ಮಂಗಳೂರು/ಮುಂಬೈ: ಒಂದೊಮ್ಮೆ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಮೈದಾನದಲ್ಲಿ ಅಬ್ಬರಿಸುತ್ತಿದ್ದ ನವಜೋತ್ ಸಿಂಗು ಸಿಧು, ಪಸ್ತುತ ತಮ್ಮ ದಿನಗಳನ್ನು ಕುಟುಂಬದ ಜೊತೆ ಹಾಗೂ ಕಾಮಿಡಿ ಶೋಗಳಲ್ಲಿ ಕಳೆಯುತ್ತಿದ್ದಾರೆ. ಅದೇ ಸಮಯದಲ್ಲಿ ಅವರ ಧರ್ಮಪತ್ನಿ ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿ, ಅದು ನಾಲ್ಕನೇ ಹಂತಕ್ಕೆ ತಿರುತ್ತಿತ್ತು. ವೈದ್ಯರು ಪರೀಕ್ಷಿಸಿ ಆಕೆ ಬದುಕುವುದು ಅನುಮಾನ. ಬದುಕುಳಿಯುವ ಸಾಧ್ಯತೆ ಶೇ.3ರಷ್ಟು ಮಾತ್ರ ಎಂದು ಹೇಳಿದ್ದರು. ಆದರೆ, ಆಕೆ ಈಗ ಸಾವನ್ನು ಗೆದ್ದು ಬಂದಿರುವುದು ಅವಳು ಸೇವಿಸಿದ ಕಟ್ಟುನಿಟ್ಟಿನ ಆಹಾರ ಕ್ರಮ ಎಂದು ಭಾವುಕರಾಗಿ ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಅವು ಯಾವುದು ಅಂತ ಇಲ್ಲಿ ತಿಳಿಯೋಣ.
ಕೇವಲ 45 ದಿನಗಳಲ್ಲಿ ಸಂಶೋಧನೆ :
ಸಿಂಗು ಸಿಧುನ ಪತ್ನಿ ಸ್ಟೇಜ್ 4 ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಬಹಳ ಪರೂಪದ ಮೆಟಾಸ್ಟಾಸಿಸ್ ಎನ್ನಲಾಗಿತ್ತು. ಆಕೆಯನ್ನು ಗುಣಮುಖ ಮಾಡಲು ಸ್ತನ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು ಮಾತ್ರವಲ್ಲದೆ, ಪಟಿಯಾಲಾದ ರಾಜೀಂದ್ರ ಆಸ್ಪತ್ರೆ ಮತ್ತು ಯಮುನಾನಗರದ ಡಾ.ವರ್ಯಂ ಸಿಂಗ್ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದಿದ್ದಾರೆ. ಕೌರ್ ಸಿಧುಗೆ ಕ್ಯಾನ್ಸರ್ ಇರುವುದು ಗೊತ್ತಾದಾಗ ಇಡೀ ಕುಟುಂಬವು ಭಾರೀ ಸಂಶೋಧನೆಯಲ್ಲಿ ತೊಡಗಿತ್ತು. ಭಾರತೀಯ ಮತ್ತು ಯುಎಸ್ ವೈದ್ಯರು ಹಾಗೂ ಆಯುರ್ವೇದದಲ್ಲಿ ಕ್ಯಾನ್ಸರ್ ಕುರಿತು ಬರೆದ ಪುಸ್ತಕಗಳನ್ನು ಓದಿ, ಒಂದಷ್ಟು ವಿಷಯ ಅರಿತ ಕುಟುಂಬ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಬೇಕು ಎಂಬ ಸಾಮಾನ್ಯ ಅಂಶವನ್ನು ಸ್ಪಷ್ಟವಾಗಿ ತಿಳಿಯಿತು.
