Monday, July 4, 2022

ಜೈಲಿನಲ್ಲಿರುವ ಪುತ್ರನಿಗೆ 4500 ರೂಪಾಯಿ ಮನಿಆರ್ಡರ್‌ ಮಾಡಿದ ಶಾರುಖ್​ ಖಾನ್

ಮುಂಬೈ: ಡ್ರಗ್ಸ್​​​​ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲಿನಲ್ಲಿರುವ ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ 4,500 ರೂ. ಮನಿ ಆರ್ಡರ್​ ಮಾಡಲಾಗಿದೆ.


ಆರ್ಯನ್​ ಖಾನ್​​​ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ಆದೇಶ ತೀರ್ಪು ಅಕ್ಟೋಬರ್​​ 20ಕ್ಕೆ ಮುಂದೂಡಿಕೆಯಾಗಿದೆ.

ಹೀಗಾಗಿ, ಮತ್ತೊಂದು ವಾರ ಜೈಲಿನಲ್ಲಿ ಕಳೆಯಬೇಕಾಗಿರುವುದರಿಂದ ಆತನಿಗೆ ಜೈಲಿನಲ್ಲಿ ತನ್ನಿಷ್ಟದ ಆಹಾರ ಹಾಗೂ ಇತರೆ ವಸ್ತು ಖರೀದಿ ಮಾಡಲು 4,500 ರೂ. ಮನಿ ಆರ್ಡರ್ ಮಾಡಲಾಗಿದೆ. ಜೈಲಿನಲ್ಲಿರುವ ವ್ಯಕ್ತಿಗೆ ಗರಿಷ್ಠ ಇಷ್ಟು ಹಣ ಮನಿ ಆರ್ಡರ್ ಮಾಡಬಹುದಾಗಿದೆ.

ಇದರ ಜೊತೆಗೆ ವಾರದಲ್ಲಿ 2 ಸಲ ಪೋಷಕರೊಂದಿಗೆ ವಿಡಿಯೋ ಕಾಲ್​ ಮೂಲಕ 10 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ.

ಹೀಗಾಗಿ, ಪೋಷಕರಾದ ಶಾರುಖ್ ಖಾನ್​ ಹಾಗೂ ಗೌರಿ ಅವರ ಜೊತೆ ಮಾತನಾಡಿದ್ದಾಗಿ ತಿಳಿದು ಬಂದಿದೆ. ಜಾಮೀನು ಅರ್ಜಿ ಮೇಲಿಂದ ಮೇಲೆ ಮುಂದೂಡಿಕೆಯಾಗುತ್ತಿರುವ ಕಾರಣ ಈಗಾಗಲೇ ಆರ್ಯನ್​ ಖಾನ್​​ 12 ದಿನ ಜೈಲಿನಲ್ಲಿ ಕಳೆದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಕೊನೆಯುಸಿರು

ಬೆಳ್ತಂಗಡಿ: ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಬದ್ಯಾರು ಬಳಿ ಇಂದು ನಡೆದಿದೆ.ಕುಶಾಲಪ್ಪ ಗೌಡ (46) ಮೃತ ವ್ಯಕ್ತಿ. ಮೃತ ಕುಶಾಲಪ್ಪ ಗೌಡ ಮನೆಯ...

ಕುವೈಟ್‌-ಮಂಗಳೂರು ಪ್ರಯಾಣಿಕನ ಜೊತೆ ಸಿಬ್ಬಂದಿ ಉದ್ಧಟತನ: ಕ್ಷಮೆ ಕೇಳಿದ ಏರ್‌ಇಂಡಿಯಾ

ಮಂಗಳೂರು: ಕುವೈಟ್‌ನಿಂದ ಮಂಗಳೂರಿಗೆ ಹೊರಡುವ ವೇಳೆ ಕುವೈಟ್‌ನ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ಬಗ್ಗೆ ದೂರಿದ ಮಂಗಳೂರಿಗರೊಬ್ಬರಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕ್ಷಮೆ ಕೋರಿದ ಘಟನೆ ನಿನ್ನೆ ನಡೆದಿದೆ.ಕುವೈತ್‌ನ ಅನಿವಾಸಿ ಭಾರತೀಯ,...

ಮಂಗಳೂರು: ದೋಣಿ ಮೇಲೆತ್ತುವಾಗ ನೇತ್ರಾವತಿ ನದಿಗೆ ಬಿದ್ದ ಓರ್ವ ನಾಪತ್ತೆ ಮತ್ತಿಬ್ಬರ ರಕ್ಷಣೆ

ಬಂಟ್ವಾಳ: ದೋಣಿ ಮೇಲೆತ್ತುವಾಗ ಪ್ರವಾಹದ ರಭಸಕ್ಕೆ ದೋಣಿ ಸಮೇತ ನದಿಗೆ ಬಿದ್ದು ಓರ್ವ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆಯಲ್ಲಿ ನಿನ್ನೆ ಸಂಜೆ ನಡೆದಿದೆ.ನಾಪತ್ತೆಯಾದ ಯುವಕನನ್ನು ರಾಜು ಸಾಹ್...