Home ಕರ್ನಾಟಕ ವಾರ್ತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 25 ಡಿವೈಎಸ್ಪಿ, 24 ಇನ್ಸ್ ಪೆಕ್ಟರ್ ಗಳ ಎತ್ತಂಗಡಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 25 ಡಿವೈಎಸ್ಪಿ, 24 ಇನ್ಸ್ ಪೆಕ್ಟರ್ ಗಳ ಎತ್ತಂಗಡಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 25 ಡಿವೈಎಸ್ಪಿ, 24 ಇನ್ಸ್ ಪೆಕ್ಟರ್ ಗಳ ಎತ್ತಂಗಡಿ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲಾಗಿದೆ, 25 ಡಿವೈಎಸ್ಪಿ ಹಾಗೂ 24 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣದತ್ತಲೇ ಹೆಚ್ಚು ಗಮನಹರಿಸಿದ್ದ ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಯಾವುದೇ ಮಹತ್ತರವಾದ ಬದಲಾವಣೆಗಳನ್ನು ಕಳೆದ 2 ತಿಂಗಳಿಂದ ಮಾಡಿರಲಿಲ್ಲ.

ಎಸಿಪಿ ವೆಂಕಟೇಶ ಪ್ರಸನ್ನ, ಲಕ್ಷ್ಮೀ ನಾರಾಯಣ ಸೇರಿದಂತೆ 25 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹಾಗೆ ರಾಜ್ಯದ ವಿವಿಧೆಡೆಗೆ 24 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ನಿನ್ನೆ ಸಂಜೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ವಿವಿಐಪಿ ಭದ್ರತಾ ವಿಭಾಗದಿಂದ ವೆಂಕಟೇಶ್ ಪ್ರಸನ್ನ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಲಾಗಿದೆ.

ಇವರು ರವಿ ಪೂಜಾರಿ ಸಂಪರ್ಕ ಆರೋಪದಲ್ಲಿ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಸದ್ಯ ಇವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

- Advertisment -

RECENT NEWS

ಕೊರೊನಾ ವಾರಿಯರ್ಸ್ ಗೆ ಸಂಬಳ ನೀಡದೇ ಸತಾಯಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಖಾದರ್ ಆಕ್ರೋಶ

ಕೊರೊನಾ ವಾರಿಯರ್ಸ್ ಗೆ ಸಂಬಳ ನೀಡದೇ ಸತಾಯಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಖಾದರ್ ಆಕ್ರೋಶ ಮಂಗಳೂರು: ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್ ಗೆ ರಾಜ್ಯ ಸರಕಾರ ಕಳೆದ ಎರಡು ತಿಂಗಳಿನಿಂದ ಸಂಬಳ ನೀಡದೆ ಸತಾಯಿಸುತ್ತಿದೆ. ರಾಜ್ಯ...

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ ಮಂಗಳೂರು: ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ನೇತೃತ್ವದ ವಿಚಾರಣಾ...

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆ.ಎಸ್ಆರ್ ಟಿಸಿ ಬಸ್

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್ ಉಡುಪಿ: ಕೆಎಸ್ ಆರ್ ಟಿ ಸಿ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ...

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ: ಇಂದು ಪ್ರಪಂಚವೇ ಕೊರೊನಾ ಎಂಬ ಮಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ...