ವಿಜಯವಾಡ: ಕರೊನಾ 3ನೇ ಅಲೆಯ ಭೀತಿಯ ಕಾರಣಕ್ಕೆ ಆಂಧ್ರಪ್ರದೇಶದಲ್ಲಿ ಕೇವಲ 13 ದಿನದಲ್ಲಿ 50 ಸಾವಿರ ಜೋಡಿಗಳು ಮದುವೆಯಾಗಿವೆ.
3ನೇ ಅಲೆ ಬರುವ ಮುನ್ನವೇ ಮಕ್ಕಳ ಮದುವೆ ಮಾಡಲು ಆಂಧ್ರದಲ್ಲಿ ಸಾವಿರಾರು ಪೋಷಕರು ಆತುರರಾಗಿದ್ದಾರೆ.
ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ದೇಶಕ್ಕೆ 3ನೇ ಬರಬಹುದು ಎಂದು ತಜ್ಞರು ಹೇಳೀರುವ ಜತೆಗೆ, ಶ್ರಾವಣ ಮಾಸದಲ್ಲಿ ಉತ್ತಮ ಮುಹೂರ್ತದ ದಿನಗಳು ಕಡಿಮೆ ಇರುವುದು ಇನ್ನೊಂದೆಡೆ.
ಆಗಸ್ಟ್ನಲ್ಲಿ 13 ದಿನ ಮಾತ್ರವೇ ಮದುವೆಗೆ ಮುಹೂರ್ತವಿದ್ದು, ಸೆ.1ರಂದು ಮಾತ್ರವೇ ಉತ್ತಮ ಮುಹೂರ್ತವಿದೆ. ಇದಾದ ಮೇಲೆ ಕರೊನಾ 3ನೇ ಅಲೆ ಅಪ್ಪಳಿಸಿದರೆ ಕಥೆ ವ್ಯರ್ಥ ಎಂದು ಮದುವೆಯಾಗಿದ್ದವರು.
ಇದರಲ್ಲಿ ಕರೊನಾ 2ನೇ ಅಲೆಯಲ್ಲಿ ಮದುವೆ ಮಾಡಲಾಗದೆ ಮುಂದೂಡಿದವರು, ಲಾಕ್ಡೌನ್ ಇತ್ಯಾದಿ ಕಾರಣಗಳಿಂದ ಮದುವೆ ಮುಂದೂಡಿದವರು ಮದುವೆ ಮಾಡಿ ಮುಗಿಸಿದ್ದಾರೆ. ಸದ್ಯ ಆಂಧ್ರದಲ್ಲಿ ಮದುವೆ ಸಮಾರಂಭಕ್ಕೆ 150 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.