ಕ್ಯಾನ್ಸರ್ ಮಾಯ :
ಕೌರ್ ಇದನ್ನೆಲ್ಲ ಅರಿತುಕೊಂಡರು. ಇಂತಹ ಆಹಾರದಿಂದ ಆಕೆ ಸಂಪೂರ್ಣವಾಗಿ ದೂರ ಉಳಿದರು. ನಿಂಬೆ, ಬೇವು, ಹಸಿ ಅರಿಶಿನ, ಬೆಳ್ಳುಳ್ಳಿ ಇತ್ಯಾದಿಗಳೊಂದಿಗೆ ಬೆಚ್ಚಗಿನ ನೀರು ಮುಂತಾದ ಪ್ರಾಚೀನ ‘ದೇಸಿ’ ಪರಿಹಾರಗಳನ್ನು ಅವರು ಸೇವಿಸುತ್ತ ಬಂದರು. ಇದು ಅವರ ಆಹಾರ ಪದ್ಧತಿ ಮೇಲೆ ಉತ್ತಮ ಪ್ರಭಾವವೂ ಬೀರಿತು. ಜತೆಗೆ ಈ ಆಹಾರವು ಕ್ಯಾನ್ಸರ್ನ ಜೀವಿತಾವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಕೇವಲ 45 ದಿನಗಳಲ್ಲಿ ಪತ್ನಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಗ ಅವರಿಗೆ PET ಸ್ಕ್ಯಾನ್ ಮಾಡಿದ ವೈದ್ಯರಿಗೆ ಕ್ಯಾನ್ಸರ್ ಅಂಶ ಇರುವುದು ಪತ್ತೆಯಾಗಲಿಲ್ಲ. ವೈದ್ಯಕೀಯ ಚಿಕಿತ್ಸೆಯೊಟ್ಟಿಗೆ ಕೌರ್ ಅವರ ಇಚ್ಛಾಶಕ್ತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯೇ ಈ ಫಲಿತಾಂಶಕ್ಕೆ ಕಾರಣ ಎಂದು ಸಿಧು ಸಂತಸ ವ್ಯಕ್ತಪಡಿಸಿದರು.
ಫ್ರಿಜ್ಜಿನ್ನಲ್ಲಿರಿಸಿದ ಅಹಾರಗಳು ತಾಜಾತನವನ್ನು ಉಳಿಸಿಕೊಳ್ಳಲು ಕಾರಣವೆಂದರೆ ಶೀತಲೀಕರಣ. ಆದರೆ, ಈ ಪರಿ ಎಲ್ಲಾ ಬಗೆಯ ಅಹಾರಗಳಿಗೆ ಅನ್ವಯಿಸಲಾರದು. ಕೆಲವು ಫಲಗಳಂತೂ ಫ್ರಿಜ್ಜಿನಲ್ಲಿಟ್ಟರೇ ಸಾಕು, ಚೆನ್ನಾಗಿರುವ ಬದಲು ಹಾಳಾಗಲು ತೊಡಗುತ್ತವೆ. ಇಂದಿನ ಲೇಖನದಲ್ಲಿ ಈ ಗುಣವಿರುವ ಕೆಲವು ಫಲಗಳ ಬಗ್ಗೆ ವಿವರಿಸಲಾಗಿದೆ. ಇವನ್ನು ಫ್ರಿಜ್ಜಿನಲ್ಲಿಡುವ ಬದಲು ತಣ್ಣನೆಯ ಸ್ಥಳದಲ್ಲಿ ಗಾಳಿಯಾಡದಂತೆ ಶೇಖರಿಸಬೇಕು. ಈ ಫಲಗಳು ಯಾವುವು ಎಂಬುದನ್ನು ನೋಡೋಣ.
ಬಾಳೆಹಣ್ಣು
ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಸಂಗ್ರಹಿಸಬಾರದು. ಏಕೆಂದರೆ ಬಾಳೆಹಣ್ಣಿನ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾದರೆ, ಇದರ ಸಿಪ್ಪೆ ಶೀಘ್ರವೇ ಕಪ್ಪಾಗುತ್ತದೆ ಹಾಗೂ ಸಿಪ್ಪೆಯ ಅಡಿಯಲ್ಲಿನ ತಿರುಳು ಕೂಡಾ ಕೊಳೆಯಲು ತೊಡಗುತ್ತದೆ.
ಕಲ್ಲಂಗಡಿ
ಬೇಸಿಗೆಯಲ್ಲಿ ಜನರು ಅತಿ ಹೆಚ್ಚಾಗಿ ಇಷ್ಟಪಡುವ ಫಲವಾದ ಕಲ್ಲಂಗಡಿಯನ್ನೂ ಫ್ರಿಜ್ಜಿನಲ್ಲಿ ಇರಿಸಬಾರದು. ಆದರೆ, ಸಾಮಾನ್ಯವಾಗಿ ಕಲ್ಲಗಂಡಿ ದೊಡ್ಡ ಗಾತ್ರದಲ್ಲಿದ್ದು ಇದನ್ನು ಕತ್ತರಿಸಿದಾಗ ದೊರಕುವ ಆಗಾಧ ಪ್ರಮಾಣವನ್ನು ಫ್ರಿಜ್ಜಿನಲ್ಲಿ ಸಂಗ್ರಹಿಸದೇ ಬೇರೆ ಮಾರ್ಗವಿಲ್ಲ. ಆದರೆ, ನಿಸರ್ಗಕ್ಕೆ ನಿಮ್ಮ ಈ ಅಗತ್ಯತೆಯ ಅರಿವಿಲ್ಲ. ಸೇಬನ್ನು ಕತ್ತರಿಸಿ ಕೊಂಚ ಹೊತ್ತು ಇರಿಸಿದಾಗ ಗಾಳಿಗೆ ತೆರೆದ ಭಾಗ ಕಪ್ಪಗಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿಯೂ ಹೀಗೇ, ಗಾಳಿಗೆ ಒಡ್ಡಿದ ಭಾಗದ ಆಂಟಿ ಆಕ್ಸಿಡೆಂಟುಗಳು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶೀಘ್ರವೇ ಹುಳಿಯಾಗುತ್ತದೆ.
