Connect with us

DAKSHINA KANNADA

ಮೋದಿ ಸಮಾವೇಶದಲ್ಲಿ 9 ವರ್ಷದ ಬಾಲಕಿ ಮಿಸ್ಸಿಂಗ್‌…!

Published

on

ಮಂಗಳೂರು: ಇಂದಿನ ಮಂಗಳೂರು ಪ್ರಧಾನಿ ಸಮಾವೇಶದಲ್ಲಿ 4 ನೇ ತರಗತಿಯ ಬಾಲಕಿಯೊಬ್ಬಳು ಕಳೆದುಹೋಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕೊನೆಗೆ ಮಂಗಳೂರು ಪೊಲೀಸರ ಸಮಯಪ್ರಜ್ಞೆಯಿಂದ ಬಾಲಕಿಯನ್ನು ಪತ್ತೆ ಹಚ್ಚಿ ಪಾಲಕರ ಸುಪರ್ದಿಗೆ ಒಪ್ಪಿಸಿದರು.

ಮಂಗಳೂರು ನಗರದ ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಜ್ಯೋತಿನಗರದ ಯುಮುನಕ್ಕ ಹಾಗೂ ದೇವಕಿ ದಂಪತಿಯ 10 ವರ್ಷದ ಬಾಲಕಿ ಪೂಜಾ ಮೇಟಿ ಮೋದಿ ಸಮಾವೇಶಕ್ಕೆ ಪೋಷಕರೊಂದಿಗೆ ಬಂದಿದ್ದಳು. ಆದರೆ ಅಚಾನಕ್ಕಾಗಿ ಜನಜಂಗುಳಿಯಲ್ಲಿ ಪೋಷಕರ ಕೈ ತಪ್ಪಿ ಹೋಗಿ ಆತಂಕ ಸೃಷ್ಟಿಸಿದ್ದಳು.

ಒಬ್ಬಂಟಿ ವಿದ್ಯಾರ್ಥಿನಿಯನ್ನು ಗಮನಿಸಿದ ಮಂಗಳೂರು ನಗರ ಸಂಚಾರಿ ಎಸಿಪಿ ಗೀತಾ ಕುಲಕರ್ಣಿ ಬಾಲಕಿಯನ್ನು ವಿಚಾರಿಸಿ ಪೋಷಕರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

ಪ್ರಧಾನಿ ಕಾರ್ಯಕ್ರಮದ ಭದ್ರತೆಯ ಒತ್ತಡದ ನಡುವೆಯೂ ಪುಟ್ಟ ಬಾಲಕಿಯನ್ನು ಪೋಷಕರ ಮಡಿಲಿಗೆ ಸೇರಿಸಿದ ಮಂಗಳೂರು ಪೊಲೀಸರ ಸಮಯೋಚಿತ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

DAKSHINA KANNADA

ಬಿಜೆಪಿಗೆ ಸವಾಲಾದ ಬಿರುವೆರ್..! ವರ್ಕೌಟ್‌ ಆಗಿಲ್ಲ ನಮೋ ಪ್ಲ್ಯಾನ್‌…!

Published

on

ಮಂಗಳೂರು : 33 ವರ್ಷದ ಬಳಿಕ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪ್ರಚಾರದ ವೈಖರಿ ಹಾಗೂ ಪಡೆದುಕೊಳ್ಳುತ್ತಿರುವ ಜನಪ್ರೀಯತೆ ಒಂದು ಕಾರಣವಾದ್ರೆ. ಬಿಜೆಪಿಯಲ್ಲಿದ್ದ ಬಿಲ್ಲವ ಸಮೂದಾಯದ ಬಹುದೊಡ್ಡ ಮತದಾರರು ಪದ್ಮರಾಜ್ ಕಡೆ ವಾಲಿರುವುದು ಮತ್ತೊಂದು ಕಾರಣ . ಈ ಎರಡು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಯಿಸಿ ಅವರ ಮೂಲಕ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಮಾಡಿಸಲಾಗಿದೆ.

ಎಚ್ಚರಿಕೆ ನೀಡಿದ್ದ ನಾರಾಯಣಗುರು ವಿಚಾರ ವೇದಿಕೆ..!

