Home ಪ್ರಮುಖ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 5 ಮಂದಿ ಕೊರೊನಾ ರೋಗಿಗಳು ಡಿಸ್ಚಾರ್ಜ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 5 ಮಂದಿ ಕೊರೊನಾ ರೋಗಿಗಳು ಡಿಸ್ಚಾರ್ಜ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 5 ಮಂದಿ ಕೊರೊ‌ನಾ ರೋಗಿಗಳು ಡಿಸ್ಚಾರ್ಜ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮಂದಿ ಕೊರೊ‌ನಾ ರೋಗಿಗಳು ಡಿಸ್ಚಾರ್ಜ್ ಆಗಿದ್ದು, ಹೆಚ್ಚುತ್ತಿರುವ ಕೊರೊನಾ ಭಯದಿಂದ ಕಂಗೆಟ್ಟಿದ್ದ ಜನತೆಗೆ ಇದು ಸಿಹಿ ಸುದ್ದಿಯಾಗಿ ಪರಿಣಮಿಸಿದೆ.

ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ, ಬಂಟ್ವಾಳದ 4 ಮಂದಿ ನಿವಾಸಿಗಳು ಹಾಗೂ ಬೋಳೂರಿನ ಒಬ್ಬ ನಿವಾಸಿ ಡಿಸ್ಚಾರ್ಜ್ ಆದ ಕೊರೊನಾ ರೋಗಿಗಳಾಗಿದ್ದಾರೆ.

ಈ ಮೂಲಕ ಅತೀ ದೊಡ್ಡ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಬಂಟ್ವಾಳ ತಾಲೂಕು ಇದೀಗ ಕೊರೊನಾ ಮುಕ್ತವಾಗಿದೆ.

ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆದ ರೋಗಿಗಳನ್ನು ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಬ್ಲಾಕ್ ಮುಂಭಾಗದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೀಳ್ಕೊಡಲಾಯಿತು.

ಆಂಬುಲೆನ್ಸ್ ಹತ್ತಿ ಮನೆಯತ್ತ ಹೊರಟ ಐವರನ್ನು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಮತ್ತು ಇತರ ವೈದ್ಯರು ಹಾಜರಿದ್ದರು.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 31 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, ಐಸಿಯುವಿನಲ್ಲಿ ಮೂರು ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲಾ ಕೊರೊನಾ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ ಮಾಹಿತಿ ನೀಡಿದ್ದಾರೆ.

- Advertisment -

RECENT NEWS

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ ಮಂಗಳೂರು: ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ನೇತೃತ್ವದ ವಿಚಾರಣಾ...

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆ.ಎಸ್ಆರ್ ಟಿಸಿ ಬಸ್

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್ ಉಡುಪಿ: ಕೆಎಸ್ ಆರ್ ಟಿ ಸಿ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ...

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ: ಇಂದು ಪ್ರಪಂಚವೇ ಕೊರೊನಾ ಎಂಬ ಮಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ...

ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ: ಐವರು ಕೊರೊನಾ ವೈರಸ್ ರೋಗಿಗಳು ಸಾವು.!

ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ: ಐವರು ಕೊರೊನಾ ವೈರಸ್ ರೋಗಿಗಳು ಸಾವು.! ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ. ಬೆಂಕಿ...