Connect with us

    ದೇರೆಬೈಲ್ ಪಶ್ಚಿಮ ವಾರ್ಡಿನ ಅಭಿವೃದ್ಧಿಗೆ 5 ಕೋಟಿ ಅನುದಾನ: ಶಾಸಕ ಕಾಮತ್

    Published

    on

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ಪಶ್ಚಿಮ ವಾರ್ಡ್ ನ ಸಮಗ್ರ ಅಭಿವೃದ್ಧಿಗೆ 5.15 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಕಳೆದ ಕೆಲ ಸಮಯದ ಹಿಂದೆ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಆಗಬೇಕಿರುವ ಕಾಮಗಾರಿಗಳ ಕುರಿತು ಮನವಿ ನೀಡಿದ್ದರು. ಹಾಗಾಗಿ ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಯೋಜನೆ ಹಾಕಲಾಗಿದೆ ಎಂದವರು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 111.50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೊಟ್ಟಾರ ಕಲ್ಬಾವಿ ರಸ್ತೆಯ ಸಾಗರ್ ಕೋರ್ಟಿನ ಮುಖ್ಯ ರಸ್ತೆಯ ಸುಂದರ್ ಗಾರ್ಡನ್ ವರೆಗಿನ ರಸ್ತೆ ಅಭಿವೃದ್ಧಿಗೆ 51 ಲಕ್ಷ, ಕೊಟ್ಟಾರ ಇನ್ಫೋಸಿಸ್ ಹಿಂದುಗಡೆ ರಸ್ತೆ ಕಾಂಕ್ರೀಟೀಕರಣಕ್ಕೆ 1.5 ಕೋಟಿ ಹಾಗೂ ತಂತ್ರಿಲೈನ್ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ 10:50 ಲಕ್ಷ ಒದಗಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

    ಮಳೆಹಾನಿ ಪರಿಹಾರ ನಿಧಿಯಿಂದ 25 ಲಕ್ಷ ಅನುದಾನ ಬಿಡುಗೊಳಿಸಿದ್ದು. ಅಬ್ಬಕ್ಕ ಬಡಾವಣೆಯ ಮಣ್ಣಿನ ರಸ್ತೆಗೆ ಡಾಮರೀಕರಣಕ್ಕೆ 5 ಲಕ್ಷ, ಸುಂಕದಕಟ್ಟೆ ಬಳಿ ತಡೆಗೋಡೆ ದುರಸ್ತಿ ಕಾಮಗಾರಿಗೆ 5 ಲಕ್ಷ, ದೇರೆಬೈಲ್ ಸುಂಕದಕಟ್ಟೆಯಲ್ಲಿ ತಡೆಗೋಡೆ ರಚನೆ ಕಾಮಗಾರಿಗೆ 5 ಲಕ್ಷ, ಕಲ್ಲುರ್ಟಿ-ಪಂಜುರ್ಲಿ ದೈವಸ್ಥಾನ ಹೊರ ಭಾಗದ ತಡೆಗೋಡೆ ರಚನೆ ಕಾಮಗಾರಿಗೆ 5 ಲಕ್ಷ, ಅಬ್ಬಕ್ಕನಗರ ಬಳಿ ಚರಂಡಿ ದುರಸ್ತಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ಅನುದಾನ ಒದಗಿಸಲಾಗಿದೆ.

    ಇನ್ನು ಮುಖ್ಯಮಂತ್ರಿ ವಿಶೇಷ ಅನುದಾನದಡಿ 20.44 ಲಕ್ಷ ಮೀಸಲಿಡಲಾಗಿದೆ. ಅಶೋಕನಗರ ಹೊಯಿಗೆ ಬೈಲ್ ಬಳಿ ಚರಂಡಿಯ ಬದಿಗೋಡೆ ನಿರ್ಮಾಣ ಕಾಮಗಾರಿಗೆ 11.35 ಲಕ್ಷ, ಸುಂಕದಕಟ್ಟೆಯ ಬಳಿ ತಡೆಗೋಡೆ ರಚನೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 9.09 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದರು.

    ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಅನುದಾನದಲ್ಲಿ 28.55 ಲಕ್ಷ ಅನುದಾನ ಜೋಡಿಸಲಾಗಿದ್ದು, ಅದರಲ್ಲಿ ಸುಂಕದಕಟ್ಟೆಯಲ್ಲಿ 2 ಕಡೆಗಳಲ್ಲಿ ತಡೆಗೋಡೆ ರಚನೆ ಕಾಮಗಾರಿಗಳಿಗೆ 10 ಲಕ್ಷ, ಸುಂಕದಕಟ್ಟೆಯ ಕಲ್ಲುರ್ಟಿ ದೈವಸ್ಥಾನ ರಸ್ತೆಯ ಬಳಿ ಕುಸಿದ ರಸ್ತೆ ಹಾಗೂ ತಡೆಗೋಡೆ ರಚನೆ ಕಾಮಗಾರಿ 4.60 ಲಕ್ಷ, ಕೊಟ್ಟಾರ ಕಲ್ಬಾವಿ ಅಡ್ಡರಸ್ತೆಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 6.80 ಲಕ್ಷ, ಕಲ್ಬಾವಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 7.15 ಲಕ್ಷ ಅನುದಾನ ಒದಗಿಸಲಾಗಿದೆ‌ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

    ಜೊತೆಗೆ ಪರಿಶಿಷ್ಟ ಜಾತಿ ಪಂಗಡ ನಿಧಿಯಿಂದ 20.45 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಸುಂಕದಕಟ್ಟೆ ಕಾಲೋನಿ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಗೋಕುಲ ಡೈರಿ ಬಳಿಯ ಚರಂಡಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ 4 ಲಕ್ಷ, ಉರ್ವಸ್ಟೋರ್ ನ ಸುಂಕದಕಟ್ಟೆಯ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿಗೆ 7.45 ಲಕ್ಷ, ಜಮುನ ಕಾಂಪೌಂಡ್ ಬಳಿ ರಸ್ತೆ ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ 4 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ.

    ಕೇಂದ್ರ ಸರಕಾರದ 14ನೇ ಹಣಕಾಸು ವ್ಯವಸ್ಥೆಯ ಅನುದಾನದಲ್ಲಿ 9.17 ಲಕ್ಷ ಬಿಡುಗಡೆಯಾಗಿದ್ದು ಅಶೋಕನಗರ ಹೊಯಿಗೆ ಬೈಲ್ ರಸ್ತೆಯ ಗುರುಂಪೆ ಪರಿಸರದಲ್ಲಿ ರಸ್ತೆ ಅಭಿವೃಧ್ಧಿ ಕಾಮಗಾರಿಗೆ ಅದನ್ನು ವಿನಿಯೋಗಿಸಲಾಗುವುದು ಎಂದಿದ್ದಾರೆ.

    ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ 2 ಕೋಟಿ ಬಿಡುಗಡೆಗೊಳಿಸಲಾಗಿದ್ದು, ಸುಂಕದಕಟ್ಟೆ ಕಾಲೋನಿ ಅಭಿವೃದ್ಧಿಗೆ 1 ಕೋಟಿ ಹಾಗೂ ಅಶೋಕನಗರ ಅಸೋಕ ವಿದ್ಯಾಲಯ ಎದುರಿನಿಂದ ಉರ್ವ ವರೆಗೆ ಮುಖ್ಯರಸ್ತೆ ಅಭಿವೃದ್ಧಿಗೆ 1 ಕೋಟಿ ನೀಡಲಾಗಿದೆ. ದೇರೆಬೈಲ್ ಪಶ್ಚಿಮ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಈ ಎಲ್ಲಾ ಅನುದಾನಗಳನ್ನು ಜೋಡಿಸಲಾಗಿದೆ. ಮುಂದಿನ ಅವಧಿಯ ಒಳಗಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    kerala