ಸೇಬು
ಸೇಬು ಹಣ್ಣುಗಳು 90% ತೇವಾಂಶವನ್ನು ಹೊಂದಿರುವ ಪರಿಸರದಲ್ಲಿ ಹೆಚ್ಚು ಹೊತ್ತು ಕೆಡದೇ ತಾಜಾತನವನ್ನುಉಳಿಸಿಕೊಳ್ಳುತ್ತವೆ. ಆದರೆ ನಮ್ಮ ರೆಫ್ರಿಜರೇಟರ್ ನೈಸರ್ಗಿಕ ಡಿಹೈಡ್ರೇಟರ್ ಅಥವಾ ತೇವಾಂಶ ಇರದ ಸ್ಥಳವಾಗಿದೆ. ಹಾಗಾಗಿ, ಫ್ರಿಜ್ಜಿನಲ್ಲಿಟ್ಟ ಸೇಬು ತೇವಾಂಶದ ಕೊರತೆಗೆ ಒಡ್ಡಿಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಸೇಬಿನಲ್ಲಿರುವ ಇಥೈಲೀನ್ ಹಾಗೂ ಇತರ ಕಿಣ್ವಗಳು ತಿರುಳನ್ನು ಅತಿ ಶೀಘ್ರವಾಗಿ ಹಣ್ಣಾಗಿಸುತ್ತವೆ ಹಾಗೂ ಕೊಳೆಯಲು ಪ್ರಾರಂಭಿಸುತ್ತದೆ.
ಮಾವಿನ ಹಣ್ಣು
ಮಾವಿನ ಹಣ್ಣನ್ನು ಫ್ರಿಜ್ಜಿನಲ್ಲಿ ಇರಿಸಿದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ತಗ್ಗತೊಡಗುತ್ತದೆ. ಹಾಗಾಗಿ ಮಾವಿನ ಹಣ್ಣಿನ ಪೌಷ್ಟಿಕ ಮೌಲ್ಯಗಳು ಕಡಿಮೆಯಾಗುತ್ತವೆ. ಈ ಹಣ್ಣುಗಳನ್ನು ಫ್ರಿಜ್ಜಿನಲ್ಲಿರಿಸಿದರೆ ಮಾವಿನ ಹಣ್ಣು ವಿಷಕಾರಿ ಯಾಗ ಬಹುದು. ಬದಲಿಗೆ ಇನ್ನೂ ಕಾಯಿಯಾಗಿರುವ ಮಾವು ಗಳನ್ನು ತಂದು ಬೆಚ್ಚಗಿರುವ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ ಒಂದೆರಡು ದಿನಗಳ ಬಳಿಕ ಸ್ವಾಭಾವಿಕವಾಗಿ ಹಣ್ಣಾಗುವಂತೆ ಮಾಡಿ ಸೇವಿಸಿ.
ಲಿಚ್ಚಿ
ಬೇಸಿಗೆಯಲ್ಲಿ ಸೇವಿಸಲು ರುಚಿಕರವಾದ ಚಿಕ್ಕ ಗೋಲಿಗ ಳಂತಿರುವ ಲಿಚ್ಚಿ ಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಇರಿಸ ಬಾರದು. ಏಕೆಂದರೆ, ತಂಪಾದ ತಾಪಮಾನದಲ್ಲಿ ಇದರ ತಿರುಳು ಕೊಳೆಯಲು ಆರಂಭಿಸುತ್ತದೆ. ಆದರೆ, ಸಿಪ್ಪೆ ಮಾತ್ರ ಹಾಳಾಗದೇ ಹಾಗೇ ಉಳಿದಿರುತ್ತದೆ. ಫ್ರಿಜ್ಜಿ ನಿಂದ ತೆಗೆದು ನೋಡಿದ ಲಿಚ್ಚಿಯ ಸಿಪ್ಪೆ ಚೆನ್ನಾಗಿರು ವಂತೆಯೇ ಕಂಡುಬಂದರೂ ಒಳಗಿನ ತಿರುಳು ಕೊಳೆತಿರುತ್ತದೆ.