ಬಿಲ್ಲವರನ್ನು ಓಲೈಸಿಕೊಳ್ಳಲು ಬಿಜೆಪಿಗೆ ಇದ್ದ ಒಂದೇ ಮಾರ್ಗ ಅಂದ್ರೆ ಅದು ನಾರಾಯಣಗುರು.  ಆ ಒಂದು ಕಾರಣ ಇಟ್ಟುಕೊಂಡು ಕಾರಣಾಂತರದಿಂದ ಸಮಾವೇಶ ರದ್ಧು ಮಾಡಿ ರೋಡ್‌ ಶೋ ನಡೆಸಲಾಗಿತ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿ ಬಳಿಕ ರೋಡ್‌ ಶೋ ಮಾಡುವ ಬಗ್ಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಆದ್ರೆ ಈ ವಿಚಾರ ತಿಳಿಯುತ್ತಿದ್ದಂತೆ ನಾರಾಯಣಗುರು ವಿಚಾರ ವೇದಿಕೆ ಮೂಲಕ ಸತ್ಯಜಿತ್‌ ಸುರತ್ಕಲ್‌ ಬಿಜೆಪಿ ನಾಯಕರಿಗೆ ಹಲವು ಸವಾಲು ಎಸೆದಿದ್ದರು.  ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ, ರಾಜ್ಯದಲ್ಲಿ ಪಠ್ಯದಿಂದ ನಾರಾಯಣಗುರುಗಳ ಪಾಠ ತೆಗೆದು ಹಾಕಿರುವುದು ಹಾಗೂ ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಉತ್ತರ ನೀಡಿ ಎಂದು ಆಗ್ರಹಿಸಿದ್ದರು.  ಇಷ್ಟೆಲ್ಲಾ ಮಾಡಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಬಿಜೆಪಿಯ ನಿರ್ಧಾರವನ್ನು ಟೀಕಿಸಿದ್ದರು.

 

ಬಿಲ್ಲವರ ಕಡೆಗಣನೆ ಮಾಡಿದ ಬಿಜೆಪಿ ನಾಯಕರು…!

ಪ್ರಧಾನಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ್ರೆ ಎಲ್ಲವೂ ಸರಿಯಾಗಲಿದೆ ಅಂದುಕೊಂಡಿದ್ದರು. ಆದ್ರೆ ಬಹುತೇಕ ಬಿಲ್ಲವರು ಮೋದಿ ಕಾರ್ಯಕ್ರಮದ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಧಾನಿ ಮೋದಿ ಗುರುಗಳಿಗೆ ಹಾರ ಹಾಕುವಾಗ ಮಾಡಿದ ಆ ಒಂದು ತಪ್ಪು ಬಿಲ್ಲವ ಸಮೂದಾಯದ ಜನರ ಮನಸಿಗೆ ನೋವುಂಟು ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ ನಾರಾಯಣ ಗುರು ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಬಿರುವೆರ ಕುಡ್ಲದ ಮುಖಂಡ ಉದಯ ಪೂಜಾರಿಯನ್ನು ಕಡೆಗಣಿಸಿದ್ದೂ ಬಿಲ್ಲವ ಯುವಕರಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಗುರು ಪೀಠದ ಮೇಲೆ ಕಾಲಿರಿಸಿದ ಪ್ರಧಾನಿ..!

ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲಿರಿಸಿದ್ದರು. ಇದು ಬಿಲ್ಲವರ ಸ್ವಾಭಿಮಾನದ ಮೇಲೆ ಸ್ಥಳಿಯ ಬಿಜೆಪಿಯ ನಾಯಕರು ಇಟ್ಟ ಕಾಲು ಎಂದು ಟೀಕೆ ವ್ಯಕ್ತವಾಗಿದೆ. ಬಿರುವೆರ ಕುಡ್ಲದ ಉದಯ ಪೂಜಾರಿಯನ್ನು ಕಡೆಗಣಿಸಿದ್ದಲ್ಲದೆ, ಮೋದಿಯವರಿಗೆ ಸರಿಯಾದ ಮಾರ್ಗದರ್ಶನ ನೀಡದೆ ಈ ಪ್ರಮಾದ ಆಗಿದೆ. ಪ್ರಧಾನಿ ಮೋದಿಯ ಮೇಲೆ ಇರುವ ಅಭಿಮಾನ ಬಿಟ್ಟು ಕೊಡದ ಬಿಲ್ಲವ ಯುವಕರು ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲು ಇರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಕಾಂಗ್ರೆಸ್‌ ಪಕ್ಷ ಕೂಡಾ ಅಸ್ತ್ರವಾಗಿ ಬಳಸಿಕೊಂಡಿದೆ.

 

ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಹೋಗಿ ಬಿಜೆಪಿ ಯಡವಟ್ಟು…!

ಪದ್ಮರಾಜ್‌ ಪೂಜಾರಿ ಅವರಿಗೆ ಟಿಕೇಟ್‌ ಸಿಕ್ಕ ಸಮಯದಲ್ಲಿ ಭಾಷಣ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಪದ್ಮರಾಜ್‌ ಪೂಜಾರಿ ದೇಶ ದ್ರೋಹಿ ಎಂದು ಕರೆದಿದ್ದರು . ಆ ಒಂದು ಹೇಳಿಕೆಯ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಬಿಜೆಪಿ ನಾಯಕರು ಹಲವಾರು ಸರ್ಕಸ್‌ ಮಾಡಿದ್ದಾರೆ. ಜನಾರ್ಧನ ಪೂಜಾರಿ ಕಾಲಿಗೆ ಬಿದ್ದ ಬೃಜೇಶ್‌ ಚೌಟ ಒಂದು ರೀತಿಯಲ್ಲಿ ಬಿಲ್ಲವರ ಮನ ಒಲಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಆದರೆ ಅದಾಗಲೇ ಬಿಲ್ಲವ ಯುವಕರು ಅದೇನೇ ಆದ್ರೂ ಈ ಬಾರಿ ಪದ್ಮರಾಜ್‌ ಪೂಜಾರಿ ಗೆಲ್ಲಿಸುವ ಪಣತೊಟ್ಟಿದ್ದಾರೆ. ಬಿಜೆಪಿ ಮತಗಳು ಕೇವಲ ಜಾತಿ ಹೆಸರಿನಲ್ಲಿ ಕಾಂಗ್ರೆಸ್‌ ಪಾಲಾಗಲಿದೆ ಅನ್ನೋ ಆತಂಕದಲ್ಲಿ ಬಿಲ್ಲವರ  ಓಲೈಕೆಗೆ ಪ್ರಧಾನಿ ಮೋದಿಯವರನ್ನು ಕರೆಸಲಾಗಿದೆ. ಆದ್ರೆ ಈಗ ಪ್ರಧಾನಿ ಮೋದಿ ಅವರಿಂದ ಆದ ಪ್ರಮಾದ ಹಾಗೂ ಸ್ಥಳೀಯ ನಾಯಕರಿಂದ ಬಿರುವೆರ ಕುಡ್ಲದ ನಾಯಕನ ಕಡೆಗಣನೆ ಬಿಜೆಪಿಗೆ ಮುಳುವಾಗುವ ಲಕ್ಷಣ ಕಾಣಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ಬಂದು ಹೋದಾಗಿನಿಂದ ಈ ಚರ್ಚೆ ಜೋರಾಗಿ ನಡೆಯುತ್ತಿದೆ.

Continue Reading

DAKSHINA KANNADA

ನಿರ್ಮಾಣ ಹಂತದ ಸೇತುವೆ ಕುಸಿದು 7 ಮಂದಿಗೆ ಗಾಯ

Published

on

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಪಿಪ್ಪಾಡಿ ಎಂಬಲ್ಲಿ ನಡೆದಿದೆ.

ಈ ಸೇತುವೆಯ ಕೊನೆಯ ಕ್ಷಣದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಕಾಂಕ್ರಿಟ್ ಕಾಮಗಾರಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದು ಬಿದ್ದಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿ ಗಾಯಗೊಂಡವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒರ್ವ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Continue Reading

DAKSHINA KANNADA

ಮಂಗಳೂರಿನ ಮೊದಲ ಬಸ್ ಇದೇ ನೋಡಿ…!

