ಮಂಗಳೂರು/ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು ಗುರುತಿಸಿ 45 ಜನರನ್ನು ಬೀದರ್, ಕಲಬುರಗಿ, ಯಾದಗಿರಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಇನ್ನೂ ಹಲವರನ್ನು ಗಡಿಪಾರು ಮಾಡಲು ಯೋಜಿಸಲಾಗಿದೆ. ಕೆಲವರು ನ್ಯಾಯಾಂಗ ವಶದಲ್ಲಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಪಟ್ಟಿ ಸಿದ್ದಪಡಿಸಲಾಗುವುದು. ಕೆಲವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಎನ್. ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು.
ಮಂಗಳೂರು/ಪ್ರಯಾಗ್‌ರಾಜ್ : ಈಗಾಗಲೇ ಮಹಾ ಕುಂಭಮೇಳ 2025 ಪ್ರಾರಂಭವಾಗಿದೆ. ಮಹಾ ಕುಂಭಮೇಳದ ಮೊದಲ ದಿನ, ಪುಷ್ಯ ಪೂರ್ಣಿಮೆಯಂದು ಸಾಧ್ವಿಯೊಬ್ಬರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿವೆ. ವೈರಲ್ ಆಗಿರುವ ಈ ಫೋಟೋಗಳನ್ನು ಮಹಾ ಕುಂಭಮೇಳದ ‘ಅತ್ಯಂತ ಸುಂದರ ಸಾಧ್ವಿ’ ಎಂಬುವುದಾಗಿ ವರ್ಣಿಸಲಾಗುತ್ತಿದೆ. ಹಾಗಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಂದರಿ ‘ಸಾಧ್ವಿ’ ಯಾರು ? ಅವಳ ಹಿನ್ನಲೆ ಏನು ? ಎಂದು ತಿಳಿಯೋಣ.
ಹರ್ಷ ರಿಚಾರಿಯಾ ಎಂಬ ಅತ್ಯಂತ ಸುಂದರ ಸಾಧ್ವಿಯಾಗಿ 2025 ರ ಮಹಾ ಕುಂಭಮೇಳದ ಸಂದರ್ಭ ಪ್ರಯಾಗರಾಜ್ ತಲುಪಿದ್ದಾರೆ. ಇವರು ಮೂಲತಃ ಭೋಪಾಲ್ ನಿವಾಸಿಯಾಗಿದ್ದು, ಪ್ರಸ್ತುತ ಉತ್ತರಾಖಂಡದಲ್ಲಿ ವಾಸಿಸುತ್ತಿದ್ದಾರೆ. ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಇವರು 21 ಜನವರಿ 2019 ರಂದು ಟ್ರಾವೆಲರ್ ಹರ್ಷ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜಿ ಮಹಾರಾಜ್ ಅವರ ಶಿಷ್ಯೆ ಹರ್ಷ ರಿಚಾರಿಯಾ ಎಂದು ಹೇಳಲಾಗುತ್ತಿದೆ. ಹರ್ಷ ಕೇವಲ 2 ವರ್ಷಗಳ ಹಿಂದೆ ಸಾಧ್ವಿಯಾಗಿದ್ದಾರೆ. ಹರ್ಷ ರಿಚಾರಿಯಾ ಕೂಡ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ಆಂಕರ್ ಹರ್ಷ ರಿಚಾರಿಯಾ ಎಂಬ ಹೆಸರಿನಲ್ಲಿದೆ. ಸಾಧ್ವಿ ಆಗುವ ಮೊದಲು, ಹರ್ಷ ಮಾಡೆಲ್ ಮತ್ತು ಸೆಲೆಬ್ರಿಟಿ ಆಂಕರ್ ಆಗಿದ್ದರು. ಹರ್ಷ ಆಂಕರ್-ಮಾಡೆಲ್ ಆಗಿರುವುದರ ಜೊತೆಗೆ, ಮೇಕಪ್ ಕಲಾವಿದೆ ಮತ್ತು ಯೋಗ ಬೋಧಕಿಯೂ ಆಗಿದ್ದರು. ಹರ್ಷ ರಿಚಾರಿಯಾ ಸಾಧ್ವಿಯಾಗಲು ಕಾರಣವೇನು ಎಂದು ಕೇಳಿದಾಗ ” ಮನಸ್ಸಿಗೆ ಶಾಂತಿ ಬೇಕು ಹಾಗಾಗಿ ಈ ನಿರ್ಧಾರ ಕೈಗೊಂಡಿರುವೆ” ಎಂದು ಹೇಳಿದ್ದಾರೆ. ಸನ್ಯಾಸತ್ವ ಸ್ವೀಕರಿಸುವ ವೇಳೆ ಅವರಿಗೆ 30 ವರ್ಷ ವಯಸ್ಸು. “ತಾನು ಉತ್ತರಾಖಂಡದಿಂದ ಬಂದಿದ್ದೇನೆ. ಆಚಾರ್ಯ ಮಹಾಮಂಡಲೇಶ್ವರ ಜಿ ಅವರ ಶಿಷ್ಯೆ” ಎಂದು ಮಹಾಕುಂಭ ಮೇಳದಲ್ಲಿ ಹೇಳಿಕೊಂಡಿದ್ದಾರೆ.
ಮಂಗಳೂರು/ಬೆಂಗಳೂರು : ‘ಕನ್ನಡ ಬಿಗ್ ಬಾಸ್ ಸೀಸನ್ 11’ ಇದೀಗ ಫಿನಾಲೆ ಹಂತಕ್ಕೆ ತಲುಪುತ್ತಿದ್ದು, ಎಲಿಮಿನೇಷನ್ ನಿಂದ ಪಾರಗಲು ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗಳನ್ನು ಆಡುತ್ತಿದ್ದಾರೆ. ಆದರೆ, ಎಲಿಮಿನೇಷನ್ ನಿಂದ ಸೇಫ್ ಆಗಿದ್ದ ಧನರಾಜ್ ಅವರು ಟಾಸ್ಕ್ ನ ಮೋಸದಿಂದ ಗೆದ್ದ ಆರೋಪ ಇದೆ.
ಕನ್ನಡದ ಬಿಗ್ ಬಾಸ್ ಶುರುವಾಗಿ ಇಂದಿಗೆ 109 ದಿನಗಳು ಆಗಿವೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದ್ರೆ, ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲೇ ಮೋಸದಾಟ ಆಡಿದ್ದಾರೆ.
ಸದ್ಯ, ಬಿಗ್ ಬಾಸ್ ಮನೆಯಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಗೌಡ, ಮಂಜು, ಗೌತಮಿ, ರಜತ್, ಹನುಮಂತ ಹಾಗೂ ಧನರಾಜ್ ಇದ್ದಾರೆ. ಆದರೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್ ವೊಂದು ಎದುರಾಗಿದೆ.
ಈ ವಾರದ ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.
ಹೀಗಾಗಿ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನು ಸ್ಪರ್ಧಿಗಳು ಕಷ್ಟಪಟ್ಟು ಆಡುತ್ತಿದ್ದರು. ಇದರಲ್ಲಿ ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್ ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ಮಿಡ್ ವೀಕ್ ನಾಮಿನೇಷನ್ ನಿಂದ ಸೇಫ್ ಆಗಿದ್ದರು.