ಕೋಳಿ ಮಾಂಸವು ಪ್ರೋಟಿನ್ ಭರಿತ ಆಹಾರವಾಗಿದೆ ಮತ್ತು ಮಾಂಸಾಹಾರಿಗಳ ಫೇವರೆಟ್ ಫುಡ್ ಎಂದರೆ ತಪ್ಪಾಗಲಾರದು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಚಿಕನ್ ಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಮಾಂಸಪ್ರಿಯರು ಕೋಳಿಯ ಅಂಗಾಂಗಗಳನ್ನು ವಿವಿಧ ರೀತಿಯಲ್ಲಿ ಸಾರು, ಫ್ರೈ, ಸುಕ್ಕಾ ಸೇರಿದಂತೆ ಮುಂತಾದ ಅಡುಗೆ ಮಾಡಿ ತಿನ್ನುವರು. ಆದರೆ ನಿಮಗೆ ತಿಳಿದಿದೆಯೇ? ಕೋಳಿಮಾಂಸದ ಕೆಲವು ಭಾಗಗಳನ್ನು ತಿನ್ನಬಾರದು. ಏಕೆ ಎಂಬುದನ್ನು ತಿಳಿಸುತ್ತೇವೆ.
ಯಾವ ಭಾಗ ತಿನ್ನಬಾರದು ?
ಚಿಕನ್ ಸ್ಕಿನ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿ ಹೆಚ್ಚಿನ ಕೊಬ್ಬು ಇರುವುದು ಮಾತ್ರವಲ್ಲದೇ ಚಿಕನ್ ಫ್ರೆಶ್ ಆಗಿರಲು ಕೆಮಿಕಲ್ಸ್ ಬಳಸಿರುತ್ತಾರೆ. ಆದ್ದರಿಂದ ಕೋಳಿಯ ಚರ್ಮವನ್ನು ತಿನ್ನಬಾರದು ಎಂದು ಹೃದ್ರೋಗ ತಜ್ಞರು ಸಲಹೆ ನೀಡುತ್ತಾರೆ.
ನಾಟಿ ಕೋಳಿ
ನಾಟಿ ಕೋಳಿಯು ತಿನ್ನಲು ಯೋಗ್ಯವಾಗಿದ್ದು ಅದಕ್ಕೆ ಯಾವುದೇ ರೀತಿಯ ಕೆಮಿಕಲ್ಸ್, ಇಂಜೆಕ್ಷನ್ ಕೊಟ್ಟು ಬೆಳೆಸಿರುವುದಿಲ್ಲ. ಆದರೆ ಫಾರಂ ಚಿಕನ್‌ಗೆ ಅಧಿಕವಾದ ಸಿರಿಂಜ್ ಬಳಕೆ ಮತ್ತು ಅದು ಬೇಗ ಬೆಳೆಯಲು ಔಷಧಗಳನ್ನು ನೀಡುತ್ತಾರೆ ಎನ್ನಲಾಗುತ್ತದೆ. ಆದ್ದರಿಂದ ಆದಷ್ಟು ನಾಟಿ ಕೋಳಿಯನ್ನು ತಿನ್ನಿರಿ.
ಸ್ಕಿನ್ ಸಂಪೂರ್ಣ ಹಾನಿಕಾರಕವೇ ?
ಚಿಕನ್ ಸ್ಕಿನ್‌ನಲ್ಲಿ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಂಶವಿದೆ. ಹಾಗಾಗಿ ಕೋಳಿ ಮಾಂಸವನ್ನು ಪ್ರತಿನಿತ್ಯ ಸೇವಿಸದೆ 15 ದಿನಕ್ಕೊಮ್ಮೆ ತಿನ್ನುವುದು ಉತ್ತಮ. ಅಧಿಕ ರಕ್ತದೊತ್ತಡ ಇರುವವರು ಕೋಳಿಯ ಚರ್ಮವನ್ನು ತಿನ್ನಬಾರದು.
ಕೋಳಿಯ ಎದೆಯ ಭಾಗವು ಹೆಚ್ಚಿನ ಪ್ರೋಟಿನ್ ಹೊಂದಿದ್ದು, ಆರೋಗ್ಯಕ್ಕೆ ಒಳ್ಳೆಯದು. ತೂಕ ನಿಯಂತ್ರಣಕ್ಕೆ ಇದು ಸಹಕಾರಿ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಕೋಳಿ ಎದೆ ತುಂಬಾ ಒಳ್ಳೆಯದು. ಕೋಳಿಯ ತೊಡೆಯ ಭಾಗವನ್ನು ತಿಂದರೂ ತುಂಬಾ ಒಳ್ಳೆಯದು.
