ಬೆಳ್ತಂಗಡಿ: 2024 ನೇ ಸಂಸತ್ ಚುನಾವಣೆಯ ನಂತರ 50 ರಾಜ್ಯ ಮಾಡುವ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ. ಅದರ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ 2.50 ಕೋಟಿಯಷ್ಟು ಇದ್ದ ಜನಸಂಖ್ಯೆ 6.50 ಕೋಟಿ ಆಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಎರಡು ರಾಜ್ಯ, ಉತ್ತರಪ್ರದೇಶ 4 ರಾಜ್ಯ, ಮಹಾರಾಷ್ಟ್ರ 3 ರಾಜ್ಯ ವಿಂಗಡನೆಯಂತೆ ದೇಶದಲ್ಲಿ ಒಟ್ಟು 50 ರಾಜ್ಯ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ.
ಈ ಚಿಂತನೆ ಒಳ್ಳೆಯದು. ಆ ಭಾಗದ ಅಭಿವೃದ್ಧಿಯಾಗಬೇಕು. ರಾಜ್ಯ ವಿಂಗಡನೆಯಾದರೆ ತಪ್ಪಿಲ್ಲ. ಯಾವಾಗ ಯಾವಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ.
ಆಗಾಗ ನಾನು ಉತ್ತರ ಕರ್ನಾಟಕ ಪರ ಧ್ವನಿ ಎತ್ತಿದ್ದೇನೆ. ಮುಂದೆಯೂ ಎತ್ತುತ್ತೇನೆ ಎಂದರು.