆ ಯುದ್ಧ ಘೋಷಣೆ ಮಾಡ್ತಾರಾ? ಇಲ್ಲಾ ಅಮೇರಿಕಾ ಅಥವಾ ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾರಾ ಅನ್ನೋದು ಚರ್ಚೆ ಆಗುತ್ತಿದೆ.

Continue Reading

LATEST NEWS

ಬೆಕ್ಕಿನಂತಿದೆ ಈ ಮಗುವಿನ ಮುಖ…! ಮಗು ಹೀಗಾಗಲು ಕಾರಣವೇನು ಗೊತ್ತಾ ?

Published

on

ಮಂಗಳೂರು ( ಫಿಲಿಪ್ಪೀನ್ಸ್ ) : ಮನುಷ್ಯರ ದೇಹದ ಕೆಲ ಭಾಗಗಳಲ್ಲಿ ಕೂದಲು ಇರುವುದು ಸಹಜ. ಆದ್ರೆ ಇಲ್ಲೊಂದು ಮಗುವಿನ ದೇಹ ಹಾಗೂ ಮುಖದ ಭಾಗದಲ್ಲೆಲ್ಲ ದಟ್ಟವಾಗಿ ಕೂದಲು ಬೆಳೆದಿದೆ. ಇದಕ್ಕೆ ಕಾರಣ ನಾನು ಗರ್ಭಾವಸ್ಥೆಯಲ್ಲಿ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಹಾಗಾಗಿ ನನ್ನ ಮಗು ಈ ಪರಿಸ್ಥಿತಿಗೆ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು ಇಲ್ಲಿನ ಜರೆನ್ ಎಂಬ 2 ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನಬೇಕು ಎನ್ನುವ ಆಸೆ ಇತ್ತಂತೆ. ಹಾಗಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡುಬೆಕ್ಕಿನ ಮಾಂಸವನ್ನು ತಂದು ಅದರಿಂದ ಖಾದ್ಯ ಮಾಡಿ ತಿಂದಿದ್ದರು. ಕಾಡು ಬೆಕ್ಕಿನ ಶಾಪ ನನ್ನ ಮಗನಿಗೆ ತಟ್ಟಿದೆ ಹೀಗಾಗಿ ಮಗನ ಮೈಯೆಲ್ಲಾ ಕೂದಲುಗಳಿವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : WATCH VIDEO : ಬೆಕ್ಕಿನ ಮರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಪರದಾಡಿದ ನಾಗರಹಾವು; ಆಮೇಲೇನಾಯ್ತು?

ವೈದ್ಯರು ಏನಂತಾರೆ?

ತಾಯಿಯೇನೋ ತಾನು ಗರ್ಭಿಣಿಯಾಗಿದ್ದಾಗ ಬೆಕ್ಕಿನ ಮಾಂಸ ತಿಂದಿದ್ದು ಇದಕ್ಕೆ ಕಾರಣ ಅಂತಿದ್ದಾರೆ. ಆದರೆ, ವೈದ್ಯರು ಕೊಟ್ಟಿರುವ ಕಾರಣಾನೇ ಬೇರೆ. ಅವರ ಪ್ರಕಾರ, ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಅಲ್ಲದೇ ಈ ಕಾಯಿಲೆಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿದೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ.

ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.

Continue Reading

LATEST NEWS

Trending