ಮಂಗಳೂರು: ಎಲ್ಲಾ ರೀತಿಯ ಹಣ್ಣುಗಳಲ್ಲಿ ಒಂದಲ್ಲಾ ಒಂದು ವಿಶಿಷ್ಟವಾದ ಗುಣಗಳಿರುತ್ತವೆ. ಹಣ್ಣುಗಳು ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು, ವಿಟಮಿನ್ ಗಳನ್ನು ನೀಡುತ್ತವೆ. ಅದರಲ್ಲೂ ಪ್ರಾಕೃತಿಕವಾಗಿ ಸಿಗುವ ಹಣ್ಣುಗಳು ಮನುಷ್ಯನ ದೇಹವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಕೆಲವು ಹಣ್ಣುಗಳು ನಮ್ಮ ಮನೆಯಲ್ಲೇ ಬೆಳೆದರು ನಾವು ತಿನ್ನುವುದಿಲ್ಲ. ನಮ್ಮ ಮನೆ ಹತ್ತಿರವೇ ಸಿಗುವ ಪಪ್ಪಾಯ ಹಣ್ಣನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಅದರಲ್ಲೂ ಕಾಯಿ ಪಪ್ಪಾಯಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ, ಅದರಲ್ಲಿರುವ ಪ್ರಯೋಜನಗಳನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.
ಕಾಯಿ ಪಪ್ಪಾಯಿಯಲ್ಲಿ ಅಡಗಿದೆ ಆರೋಗ್ಯಕರ ಲಕ್ಷಣಗಳು:
ಪಪ್ಪಾಯಿ ಹಣ್ಣಿನ ಸೇವನೆಯಿಂದ ಅನೇಕ ಪ್ರಯೋಜನಗಳು ಇವೆ. ಅದರಲ್ಲೂ ಕಾಯಿ ಪಪ್ಪಾಯಿ ಹಣ್ಣು ತಿಂದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು. ಪಪ್ಪಾಯಿ ಹಣ್ಣು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಕಾಯಿ ಪಪ್ಪಾಯಿಯನ್ನು ತಿನ್ನುವುದಕ್ಕೆ ಕಹಿ ಎಂದು ಹಿಂದೆ ಸರಿದು ಬಿಡುತ್ತಾರೆ. ಬೇವಿನ ಗಿಡ ಕಹಿಯಾದರು ಕೂಡ ಅದರಿಂದ ಒಳ್ಳೆಯ ಆರೋಗ್ಯ ಗುಣಲಕ್ಷಣಗಳು ಇರುವುದು ತಿಳಿದೇ ಇದೆ. ಅದೇ ರೀತಿ ಕಾಯಿ ಪಪ್ಪಾಯದಲ್ಲೂ ಆರೋಗ್ಯಕರ ಪ್ರಯೋಜನಗಳಿವೆ.
ಕಾಯಿ ಪಪ್ಪಾಯಿ ಹಣ್ಣನ್ನು ಸಾಂಬರು ಅಥವಾ ಜ್ಯೂಸ್ ಮಾಡಿ ಬೇಕಾದರೂ ಕುಡಿಯಬಹುದು. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಕೆಲವರು ಹೊರಗಡೆಯ ಜಂಕ್ ಫುಡ್ ಆಹಾರ ತಿಂದು ದಪ್ಪವಾಗುವುದು ಸಾಮಾನ್ಯ. ಪಪ್ಪಾಯ ಕಾಯಿ ಹಣ್ಣನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮೃದ್ದವಾದ ವಿಟಮಿನ್ ಹಾಗೂ ಮಿನರಲ್ಸ್ ಗಳು ಸಿಗುತ್ತವೆ.
ದೇಹದಲ್ಲಿ. ಗಾಯಗಳಿದ್ದರೆ ವಾಸಿಯಾಗುತ್ತದೆ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ.
ಈ ಎಲ್ಲಾ ಲಾಭಗಳನ್ನು ಕಾಯಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಪಡೆಯಬಹುದು. ಹಣ್ಣುಗಳ ಸೇವನೆಯಿಂದ ಆರೋಗ್ಯ ವೃದ್ದಿಗೆ ಕಾರಣವಾಗುತ್ತದೆ. ಹಾಗಾಗಿ ಹೊರಗಿನ ಜಂಕ್ ಫುಡ್ ಗೆ ಮಾರುಹೋಗುವ ಬದಲು, ಹಣ್ಣು-ಹಂಪಲು ತಿನ್ನುವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.