Published

on

ಹಿಂದಿನ ಕಾಲದಲ್ಲಿ ಮಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಬೇಕಿದ್ದರೆ ಒಂದಾ ಎತ್ತಿನಗಾಡಿ ಇಲ್ಲದಿದ್ದರೆ ಕುದುರೆಗಾಡಿಯಲ್ಲಿ ಹೋಗಬೇಕಿತ್ತು. ಇದೂ ಎರಡೂ ಇಲ್ಲದಿದ್ದರೆ ನಡೆದುಕೊಂಡೇ ಹೋಗಬೇಕಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಮೊದಲ ಬಸ್ಸಿನ ಪರಿಚಯ ಆಗ್ತದೆ. ಅದು ಯಾವಾ ಬಸ್. ಎಲ್ಲೆಲ್ಲ ತಿರ್ಗಾಡುತ್ತಾ ಇತ್ತು. ನೋಡೋಣ ಬನ್ನಿ.

1914ರಲ್ಲಿ ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪೆನಿ (ಸಿಪಿಸಿ) ಇವರು ಮೊದಲ ಖಾಸಗಿ ಬಸ್ ಸಂಚಾರವನ್ನು ಪ್ರಾರಂಭ ಮಾಡ್ತಾರೆ. 1914 ಮಾರ್ಚ್‌ 23 ತಾರೀಕಿನಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಮೊದಲ ಸಿಪಿಸಿ ಬಸ್ ಹೊರಡ್ತದೆ. ಪ್ರತಿದಿನ ಕೂಡ 2 ಟ್ರಿಪ್ ಇರ್ತಾ ಇತ್ತು. ಒಂದು ಸಲಕ್ಕೆ 22 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಸಾಮಾರ್ಥ್ಯ ಈ ಬಸ್ಸಿಗೆ ಇತ್ತಂತೆ.

ವಿಶೇಷವೆಂದರೆ ಈ ಬಸ್ ಅನ್ನು ಜರ್ಮನ್‌ನಿಂದ ಮಂಗಳೂರಿಗೆ ಶಿಪ್‌ನಲ್ಲಿ ತಂದದ್ದು. ಆ ಕಾಲದಲ್ಲಿ ಅದಕ್ಕೆ 2500 ರೂಪಾಯಿ ಮಾತ್ರ ಖರ್ಚಾಗಿತ್ತು. ತದನಂತರ 1916ರಲ್ಲಿ ಹಿಂದೂ ಟ್ರಾಸಿಸ್ಟ್ ಎನ್ನುವ ಹೊಸ ಸಾರಿಗೆ ಸಂಸ್ಥೆ ಆರಂಭವಾಯಿತು. 1917ರಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬಸ್ ಸಂಚಾರ ಪ್ರಾರಂಭವಾಯಿತು. ಇದಾದ ಮೇಲೆ ಒಂದೊಂದೆ ಬಸ್ಸಿನ ಸಂಖ್ಯೆ ಎಚ್ಚಾಗುತ್ತಾ ಬಂತು.

ದುರ್ಗಾಪರಮೇಶ್ವರಿ ಮೋಟಾರ್ ಸರ್ವೀಸ್, ಶಂಕರ್ ವಿಠಲ್, ಮಂಜುನಾಥ್ ಟ್ರಾನ್ಸ್‌ಪೋರ್ಟ್‌, ಶೆಟ್ಟಿ ಮೋಟಾರ್ಸ್, ಹನುಮಾನ್ ಟ್ರಾನ್ಸ್‌ಪೋರ್ಟ್‌, ಬಲ್ಲಾಳ್ ಮೋಟಾರ್ಸ್ ಹೀಗೆ ಹಲವು ಬಗೆಯ ಖಾಸಗಿ ಸಂಸ್ಥೆಗಳು ಶುರುವಾಯಿತು. ಆ ಸಮಯದಲ್ಲಿ ಮಂಗಳೂರಿನಿಂದ ಉಡುಪಿಗೆ ಬಸ್ಸ್‌ನಲ್ಲಿ ಹೋಗಬೇಕಿದ್ದರೆ ಸಾಧಾರಣ 5 ಗಂಟೆ ಬೇಕಿತ್ತು.

ಇವತ್ತಿನ ನಮ್ಮ ಮಂಗಳೂರಿನಲ್ಲಿ ಬಸ್ ವ್ಯವಸ್ಥೆ ಎನ್ನುವಂತದ್ದು ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದ್ರೆ ಅದರ ಹಿಂದೆ ಇಷ್ಟೆಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳು ಇವೆ.

Continue Reading

LATEST NEWS

Trending