    ಶಬರಿಮಲೆ ಯಾತ್ರಿಕರ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ

    Published

    on

    ಮಂಗಳೂರು/ಶಬರಿಮಲೆ: ಕಾಲ್ನಡಿಗೆಯಲ್ಲಿ ಅರ್ಣ್ಯ ಮಾರ್ಗವಾಗಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ನೀಡಲಗಿದ್ದ ವಿಶೇಷ ಪಾಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿ (TDB) ಪ್ರಕಟಿಸಿದೆ.

    ದೇವಸ್ವಂ ಮಂಡಳಿ ಸದಸ್ಯ ಎ.ಅಜಿಕುಮಾರ್ “ವರ್ಚುವಲ್ ಸರತಿ ವ್ಯವಸ್ಥೆ ಮತ್ತು ಸ್ಪಾಟ್ ಬುಕ್ಕಿಂಗ್ ಮಾಡಿ ಪಂಪಾ ಮೂಲಕ ಆಗಮಿಸುವ ಭಕ್ತರು ದರ್ಶನಕ್ಕಾಗಿ ದೀರ್ಘಾವಧಿ ಕಾಯುವ ಸಮಯವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಅರಣ್ಯ ಮಾರ್ಗದಲ್ಲಿ ಸಂಚರಿಸುವ 5,000 ಭಕ್ತರಿಗೆ ವಿಶೇಷ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿತ್ತು.ಆದರೆ, ಅರಣ್ಯ ಮಾರ್ಗವಾಗಿ ಆಗಮಿಸುವ ಭಕ್ತರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪಾಸ್ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಮುಂದಿನ ಸೂಚನೆ ಬರುವವರೆಗೂ ವಿಶೇಷ ಪಾಸ್‌ಗಳನ್ನು ನೀಡದಿರಲು ಮಂಡಳಿ ನಿರ್ಧರಿಸಿದೆ .ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಪಾದಯಾತ್ರೆ ಮಾಡುವ ಯಾತ್ರಾರ್ಥಿಗಳಿಗೆ ವಿಶೇಷ ದರ್ಶನ ವ್ಯವಸ್ಥೆಗಳನ್ನು ಕಳೆದ ತಿಂಗಳು ಪರಿಚಯಿಸಲಾಗಿತ್ತು. ಅಂತಹ ಯಾತ್ರಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ವಿಶೇಷ ಟ್ಯಾಗ್‌ಗಳನ್ನು ನೀಡಲಾಗಿದ್ದು, ದರ್ಶನಕ್ಕೆ ಪ್ರತ್ಯೇಕ ಸರತಿ ಸಾಲು ಸೇರಿದಂತೆ ಸವಲತ್ತುಗಳನ್ನು ನೀಡಲಾಗುತ್ತಿತ್ತು.

    Continue Reading

    LATEST NEWS

    ನಿನ್ನೆ ಒಂದೇ ದಿನ 513 ಡ್ರಿಂಕ್ & ಡ್ರೈವ್ ಕೇಸ್‌ಗಳು ದಾಖಲು

    Published

    on

    ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಜನರು ಕ್ಯಾರೇ ಎನ್ನದೇ ಮದ್ಯ ಸೇವಿಸಿ ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

     

    ಹೌದು, ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 513 ಡ್ರಿಂಕ್ & ಡ್ರೈವ್ ದಾಖಲಾದರೆ, ಡಿಸೆಂಬರ್ 31ರ ರಾತ್ರಿ ಕೇವಲ 513 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

    ಹೊಸ ವರ್ಷ 2025 ರನ್ನು ರಾಜ್ಯದ ಜನರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಜನ ಜಂಗುಳಿ ನೆರೆದಿತ್ತು. ಇನ್ನೂ ಇಯರ್ ಎಂಡ್ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿತ್ತು, ಅಬಕಾರಿ ಇಲಾಖೆಗೆ ಭಾರೀ ಆದಾಯ ತಂದುಕೊಟ್ಟಿದೆ.

    Continue Reading

    BIG BOSS

    ಮೂರು ತಿಂಗಳು ದೂರ ಇದ್ದ ಅಕ್ಕನ ಗುರುತಿಸಲೇ ಇಲ್ಲ ತಮ್ಮ; ಮೋಕ್ಷಿತಾ ಕಣ್ಣೀರಿಗೆ ಕರುಳು ಕಿವುಚುತ್ತೆ

    Published

    on

    ಕಿಚ್ಚ ಸುದೀಪ್ ಅವರು ನಡೆಸಿ ಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತ ಯಶಸ್ವಿಯಾಗಿ ಸಾಗುತ್ತಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಮೋಕ್ಷಿತಾಗೆ ಬಿಗ್​ಬಾಸ್ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದಾರೆ. ಆದರೆ ತಮ್ಮನನ್ನು ನೋಡಿ ಅಕ್ಕ ಮೋಕ್ಷಿತಾ ಕಣ್ಣೀರು ಹಾಕಿರುವುದು ಎಲ್ಲರ ಕರುಳು ಚುರುಕ್ ಅನ್ನುತ್ತೆ.

    ಹೊಸ ವರ್ಷ ಬಿಗ್​ಬಾಸ್​ ಮನೆಯಲ್ಲೂ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದರು. ಮೋಕ್ಷಿತಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಿಗ್​ಬಾಸ್​ಗೆ ಬಂದ ಮೇಲೆ ಪ್ರೀತಿಯ ಸಹೋದರನ್ನು ಮರೆತು ಡ್ಯಾನ್ಸ್​ ಮಾಡುತ್ತಿದ್ದರು. ಆದರೆ ಈ ವೇಳೆ ನೋಡಿ ಫುಲ್ ಶಾಕ್ ಆಗಿರೋದು. ಬಿಗ್​ಬಾಸ್​ ಮನೆಗೆ ಕುಟುಂಬ ಬರುತ್ತಿದ್ದಂತೆ ತಮ್ಮನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಇಷ್ಟು ದಿನ ಬಿಟ್ಟು ಇದ್ದಿದ್ದೆ. ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೆ. ಪುಟಾಣಿ ಎಂದು ಕರೆದರೂ ವೀಲ್ ಚೇರ್ ಮೇಲಿದ್ದ ಸಹೋದರ, ಮೋಕ್ಷಿತಾರನ್ನ ಯಾರೆಂದು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಮರೆತು ಹೋಗಿದ್ದಾನೆ. ಇಷ್ಟು ದಿನ ಮನೆಯಲ್ಲಿ ಇರದಿದ್ದಕ್ಕೆ ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮೋಕ್ಷಿತಾ, ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮೋಕ್ಷಿತಾ ತಂದೆ, ತಾಯಿ ಕೂಡ ಕಣ್ಣೀರು ಹಾಕಿರುವುದು ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡುತ್ತದೆ.

    ಮೋಕ್ಷಿತಾ ತಮ್ಮನ ಪರಿಸ್ಥಿತಿಯನ್ನು ನೋಡಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಬೆರಗಾಗಿದ್ದರು. ಗೌತಮಿಯಂತೂ ದುಃಖಿಸಿರುವುದು ಎಲ್ಲರ ಮನ ಕದಡುವಂತೆ ಇತ್ತು. ಚೈತ್ರಾ, ಮಂಜು, ರಜತ್, ಹನುಮಂತು, ತ್ರಿವಿಕ್ರಮ್, ಧನರಾಜ್ ಎಲ್ಲರ ಮುಖದಲ್ಲಿನ ಭಾವ ಕೂಡ ಏನೋ ಹೇಳುವಂತೆ ಇತ್ತು.

    Continue Reading

    LATEST NEWS

    Trending