Connect with us

    LATEST NEWS

    ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    Published

    on

    ಲಕ್ನೋ: ಅಯೋಧ್ಯೆ ರಾಮಮಂದಿರದ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ 1 ವರ್ಷ ತುಂಬಿದ ಹಿನ್ನೆಲೆ ಅಯೋಧ್ಯೆಯಲ್ಲಿ 3 ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

    ಮೊದಲ ವಾರ್ಷಿಕೋತ್ಸವದ ಹಿನ್ನೆಲೆ ರಾಮಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂಗಳನ್ನ ಬಳಸಲಾಗಿದೆ. ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಎಲ್ಲೆಡೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.


    ದಿನಕ್ಕೆ 2 ಬಾರಿ ಅಗ್ನಿಹೋತ್ರ ಮಂತ್ರ ಪಠಣ:

    ಇಂದಿನಿಂದ ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇದರ ಭಾಗವಾಗಿ ಶುಕ್ಲ ಯಜುರ್ವೇದದಿಂದ ಅಗ್ನಿಹೋತ್ರ ಮಂತ್ರಪಠಣ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ 11 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಮಂತ್ರ ಪಠಣ ಮಾಡಲಾಗುತ್ತದೆ. ಇದರೊಂದಿಗೆ ಲಕ್ಷ ರಾಮ ರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಹಾಗೂ 6 ಲಕ್ಷ ಶ್ರೀ ರಾಮ ಮಂತ್ರದ ಪಠಣ ಮಾಡಲಾಗುತ್ತದೆ. ಮಂದಿರದ ನೆಲಮಾಳಿಗೆಯಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ರಾಗ ಸೇವೆ, ಸಂಜೆ 6 ಗಂಟೆಗೆ ಅಭಿನಂದನಾ ಗೀತ ಸೇವೆ ಶ್ರೀರಾಮನಿಗೆ ಅರ್ಪಣೆಯಾಗಲಿದೆ. ಮೊದಲ ಮಹಡಿಯಲ್ಲಿ ಸಂಗೀತ ಮಾನಸ ಪಠಣ ನಡೆಯಲಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಎನ್ಕೌಂಟರ್, ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಂಶಯವಿದೆ : ಅಣ್ಣಾಮಲೈ

    Published

    on

    ಉಡುಪಿ : ಎನ್ ಕೌಂ*ಟರ್ ನಲ್ಲಿ ಆರಂಭಗೊಂಡು ಬಳಿಕ ನಡೆದ ನ*ಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಅನುಮಾನ ಮೂಡುತ್ತಿದೆ. ಸಿಎಂ ಮುಂದೆ ನಕ್ಸಲರ ಶರಣಾಗತಿ ಮಾಡುವ ಅಗತ್ಯವಿರಲಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.

    ಆರು ಮಂದಿ ನ*ಕ್ಸಲರ ಶರಣಾಗತಿ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ‌ ಇಂದು(ಡಿ.11) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿ, ಎಸ್‌ಪಿ ಅವರ ಸಮ್ಮುಖದಲ್ಲಿ ಕೆಲವು ಪ್ರಕ್ರಿಯೆಗಳ ಮೂಲಕ ಶರಣಾಗತಿ ನಡೆಸಬೇಕಿತ್ತು. ಮೊದಲು ನಕ್ಸ*ಲರು ಶರಣಾಗತಿಯಾಗಿ, ಬಳಿಕ ಕೋರ್ಟ್‌ಗೆ ಹೋಗಬೇಕು. ಅವರ ಮೇಲಿರುವ ಎಫ್ ಐಆರ್ ಗಳನ್ನು ಪರಿಶೀಲನೆ ನಡೆಸಬೇಕು. ಹೀಗೆ ಕೆಲವೊಂದು ಕಾರ್ಯವಿಧಾನಗಳಿವೆ. ಆದರೆ ಅದ್ಯಾವುದನ್ನು ಇಲ್ಲಿ ಪಾಲಿಸಿಲ್ಲ.

    ಇಲ್ಲಿ ಸರಕಾರ ಬಹಳ ಸುಲಭ ವಿಧಾನದ ಮೂಲಕ ಶರಣಾಗತಿ ನಡೆಸಿದೆ. ನ*ಕ್ಸಲರನ್ನು ಶರಣಾಗತಿ ಮಾಡಿಸಿರುವ ಪ್ರಕ್ರಿಯೆಯ ಬಗ್ಗೆ ಹಲವು ಸಂಶಯಗಳು ಮೂಡುತ್ತಿವೆ ಎಂದರು.

    ಇದನ್ನೂ ಓದಿ : ಕರ್ನಾಟಕ ಇನ್ನೂ ನಕ್ಸಲ್ ಮುಕ್ತ ರಾಜ್ಯವಾಗಿಲ್ಲ; ಹಾಗಾದರೆ ಉಳಿದಿರುವ ಆ ಮೋಸ್ಟ್ ವಾಂಟೆಡ್ ನಕ್ಸಲ್ ಯಾರು ?

    Continue Reading

    LATEST NEWS

    ಇದು ಜಗತ್ತಿನ ಅತ್ಯಂತ ಸುರಕ್ಷಿತ ಬಿಲ್ಡಿಂಗ್

    Published

    on

    ಇತ್ತೀಚಿನ ದಿನಗಳಲ್ಲಿ ನಾವು ಎಷ್ಟೇ ಸುರಕ್ಷಿತವಾಗಿದ್ದರೂ ಅದು ಸಾಕಾಗುವುದಿಲ್ಲ. ಶತ್ರುಗಳ ದಾಳಿ ಯಾವಾಗ ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಆಗಬಹುದು. ಆದರೆ  ಈ ಒಂದು ಬಿಲ್ಡಿಂಗ್‌ ಸುರಕ್ಷತೆಯಲ್ಲಿ ಜಗತ್ತನ್ನೇ ಮೀರಿಸಿದೆ. ಯಾಕೆಂದರೆ ಈ ಬಿಲ್ಡಿಂಗ್‌ ಹೊಕ್ಕಲು ಯಾರಿಗೂ ಅಷ್ಟು ಸಾಧ್ಯವಿಲ್ಲದ ಸಂಗತಿ. ಇದರಲ್ಲಿರುವ ಹೈ ಸೆಕ್ಯೂರಿಟಿಯಿಂದಾಗಿ ಶತ್ರುಗಳಿಗೆ ಏನು ಮಾಡಲು ಅಸಾಧ್ಯ. ಹಾಗಾದರೆ ಅದು ಯಾವ ಬಿಲ್ಡಿಂಗ್ ? ಎಲ್ಲಿದೆ ಎಂಬುದನ್ನು ನೋಡೋಣ ಬನ್ನಿ.

    ಅಮೇರಿಕ ಅಧ್ಯಕ್ಷರ ವೈಟ್ ಹೌಸ್ ಪ್ರಪಂಚದ ಅತ್ಯಂತ ಸುರಕ್ಷಿತ ಕಟ್ಟಡ. ಇಲ್ಲಿರುವ ಸೆಕ್ಯೂರಿಟಿ ನೋಡಿದರೆ ನಿಮಗೂ ಶಾಕ್ ಆಗಬಹುದು. ಈ ಬಿಲ್ಡಿಂಗ್‌ನ ನಾಲ್ಕು ಸುತ್ತಲೂ 13 ಫೀಟ್ ಎತ್ತರದ ಸ್ಟೀಲ್‌ನ ಗೇಟ್‌ಗಳಿವೆ. ಇದರಲ್ಲಿ ಸ್ಪೇಷಲ್ ಫ್ರೇಜರ್ ಸೆನ್ಸರ್‌ಗಳನ್ನ ಅಳವಡಿಸಲಾಗಿದೆ. ಇದನ್ನು ಯಾರಾದರೂ ಹತ್ತುವ ಪ್ರಯತ್ನ ಪಟ್ಟರೆ ಸೆಕ್ಯೂರಿಟಿ ಅಲರಾಂ ಅಲರ್ಟ್‌ ಆಗುತ್ತದೆ.

    ಇನ್ನು ಇದರ ಸುತ್ತಲೂ ಇನ್ಫ್ರಾರೆಡ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಚಲಿಸುವ ವ್ಯಕ್ತಿಗಳ ಹೀಟರ್‌ಗಳನ್ನ ಮೇಜರ್ ಮಾಡುತ್ತದೆ. ಯಾವೂದೇ ರೀತಿಯ ಅಪಾಯ ಬಂದರೂ ಸೆಕ್ಯೂರಿಟಿ ಟೀಮ್‌ಗಳಿಗೆ ಅಲರ್ಟ್‌ ಕೊಡುತ್ತದೆ. ಈ ವೈಟ್ ಹೌಸ್‌ನ ಏರಿಯಾ ನೋ ಫೈಝೋನ್. ಅಂದರೆ ಒಂದು ವೇಳೆ ಶತ್ರುಗಳು ಉಪದ್ರ ಕೊಡಲು ಬಂದರೆ Surface to air machine system ಇದೆ. ಇದು ಮೊದಲೇ ಪತ್ತೇ ಮಾಡಿ ನಾಶ ಮಾಡುತ್ತದೆ.

    ವೈಟ್‌ ಹೌಸ್‌ನ ಒಳಗಡೆ ಮಲ್ಟಿ ಲೇವಲ್ ಬಂಕರ್ ಕೂಡ ಇದೆ. ಇದು ಅಮೇರಿಕ ಅಧ್ಯಕ್ಷರನ್ನ ನ್ಯೂಕ್ಲಿಯರ್ ಅಟ್ಯಾಕ್ ಮತ್ತು ಕೆಮಿಕಲ್ ಅಟ್ಯಾಕ್ ನಿಂದ ಸುರಕ್ಷಿತ ಮಾಡುತ್ತದೆ. ಇನ್ನು ಈ ಕಟ್ಟಡದ ಕಿಟಕಿಗಳೆಲ್ಲಾ ಬುಲೆಟ್ ಫ್ರೂಫ್, 24×7 ವೇ ಯಲ್ಲಿ ಎಐ ಕ್ಯಾಮಾರಗಳು, ಅಷ್ಟೇ ಅಲ್ಲದೇ ನುರಿತ ಶ್ವಾನಗಳು ಕೂಡ ಇಲ್ಲಿ ಇದೆ.

    Continue Reading

    DAKSHINA KANNADA

    ಪುತ್ತೂರು : ಖತರ್ನಾಕ್ ಮನೆಗಳ್ಳ ಅರೆಸ್ಟ್; ತನಿಖೆ ವೇಳೆ ಬಹಿರಂಗವಾಯ್ತು ಹಲವು ಪ್ರಕರಣ

    Published

    on

    ಪುತ್ತೂರು : ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಸೂರಜ್ ಕೆ(36) ಬಂಧಿತ ಕಳ್ಳ.  ಡಿಸೆಂಬರ್ 20 ರಂದು ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲು ಮುರಿದು ಆರೋಪಿ ಸೂರಜ್ ಚಿನ್ನಾಭರಣಗಳನ್ನು ಕದ್ದಿದ್ದ. ಇದೇ ರೀತಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿತ್ತು.

    ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ.  ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಆರೋಪಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ : ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?

    ಆರೋಪಿಯಿಂದ 18,00000 ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3,00,000 ರೂ. ಮೌಲ್ಯದ ಕಾರು ಸೇರಿ ಒಟ್ಟು 21,00,000 ರೂ.ನ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

     

     

     

    Continue Reading

    LATEST NEWS

    Trending