ನಿನ್ನೆ (ಜ.15) ನಡೆದ ಎಪಿಸೋಡ್ ನಲ್ಲಿ ಯಾವುದೇ ಮಿಡ್ ವೀಕ್ ಎಲಿಮಿನೇಷನ್ ನಡೆಸಿರಲಿಲ್ಲ ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸದಾಟ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಈ ಬಗ್ಗೆ ಖುದ್ದು ಬಿಗ್‌ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚಿಟ್ಟಿದ್ದಾರೆ. ಬಿಗ್‌ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಕನ್ನಡಿಯನ್ನು ನೋಡಿ ಫಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿದೆ. ಬಿಗ್‌ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಜೊತೆಗೆ ಬಿಗ್‌ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಗಲಿಲ್ಲ. ಆ ಗೆಲುವು ನನ್ನದಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಧನರಾಜ್ ಅವರಿಗೆ ಎಲಿಮಿನೇಷನ್ ಶಿಕ್ಷೆ ಸಿಕ್ಕಿತೇ ಎನ್ನುವ ಪ್ರಶ್ನೆ ಉಂಟಾಗಿದೆ.
ಕಿಂಡರ್ ಜಾಯ್ ಮಕ್ಕಳ ಫೆವರೇಟ್ ತಿಂಡಿಯಲ್ಲಿ ಒಂದಾಗಿದ್ದು, ಇದೀಗ ಮಕ್ಕಳು ಅದರಿಂದಲೇ ಕಾಯಿಲೆಗೆ ತುತ್ತಾಗುವ ಸದ್ಯತೆ ಹೆಚ್ಚಾಗುತ್ತಿದೆ. ಕಿಂಡರ್ ಜಾಯ್‌ನಲಗಲಿ ಅತ್ಯಂತ ವಿಷಕಾರಿ ಅಂಶ ಇರುವುದನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಹಚ್ಚಿದ್ದು, ಈ ತಿಂಡಿಯನ್ನು ಮಕ್ಕಳಿಗೆ ತಿನ್ನಿಸಬಾರದೆಂದು ಎಚ್ಚರಿಕೆ ನೀಡಿದೆ.
ಸಾಲ್ಮೋನಿಲ್ಲ ಎಂಬ ಅತ್ಯಂತ ವಿಷಕಾರಿ ಅಂಶವಿರುವ ಬ್ಯಾಕ್ಟೀರಿಯಾ ಕಿಂಡರ್ ಜಾಯ್ ತಿಂಡಿಯಲ್ಲಿ ಇದೆ ಎಂಬ ಅಂಶವನ್ನು ವಿಶ್ವ ಆರೋಗ್ಯ (Health) ಸಂಸ್ಥೆ ಬಹಿರಂಗಪಡಿಸಿದೆ.
ಸಾಮಾನ್ಯವಾಗಿ ಹಂದಿ, ಕೋಳಿ,ದನ ಹಾಗೂ ಇನ್ನಿತರ ಕಾಡು ಪ್ರಾಣಿಗಳಲ್ಲಿ ಇರುವ ಕೊಬ್ಬಿನಂಶದ ಈ ಸಾಲ್ಮೋನಿಲ್ಲ ಬ್ಯಾಕ್ಟೀರಿಯ ಇದೀಗ ಮಕ್ಕಳ ಫೇವರೆಟ್ ತಿಂಡಿ ಕಿಂಡರ್ ಜಾಯ್ ನಲ್ಲೂ ಪತ್ತೆಯಾಗಿದ್ದು ಈ ತಿಂಡಿಯನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಿಂದಲ್ಲಿ ಮಕ್ಕಳಿಗೆ ವಿಪರೀತ ಜ್ವರ, ತಲೆನೋವು,ಹೊಟ್ಟೆ ನೋವು, ಅತಿಸಾರ, ಪಿತ್ತಕೋಶ,ಕರುಳು ಸಂಬಂಧಿ ರೋಗ,ನಿಶಕ್ತತೆ, ದೇಹದ ಬೆಳವಣಿಗೆ ಕುಂಠಿತ ಇತ್ಯಾದಿ ರೋಗಗಳು ಬಾಧಿಸುತ್ತವೆ. ಅದೇ ರೀತಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೂಡ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಈ ತಿಂಡಿಯನ್ನು ಮಕ್ಕಳಿಗೆ ತಿನ್ನಿಸಬೇಡಿ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದೆ.